ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಹೊಸ ಸಹಾಯವಾಣಿ ಆರಂಭಿಸಿದ ನಟ ಮಮ್ಮುಟ್ಟಿ .

ತಿರುವನಂತಪುರಂ : ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಮಲಯಾಳಂ ಸ್ಟಾರ್ ‘ಟಾಕ್ ಟು ಮಮ್ಮುಕ್ಕ’ ಎಂಬ ನೂತನ ಸಹಾಯವಾಣಿ ಆರಂಭಿಸಿದ್ದಾರೆ.ಈ ಯೋಜನೆಯು ಕೇರಳ ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಸ್ವ ಸಹಾಯ ಇಲಾಖೆಗಳೊಂದಿಗೆ ಕುಟುಂಬಶ್ರೀ ಮಿಷನ್ ನ ಬೆಂಬಲದೊಂದಿಗೆ ಈ ಸಹಾಯವಾಣಿ ಕಾರ್ಯಾಚರಿಸಲಿದೆ.

2025 ರ ಜೂನ್ 25 ರಂದು ಫೇಸ್ಬುಕ್ ಮೂಲಕ ಈ ಯೋಜನೆಯನ್ನು ಘೋಷಿಸಲಾಯಿತು.ಈ ಯೋಜನೆಯ ಮೂಲಕ ಮಾದಕ ವ್ಯಸನದಿಂದ ಚೇತರಿಸಿಕೊಳ್ಳಲು ಕರೆ ಮಾಡುವವರು 6238877369 ಈ ನಂಬರ್ ಗೆ ಕರೆ ಮಾಡಿ ಸಮಾಲೋಚನೆ ಮಾಡುವವರಿಗೆ ನಟ ಮಮ್ಮುಟ್ಟಿ ಅವರಿಂದಲೇ ರೆಕಾರ್ಡ್ ಮಾಡಿದ ಸಂದೇಶ ಬರುತ್ತದೆ.ಜೊತೆಗೆ ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ.


ಸಹಾಯವಾಣಿ ಆರಂಭಿಸಿದ ಮೊದಲ ಒಂದು ಗಂಟೆಯಲ್ಲೇ ಸುಮಾರು 150 ಕ್ಕೂ ಹೆಚ್ಚು ಕರೆಗಳು ಬಂದವು.ಇಂತಹ ಸಹಾಯವಾಣಿಯನ್ನು ಎಷ್ಟರ ಮಟ್ಟಿಗೆ ಬಳಸುತ್ತಿದ್ದಾರೆ ಎಂಬುವುದಕ್ಕೆ ಇದುವೇ ಸಾಕ್ಷಿಯಾಗಿದೆ.ಸಮಸ್ಯೆಗಳನ್ನು ಸುರಕ್ಷಿತವಾಗಿ ವರದಿ ಮಾಡಲಾಗುವುದು .ಕರೆ ಮಾಡುವವರು ಆಲುವಾದಲ್ಲಿರುವ ರಾಜಗಿರಿ ಆಸ್ಪತ್ರೆಯ ಸಾಮಾಜಿಕ ವಿಭಾಗದ ಮೂಲಕ ಸಮಾಲೋಚನೆಯನ್ನು ಪಡೆದು ಮಾದಕ ವ್ಯಸನದಿಂದ ಚೇತರಿಸಿಕೊಳ್ಳಬಹುದು.

ನಟ ಮಮ್ಮುಟ್ಟಿ ಸ್ಥಾಪಿಸಿದ ಕೇರ್ ಅಂಡ್ ಶೇರ್ ಇಂಟರ್ನ್ಯಾಷನಲ್ ದತ್ತಿ ಸಂಸ್ಥೆ ಹಾಗೂ ಕುಟುಂಬಶ್ರೀ ಘಟಕಗಳು ಈ ಸಹಾಯವಾಣಿಯ ಹಿಂದೆ ಕಾರ್ಯಾಚರಿಸುತ್ತಿದ್ದು,ಮಾದಕ ವ್ಯಸನಿಗಳಿಗೆ ತಾವು ಒಬ್ಬಂಟಿಗರಲ್ಲ ಎಂಬ ಆತ್ಮಸ್ಥೈರ್ಯವನ್ನು ನೀಡುತ್ತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!