ಅಂಧಕಾರದ ಕತ್ತಲನ್ನು ದೂರ ಮಾಡಿ ಬದುಕಿಗೆ ಜ್ಞಾನಜ್ಯೋತಿಯ ಬೆಳಗಿಸಿ ಜಗದ ಮಾಯೊಳಗಿನ ಮಹಿಮೆಯ ತಿಳಿಸಿದ ನನ್ನೆಲ್ಲಾ ಗುರುಗಳಿಗೆ ಪ್ರಣಾಮಗಳು.
ಇಂದು ನನ್ನ ಬದುಕಿನ ಸುಂದರ ಕ್ಷಣಕ್ಕೆ ಕಾರಣರಾದ ನನ್ನ ಗುರುಗಳ ಬಗ್ಗೆ ನಾನು ಹೇಳಲೇಬೇಕು. ಸೋಮಾರಿಯಾದ ನನ್ನಂಥಹಾ ವಿದ್ಯಾರ್ಥಿಯಲ್ಲೂ ಬರವಣಿಗೆಯ ಅಭಿರುಚಿಯನ್ನು ಬೆಳಸಿ, ನನ್ನಿಂದ ಅಸಾಧ್ಯ ಎಂದುಕೊಂಡಿದ್ದ ಸಾಹಿತ್ಯ ರಚನೆಗೆ ನೆರಳಾಗಿ, ಪ್ರತೀ ಅಕ್ಷರದ ಹಿಂದಿನ ಶಕ್ತಿಯಾಗಿ , ಬಾಳಿಗೆ ನವ ಕನಸನ್ನು ಕಾಣಲು – ಅದರ ಸಾಕ್ಷಾತ್ಕಾರ ಮಾಡಲು ಸಾಧ್ಯ ಪಡಿಸುವ ಸೂರ್ತಿಯಾಗಿ, ಪತ್ರಕರ್ತ ದಿಟ್ಟ ಹೆಜ್ಜೆ ಹೇಗೆ ಇಡಬೇಕೆಂದು ತಿಳಿ ಹೇಳಿದ ನನ್ನ ಬದುಕಿನ ಗುರುವಾದ ಗುರುಪ್ರಸಾದ್ ಸರ್ ನಿಮ್ಮಿಂದ ಸಾಹಿತ್ಯ ಸಾಗರದಲ್ಲಿ ಹನಿಯಾದೆ, ಅಕ್ಷರ ಲೋಕದಲ್ಲಿ ಜ್ಞಾನಿಯಾದೆ ಬದುಕೆಂದರೆ ಹೇಗೆಂದು ಅರಿತುಕೊಂಡೆ.
ನಿಮಗಿದು ಅಕ್ಷರದ ಗುರುನಮನ ಧನ್ಯೋಸ್ಮಿ ನಿಮ್ಮಿಂದ ನನ್ನ ಜೀವನ.
✍🏻ಗಿರೀಶ್ ಪಿಎಂ
ಕಾಸರಗೋಡು