ಮಂಗಳೂರು ನಗರದ ಹೆಚ್ಚಿನ ರಸ್ತೆಗಳ ಸ್ಥಿತಿ ಅದೋಗತಿಗೆ ತಲುಪುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ . ಒಮ್ಮೆ ರೋಡಿನಲ್ಲಿ ಗುಂಡಿ ಬಿದ್ದರೆ , ಡಾಮರ್ ಕಿತ್ತೆದ್ದರೆ ಅದನ್ನು ಮತ್ತೆ ದುರಸ್ತಿ ಮಾಡುವ ಕಾರ್ಯ ನಡೆಯುವುದೇ ಅಲ್ಲೊಂದು ಅಪಘಾತದಿಂದ ಸಾವಾದ ಬಳಿಕವಷ್ಟೇ. ಹಿಂದೊಂದು ಅಪಘಾತವನ್ನು ಸಂಭವಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರಸ್ತೆಯ ಬಗ್ಗೆ ಸರಕಾರ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.
ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದಿ ರೈಲ್ವೇ ನಿಲ್ದಾಣ, ಅತ್ತಾವರದ ಕಡೆಗೆ ಹೋಗುವ ಮಾರ್ಗವೊಂದಿದೆ. ಈ ಮಾರ್ಗದ ಮಧ್ಯೆ ವೇಗವನ್ನು ಕುಗ್ಗಿಸುವ ದೃಷ್ಟಿಕೋನದಿಂದ ಹಂಪ್ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ಸುರಿದ ಪ್ರಬಲ ಮಳೆಯಿಂದ ಹಂಪಿನ ಭಾಗಶಃ ಡಾಮರ್ ಕಿತ್ತು ಹೋಗಿ ನಡು ಗಡ್ಡೆಯಂತೆ ರೂಪುಗೊಂಡಿದೆ . ರೈಲ್ವೇ ನಿಲ್ದಾಣಕ್ಕೆ , ಆಸ್ಪತ್ರೆಗೆ , ದೇವಾಲಯಕ್ಕೆ ಈ ಗುಂಡಿ ಮಾರ್ಗದ ಮೂಲಕ ದಿನ ನಿತ್ಯ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಈ ಮಾರ್ಗದಲ್ಲಿ ೩ ಹಂಪ್ ಗಳು ಇದ್ದು ಎರಡು ಹಂಪ್ ವೇಗವನ್ನು ಕುಗ್ಗಿಸುವ ತಂತ್ರವಾಗಿರದ್ದೇ ಜೀವಕ್ಕೆ ಕುತ್ತು ತರುವ ಕುತಂತ್ರಕ್ಕೆ ಎಡೆ ಮಾಡಿ ಕೊಟ್ಟಂತೆ ಇದೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ , ಹಂಪನ್ನು ಸಂಪೂರ್ಣವಾಗಿ ಅಲ್ಲಿಂದ ತೆರವುಗೊಳಿಸುವ ಕಾರ್ಯ ಇಲ್ಲವೇ ಅದರ ದುರಸ್ತಿ ಕಾರ್ಯ ಕೂಡಲೇ ನಡೆಸಬೇಕು.
✍🏻✍🏻ಗಿರೀಶ್ ಪಿಎಂ ಕಾಸರಗೋಡು