ಕರಾವಳಿ , ಮಲಬಾರ್ ಭಾಗದಲ್ಲಿ ಹೆಚ್ಹಾಗಿ ತಮ್ಮ ಜೀವನೋಪಾಯ ಸಾಧಿಸಲು ಅದೆಷ್ಟೋ ವನಿತೆಯರು ಬೀಡಿಯನ್ನು ಕಟ್ಟುತ್ತಾರೆ. ಆ ಬೀಡಿಯ ಸೂಪಿನಲ್ಲಿ ಅದೆಷ್ಟೋ ಜನರ ಬದುಕು ಬೆಳಕಾಗಿದೆ, ಅದೆಷ್ಟೋ ಸಾಧಕರು ಜನ್ಮ ಪಡೆದಿದ್ದಾರೆ. ನಾನು ಕೂಡ ಬಾಲ್ಯದಿಂದಲೂ ಈ ಬೀಡಿ ಕಟ್ಟುವುದನ್ನು ಕಂಡವ .
ನನ್ನ ಮನೆಯಲ್ಲೂ ಬೀಡಿ ಕಟ್ಟುತ ಕಣ್ಣ ರೆಪ್ಪೆಯಂತೆ ಸಲಹುವ ಒಬ್ಬಳು ಮಹಾ ತಾಯಿ ಇದ್ದಾರೆ. ಮಡಿಲಲ್ಲಿ ನಾ ಆಸರೆ ಪಡೆಯುವ ದಿನದಿಂದ ಅವರ ಮೇಲೆ ಬೀಡಿಯ ಸೂಪು ಇರುತ್ತಿತ್ತು. ಮಳೆಗಾಲ ಇರಲಿ, ಚಳಿಗಾಲ ಇರಲಿ, ಬೇಸಿಗೆ ಇರಲಿ ಬೀಡಿಯ ಸೂಪು ಮಡಿಲಲ್ಲಿ ಇರುತ್ತಿತ್ತು . ಈಗಲೂ ಬೀಡಿಯನ್ನು ಕಟ್ಟಿ ನನ್ನ ಅಮ್ಮ ಸ್ವಾಭಿಮಾನದ ಜೀವನ ಸಾಗಿಸ್ತಾ ಇದ್ದಾರೆ.
ಅಮ್ಮನ ಮಡಿಲಲ್ಲಿ ಬೀಡಿಯ ಸೂಪು ಅದು ಹಲವು ಕಥೆಗಳನ್ನು ಯಶಸ್ಸಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹಸಿವಿನ ಹೊಟ್ಟೆಗೆ ಹಿಟ್ಟು ನೀಡಿದೆ.ಕನಸ್ಸು ನನಸಾಗಿಸಿದೆ. ನಿದ್ದೆ ಬಿಟ್ಟು ಮಳೆಗಾಲದ ಆ ಕರೆಂಟ್ ಹೋದ ರಾತ್ರಿಯಲ್ಲೂ ಉರಿಯುತ್ತಿದ್ದ ಚಿಮ್ಮಣಿ ದೀಪದ ಬೆಳಕಿನಲ್ಲಿ ನಿದ್ದೆಯ ಕೂರತ ಕಟ್ಟುತ್ತಿದ್ದ ಬೀಡಿ ಅದು ನನ್ನಲ್ಲಿ ಏನಾದರೂ ಮಾಡಬೇಕೇಬುದಾಗಿ ಸಾದಿಸಬೇಕ್ಕೆಂಬುದಾಗಿ ಕಿಚ್ಚನ್ನು ಹಚ್ಚಿತು. ಅವರು ನಿದ್ದೆ ಬಿಟ್ಟು ನನ್ನ ಒಳಿತಿಗಾಗಿ ದುಡಿಯುತ್ತಿದ್ದ ಕಣ್ಗಳನ್ನು ಸಂತಸ ಪಡಿಸಬೇಕೆಂಬ ಆಸೆ ಚಿಕ್ಕ ವಯಸ್ಸಿನಲ್ಲೇ ಕಂಡವ ನಾನು . ನನ್ನೆಲ್ಲಾ ಬಯಕೆಗಳನ್ನು ಈಡೇರಿಸಿದ ಅಮ್ಮನಿಗೆ ನಾನು ಉತ್ತಮವಾಗಿ ಕಲಿತು ಶಾಲೆ ಕಾಲೇಜು ನನ್ನನ್ನು ಗುರುತಿಸಬೇಕೆಂದು ಅಂದುಕೊಂಡಿದ್ದೆ ಆದ್ರೆ ಆರಂಭದ ದಿನಗಳಲ್ಲಿ ಅದು ನನ್ನಿಂದ ಸಾಧ್ಯವಾಗಲೇ ಇಲ್ಲ . ಆದರೆ ಅಮ್ಮನ ಕಷ್ಟದ ಮುಂದೆ ನನ್ನ ಓದುವಿಕೆಯ ಸವಾಲುಗಳ ಹಿರಿದೆಂದು ತೋರಲಿಲ್ಲ. ಇಷ್ಟ ಪಟ್ಟರೆ ಏನಾದರೂ ಸಾಧಿಸಬಹುದೆಂಬ ಮಾತು, ಕಷ್ಟ ಪಟ್ಟರೆ ಯಾವುದೇ ವಿದ್ಯೆಯನ್ನು ಸಿದ್ದಿಸಬಹುದೆಂಬ ಮಾತೆಯ ಮಾತು ಓದುತ್ತಿರುವಾಗ , ಪುಸ್ತಕದ ಕದವನ್ನು ಒಮ್ಮೆ ಮುಚ್ಚುವಾಗ ಯೋಚನೆ ಮಾಡ್ತಾ ಇದ್ದೆ. ಶ್ರದ್ಧೆಗೆ ಜ್ಞಾನ, ಮಾತಿಗೆ ಕೊಂಚ ಮೌನ, ನಿರಂತರ ಅಬ್ಯಾಸದಿ ತೊಡಗಲಿ ಮನ ಎನ್ನುವ ಅಮ್ಮನ ನಾಣುಡಿ ಬದುಕನ್ನೇ ಬದಲಿಸಿತು.ಸದಾ ವಿಡಿಯುತ್ತಿದ್ದ ಅಮ್ಮನ ಹೃದಯಕ್ಕೆ ಕುಷಿ ತರಲು ನಿರಂತರ ಪ್ರಯತ್ನ ಮಾಡ್ತಾ ಇದ್ದೆ.
ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ವಿಷಯದಲ್ಲಿ ಪ್ರಥಮ ಸ್ಥಾನ ಮತ್ತು ಚಿನ್ನದ ಪದಕವನ್ನು ಪಡೆಯುವ ಮೂಲಕ ಅವರು ಪಟ್ಟ ಕಷ್ಟಕ್ಕೆ ಹೊಸ ಅರ್ಥವನ್ನು ಬರೆದೆ. ಅಮ್ಮನ ಆ ಬೀಡಿ ಸೂಪು ಹೊಸ ಹುರುಪನ್ನೇ ನೀಡಿತ್ತು.
✍🏻✍🏻✍🏻ಗಿರೀಶ್ ಪಿಎಂ ಕಾಸರಗೋಡು