ಅಜ್ಜಿ ಕಥೆ (ನೈಯಪ್ಪದ ಆಸೆ )

ಒಂದು ಊರಲ್ಲಿ ಒಬ್ಬ ಅಜ್ಜ ಅಜ್ಜಿ ವಾಸವಾಗಿದ್ದರು, ಅಜ್ಜ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು, ಒಂದು ದಿನ ಅಜ್ಜನಿಗೆ ನೈಯ್ಯಪ್ಪ ಮಾಡಿ ತಿನ್ನಬೇಕು ಅಂತ ಆಸೆ ಆಯಿತು, ಅದಕ್ಕೋಸ್ಕರ ಅಂಗಡಿಗೆ ಹೋಗಿ ಬೇಕಾದ ಸಾಮಾನುಗಳನ್ನು ತಂದು ಅಜ್ಜಿಯ ಕಯ್ಯಲ್ಲಿ ಕೊಟ್ಟರು, ನೀನು ನೆಯ್ಯಪ್ಪ ಮಾಡು ಅಷ್ಟರಲ್ಲಿ ನಾನು ಸ್ನಾನ ಮಾಡಿ ಬರುತ್ತೇನೆ ಅಂತ ಕೆರೆ ಕಡೆ ಹೋದರು, ಅಜ್ಜಿ ಅಕ್ಕಿ, ಬೆಲ್ಲವನ್ನು ನ್ನು ಅರೆದು ನೆಯ್ಯಪ್ಪ ಮಾಡಲು ಶುರುಮಾಡಿದಳು, ಮೊದಲಿಗೆ ಮಾಡಿದ ನೆಯ್ಯಪ್ಪ ದ ರುಚಿಯನ್ನು ನೋಡಿದಳು, ಬಹಳ ರುಚಿಯಾಗಿದೆ ಅಂತ ಒಂದರಂತೆ ಒಂದು ತಿನ್ನುತ್ತಾ ಬಂದಳು.

ಕೊನೆಗೆ ಮೂರು ನೆಯ್ಯಪ್ಪ ಬಾಕಿ ಆಯಿತು. ಇದು ಅಜ್ಜನಿಗಿರಲಿ ಅಂತ ತೆಗೆದಿಟ್ಟಲು.ಅಜ್ಜ ಬಾರಿ ಆಸೆಯಿಂದ ಬಂದು ಕುಳಿತ, ಅವಾಗ ಅಜ್ಜಿಗೂ ಆಸೆ ಮುಗಿಯಲಿಲ್ಲ, ಅವಳು ಸುಳ್ಳು ಹೇಳ್ತಾಳೆ, ಎಲ್ಲಾ ನೆಯ್ಯಪ್ಪ ಕರಟಿ (ಕರೆoಚಿ ) ಹೋಯ್ತು ಮೂರು ಮಾತ್ರ ಬಾಕಿಯಾಗಿದೆ ಅಂತ. ಅವಾಗ ಅಜ್ಜ ಹೇಳ್ತಾನೆ ಪರವಾಗಿಲ್ಲ ನಾನು ಅಲ್ವಾ ಕೆಲಸಕ್ಕೆ ಹೋಗಿ ಸಾಮಾನು ತಂದದ್ದು ನನಗೆ ಎರಡು ಮತ್ತು ನೀನು ಒಂದು ತಗೋ ಅಂತ. ಅದಕ್ಕೆ ಅಜ್ಜಿ ಏಯ್ ಅದು ಆಗೋದಿಲ್ಲ ಇದನ್ನು ಮಾಡಲು ಕಷ್ಟ ಪಟ್ಟದ್ದು ನಾನು ನನಗೆ ಎರಡು, ನಿಮಗೆ ಒಂದು ಅಂತ ಹೇಳುತ್ತಾಳೆ. ಇಬ್ಬರ ಹಠ ಮುoದುವರಿದು ಕೊನೆಗೆ ಒಂದು ತೀರ್ಮಾನಕ್ಕೆ ಬರುತ್ತಾರೆ.

ಅದೇನೆಂದರೆ, ಯಾರು ಮೊದಲು ಮಾತನಾಡುತ್ತಾರೆ ಅವರಿಗೆ ಒಂದು, ಮಾತನಾಡದೆ ಗೆದ್ದವರಿಗೆ ಎರಡು ನೆಯ್ಯಪ್ಪ ಅಂತ ಹೇಳಿಕೊಂಡು, ಮೌನವಾಗುತ್ತಾರೆ, ಒಂದು ದಿನವಿಡೀ ಅಪ್ಪ ದ ಆಸೆ ಮಾತನಾಡದೆ ಕೊನೆಗೆ ಅಲ್ಲೇ ಮಲಗುತ್ತಾರೆ. ಮರುದಿನ ಬೆಳಗ್ಗೆ ಏಳುವುದಿಲ್ಲ, ಬದಲಾಗಿ ಮಾತು ಕೂಡ ಇಲ್ಲ, ನೆರೆ ಮನೆಯವರು ಎಲ್ಲಾ ಪರಸ್ಪರ ಮಾತನಾಡಿ ಕೊಳ್ತಾರೆ, ಏನು ಅಜ್ಜ ನ ಮನೆಯಲ್ಲಿ ಸೌಂಡೇ ಇಲ್ಲ ಏನಾಗಿದೆ ಅಂತ ನೋಡಲು ಹೋದಾಗ ಇಬ್ಬರೂ ಮಲಗಿರುತ್ತಾರೆ

ಜನರೆಲ್ಲರೂ ಇವರು ಸತ್ತಿರಬಹುದೆಂದು, ಹೊಂಡ ತೆಗೆದು ಇಬ್ಬರನ್ನೂ ಒಂದೇ ಹೊಂಡದಲ್ಲಿ ಹಾಕಿದರು, ಮೊದಲು ಅಜ್ಜಿಯನ್ನು ಆನಂತರ ಅಜ್ಜನನ್ನು ಮಲಗಿಸುವಾಗ ಅಜ್ಜನ ಕಾಲು ಹೊಂಡದ ಹೊರಗೆ ಬಂತು, ಅವಾಗ ಒಬ್ಬ ಒಬ ಅಜ್ಜ ಸತ್ತರೂ ಅಜ್ಜನ ಅಹಂಕಾರ ನೋಡು ಅಂತ ಕೈಕೊಟ್ಟುವಿನಿಂದ ಕಾಲಿಗೆ ಒಂದು ಕೊಡುತ್ತಾನೆ, ಆಗ ಅಜ್ಜ ಅಯ್ಯೋ ಅಂತ ಬೊಬ್ಬೆ ಹೊಡಿಯುತ್ತಾನೆ, ಅಲ್ಲಿದ್ದವರೆಲ್ಲ ಮೂಕನಾಗುತ್ತಾರೆ, ಕೆಳಗಿಂದ ಅಜ್ಜಿ ಹಾ ನೀನು ಮಾತನಾಡಿದ್ದೀ, ನನಗೆ ಎರಡು, ನಿನಗೆ ಒಂದು ನೆಯ್ಯಪ್ಪ ಅಂತ ಹೇಳುತ್ತಾಳೆ, ಆಯ್ತು ಅಂತ ಅಜ್ಜ ಒಪ್ಪಿಕೊಂಡು ನೆಯ್ಯಪ್ಪ ತಿನ್ನುತ್ತಾರೆ.

ಊರವರಿಗೆ ವಿಷಯ ಅರ್ಥ ಆಗದೇ ಅಲ್ಲಿಂದ ಹೋಗುತ್ತಾರೆ

ಮುಗಿಯಿತು 🙏

ನೀತಿ :- ಅಜ್ಜ ಮತ್ತು ಅಜ್ಜಿಯರ ನಡುವಿನ ಹಾಸ್ಯಮಯ ಸಂಭಾಷಣೆ ಮತ್ತು ಅವರ ಅಹಂಕಾರದ ಕಥೆ ನಮಗೆ ನಗು ತರಿಸುತ್ತದೆ. “ಬಯಸಿದ್ದೆಲ್ಲಾ ಸಿಗಲ್ಲ” ಮತ್ತು “ಅತೀ ಆಸೆ ಗತಿ ಗೇಡು” ಎಂಬ ನೀತಿಗಳು ನಮಗೆ ಜೀವನದಲ್ಲಿ ಅಸಮಾಧಾನ ಮತ್ತು ಅತಿಯಾದ ಆಸೆಗಳಿಂದ ದೂರವಿರಲು ಕಲಿಸುತ್ತದೆ. 🙏

ನನ್ನ ಈ ಕಥೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು!🙏 😊

ನನಗೆ ಇನ್ನಷ್ಟು ಕಥೆಗಳನ್ನು ಬರೆಯಲು ಪ್ರೋತ್ಸಾಹ ಆಗಬಹುದು 🙏

ವಂದನೆಗಳೊಂದಿಗೆ 🙏

❣️ಸ್ನೇಹಜೀವಿ❣️

ಬರಹ :-✍️ಉದಯಮಲ್ಲಿ

ಬೆದ್ರಡ್ಕ, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!