Avatar

NAMMA MEDIA 24X7

ಬಹುವರ್ಷಗಳ ಬೇಡಿಕೆ ಈಡೇರಿಕೆ: ಅನಧಿಕೃತ ಬಡಾವಣೆ ಸಕ್ರಮ, ಮನೆ ನಿರ್ಮಾಣಕ್ಕೆ ದಾರಿ ತೆರೆದಿತು

ಪುತ್ತೂರು; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜಾಗವನ್ನು ಕಟ್ ಮಾಡಿ ಕೃಷಿಯೇತರ ವಿಚಾರಗಳಿಗೆ ಬಳಕೆ ಮಾಡಿಕೊಂಡಿರುವ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗುವಂತೆ ರಾಜ್ಯ ಸರ್ಕಾರ ಇದೀಗ ಅನಧಿಕೃತ ಬಡಾವಣೆಗಳನ್ನು ಸಕ್ರಮೀಕರಿಸುವ ಮೂಲಕ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ನೀಡುವ ಮಹತ್ವದ ಕೆಲಸ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೨೦೨೪ರ ಸೆಪ್ಟಂಬರ್ ೧೦ರ ಮೊದಲು ರಚಿಸಲಾದ ಅಕ್ರಮ ಬಡಾವಣೆಗಳನ್ನು ರಾಜ್ಯ ಸರ್ಕಾರ ಅಕ್ರಮಗೊಳಿಸಲು ಮುಂದಾಗಿದೆ….

Read More

ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿದ್ದಾರೆ : ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌

ಮಂಗಳೂರು : ರಾಜ್ಯಪಾಲರು ರಾಜ್ಯ ಸರಕಾರದ ಪ್ರತಿನಿಧಿ. ಅವರ ಭಾಷಣ ಎಂದಾಗ ಅದು ಸರಕಾರದ ಅಭಿಪ್ರಾಯಗಳೇನು, ರಾಜ್ಯಕ್ಕೆ ಆಗುವ ಸಮಸ್ಯೆ ಬೆಳವಣಿಗೆಗಳ ಬಗ್ಗೆ ಮತ್ತು ರಾಜ್ಯದ ಪರವಾಗಿ ಏನು ಮಾಡಬೇಕಿದೆ ಎಂಬುದಾಗಿ ಪ್ರಸ್ತಾಪವನ್ನು ನೀಡುವವರು . ಆದರೆ ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಆರೋಪವನ್ನು ವ್ಯಕ್ತಪಡಿಸಿದ್ದಾರೆ . ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಂದರ್ಭ ಇತ್ತೀಚಿಗೆ ವಿಶೇಷ ಅಧಿವೇಶನದಲ್ಲಿ ಭಾಷಣದ ಕುರಿತಂತೆ ಉಂಟಾದ…

Read More

ರೈತ ಕಾರ್ಮಿಕ ವಿರೋಧಿ ಸಂಹಿತೆಗಳು,ಮಸೂದೆಗಳಿಂದ ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿ – ಕೆ ಯಾದವ ಶೆಟ್ಟಿ

ಮಂಗಳೂರು: ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ಸೇರಿದಂತೆ ಜನರ ಬದುಕಿಗೆ ಅಪಾಯಕಾರಿಯಾದ ಕಾನೂನುಗಳ ಜಾರಿ ಮಾಡಿದ ಕೇಂದ್ರ ಸರಕಾರ ಗ್ರಾಮೀಣ ಜನತೆಯ ಬದುಕಿಗೆ ಪೂರಕವಾದ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಡ ಕತ್ತು‌ ಹಿಸುಕಿ ಸಾಯಿಸಲು ಹೊರಟಿದೆ.ಒಟ್ಟಿನಲ್ಲಿ ಕೇಂದ್ರ ಸರಕಾರದ ನಡೆ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದೆ ಎಂದು ರಾಜ್ಯದ ರೈತ-ಕಾರ್ಮಿಕ ಮುಖಂಡರಾದ ಕೆ. ಯಾದವ ಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದರು. ಅವರು‌‌…

Read More

ಸಂವಿಧಾನ ಆಶಯಗಳ ರಕ್ಷಣೆ ಸರ್ಕಾರಗಳ ಕರ್ತವ್ಯ – ಸಂವಿಧಾನ ವಿರೋಧಿ ನೀತಿಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯ: ಹರೀಶ್ ಕುಮಾರ್

ಮಂಗಳೂರು: ಸಂವಿಧಾನ ಆಶಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎತ್ತಿಹಿಡಿಯುವ ಕೆಲಸ ಸರ್ಕಾರಗಳು ಮಾಡಬೇಕು. ಸರ್ಕಾರ ಸಂವಿಧಾನ ವಿರೋಧಿ ನೀತಿ ಜಾರಿಗೆ ತಂದರೆ ಸಂವಿಧಾನದ ಮೂಲ ಆಶಯಗಳು ನಾಶವಾಗುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರವಲ್ಲ, ಅದು ಮಾನವೀಯ ಮೌಲ್ಯಗಳನ್ನು ಒಳಗೊಂಡ ಜೀವನ…

Read More

ಕೆಲಸವೂ ಇಲ್ಲ, ಸ್ನೇಹಿತನೂ ಇಲ್ಲ… ಕಂಗಾಲಾಗಿ ಮರವೇರಿದ ಯುವಕನ ರಕ್ಷಣೆ – ಕದ್ರಿ ಪೊಲೀಸರ ಮಾನವೀಯ ಕಾರ್ಯ

ಮಂಗಳೂರು : ಇತ್ತ ಕೆಲಸನೂ ಇಲ್ಲ ಅತ್ತ ಕರೆತಂದ ಸ್ನೇಹಿತನೂ ಇಲ್ಲದೆ ಕಂಗಲಾಗಿ ಮರವೇರಿ ಕೂತವನ ರಕ್ಷಿಸಿದ ಕದ್ರಿ ಪೋಲೀಸರುಮಂಗಳೂರು, ಜನವರಿ 26 : ದೂರದೂರಿನಿಂದ ಕೆಲಸ ಅರಸಿ ಸ್ನೇಹಿತನೊಂದಿಗೆ ನಗರಕ್ಕೆ ಬಂದಿದ್ದ ಕಾರ್ಮಿಕನೋರ್ವ ಇತ್ತ ಕೆಲಸನೂ ಇಲ್ಲದೆ ಅತ್ತ ಕರೆ ತಂದ ಸ್ನೇಹಿತನೂ ಇಲ್ಲದೆ ಕಂಗಾಲಾಗಿ ಮರವೇರಿ ಕೂತ ಘಟನೆ ಮಂಗಳೂರು ನಗರದಲ್ಲಿ ಸೋಮವಾರ ಅಪರಾಹ್ನ ಸಂಭವಿಸಿದೆ. ನಗರದ ಕರಂಗಾಲ್ಪಾಡಿಯಲ್ಲಿ ಈ ಘಟನೆ ನಡೆದಿದ್ದು ಬೃಹತ್ತ್ ಮರವೇರಿ ಕೂತವನನ್ನು ಕದ್ರಿನ ಪೊಲೀಸರು ರಕ್ಷಣೆ ಮಾಡಿ ಆಸ್ಪತ್ರೆಗೆ…

Read More

ವಿಟ್ಲ ಪಿ.ಎಂ.ಶ್ರೀ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಸಿ.ರವಿಶಂಕರ್ ಶಾಸ್ತ್ರಿ ಆಯ್ಕೆ ಹಾಗೂ ಉಪಾಧ್ಯಕ್ಷರಾಗಿ ವಿಶಾಲಾಕ್ಷಿ ಅಮೀನ್ ಆಯ್ಕೆ

ವಿಟ್ಲ: ಪಿ.ಎಂ.ಶ್ರೀ (RMSA) ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಟ್ಲ ಇದರ 2026–2029 ಅವಧಿಯ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಡಿ.ಎಂ.ಸಿ.)ಯ ನೂತನ ಅಧ್ಯಕ್ಷರಾಗಿ ಸಿ.ರವಿಶಂಕರ್ ಶಾಸ್ತ್ರಿ ಹಾಗೂ ಉಪಾಧ್ಯಕ್ಷರಾಗಿ ವಿಶಾಲಾಕ್ಷಿ ಅಮೀನ್ ಆಯ್ಕೆಯಾಗಿದ್ದಾರೆ.ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಗೌಡ ನಾಯ್ತೋಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರೂ ಪದನಿಮಿತ್ತ ಸದಸ್ಯರಾದ ರವಿಪ್ರಕಾಶ್ ವಿಟ್ಲ ಅವರು ಗೌರವ ಉಪಸ್ಥಿತರಿದ್ದರು. ರಾಜ್ಯದಲ್ಲೇ ಅತೀ ಹೆಚ್ಚು…

Read More

ಕಾಸರಗೋಡು ಜಿಲ್ಲಾ ಕೇರಳೋತ್ಸವದಲ್ಲಿ ಲಕ್ಕಿ ಬ್ರದರ್ಸ್ ಮಂಜೇಶ್ವರ ತಂಡಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು ಜಿಲ್ಲಾ ಕೇರಳೋತ್ಸವದಲ್ಲಿ ಲಕ್ಕಿ ಬ್ರದರ್ಸ್ ಮಂಜೇಶ್ವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.ಮೆಹಂದಿ ವಿಭಾಗದಲ್ಲಿ ಅಫ್ಸಾ & ಅಸ್ಮಾ ಹಾಗೂ ಪ್ರಬಂಧ ಬರವಣಿಗೆಯಲ್ಲಿ ಪೂಜಾ ಲಕ್ಷ್ಮಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕಥಾ ಪ್ರಸಂಗ ಜನಪದ ನೃತ್ಯ ವಿಭಾಗದಲ್ಲಿ ಕುಮಾರಿ ಶಿಬಿರಾ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ಕಥಾ ರಚನೆಯಲ್ಲಿ ಕುಬ್ರಾ ರವರು ‘ಎ’ ಗ್ರೇಡ್ ಗಳಿಸಿದ್ದಾರೆ. ಮಂಜೇಶ್ವರ ಬ್ಲಾಕ್ ತಂಡವನ್ನು ಮುನ್ನಡೆಸಿದ ತಂಡದ ನಾಯಕ ಕಲಾವಿದ ಸಿದ್ದಿಕ್ ಮಂಜೇಶ್ವರ ಅವರನ್ನು ಬ್ಲಾಕ್ ಅಧ್ಯಕ್ಷ ಸೈಫುಲ್ಲಾ ತಂಗಳ್ ಹಾಗೂ…

Read More

ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ

ವಿಶ್ವದ ಬೃಹತ್ ಹಾಗೂ ಲಿಖಿತ ಸಂವಿಧಾನವನ್ನು ಹೊಂದಿರುವ ನಮ್ಮ ದೇಶದಲ್ಲಿ ಸಂವಿಧಾನವು ರಚನೆಯಾಗಿ ಜಾರಿಗೆ ಬಂದ 1950 ಜನವರಿ 26ನೇ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಜಾರಿಯಾದ ಈ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನ ಜೀವನ ಭದ್ರತೆಗೆ ಭದ್ರಬುನಾದಿ ಹಾಕಿತು. ಎಂದು ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣಗೈದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ ಮಾತನಾಡಿದರು. ಸಮಾಜ ವಿಜ್ಞಾನ…

Read More

ಗಣರಾಜ್ಯೋತ್ಸವದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವತಿಯಿಂದ ‘ಶುಚಿತ್ವ ಮಂಜೇಶ್ವರ’ ಟೌನ್ ಕ್ಲೀನಿಂಗ್ ಅಭಿಯಾನಕ್ಕೆ ಚಾಲನೆ

ಮಂಜೇಶ್ವರ :ಗಣರಾಜ್ಯೋತ್ಸವದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವತಿಯಿಂದ ‘ಶುಚಿತ್ವ ಮಂಜೇಶ್ವರ’ ಟೌನ್ ಕ್ಲೀನಿಂಗ್ ಅಭಿಯಾನಕ್ಕೆ ಚಾಲನೆ ದೊರಕಿತು.ಜನಪ್ರತಿನಿಧಿಗಳು, ಪಂಚಾಯತು ಅಧಿಕಾರಿಗಳು, ರಾಜಕೀಯ ನೇತಾರರು, ಯುವಜನ ಸಂಘಟನೆಗಳು, ಫ್ಲ್ಯಾಟ್ ಅಸೋಸಿಯೇಷನ್‌ಗಳು, ಸ್ವಯಂಸೇವಕ ಸಂಘಟನೆಗಳು, ಹಸಿರು ಕರ್ಮಸೇನೆ, ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು, ಕುಟುಂಬಶ್ರೀ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅಭಿಯಾನಕ್ಕೆ ಚಾಲನೆ ದೊರಕಿತು. ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಯ್ಯಿದ್ ಸೈಫುಲ್ಲಾ ತಂಙಲ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಬಸೀರ್…

Read More

ಬೈಂದೂರಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟನೆ

ಉಡುಪಿ:ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಬೈಂದೂರಿನಲ್ಲಿ ನಡೆಯಿತು.ಕಾಲದ ಬದಲಾವಣೆಗೆ ತಕ್ಕಂತೆ ಹೈನುಗಾರಿಕೆಯನ್ನು ಮುಂದುವರಿಸಿದರೆ ಲಾಭದಾಯಕವಾಗಿಸಲು ಸಾಧ್ಯವಾಗುತ್ತದೆ.ಬೈಂದೂರು ಉತ್ಸವ ಬೈಂದೂರು ಜನರ ಜೀವನ ಕಟ್ಟಿಕೊಡುವ ಉದ್ದೇಶ ಒಳಗೊಂಡಿದೆ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ, ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಮತ್ತು ಬೈಂದೂರು ಉತ್ಸವ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ…

Read More
error: Content is protected !!