VJ SHARATH BEKUR

VJ SHARATH BEKUR

ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆ

ಮಂಜೇಶ್ವರ: ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ಇತ್ತೀಚೆಗೆ “ಟ್ಯಾಲೆಂಟ್ ಹಂಟ್ ಡೇ” ಉತ್ಸವ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ದಿನಾಚರಣೆಯ ಉದ್ದೇಶ, ವಿದ್ಯಾರ್ಥಿಗಳಲ್ಲಿರುವ ಅಡಗಿದ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸುವುದಾಗಿತ್ತು. ಈ ಸಂಭ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ಹಾಡು, ಚಿತ್ರಕಲೆ, ನಾಟಕ, ಭಾಷಣ, ಕರಾಟೆ ಹಾಗೂ ವಿವಿಧ ಕಲಾತ್ಮಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ವೈಯಕ್ತಿಕ ಪ್ರತಿಭೆಯನ್ನು ಮೆರೆದರು. ಪ್ರತಿ ತರಗತಿಯಿಂದ ವಿದ್ಯಾರ್ಥಿಗಳು ಭಾಗಿ ಆಗಿದ್ದು,…

Read More

ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆ

ಮಂಜೇಶ್ವರ: ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆಯಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ಮಂಜೇಶ್ವರ ಹೊಸಂಗಡಿ ವಾಮಂಜೂರು ಅಬಕಾರಿ ತಪಾಸಣಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬಳಿಕ ಟ್ಯಾಂಕರ್ ಲಾರಿಯಿಂದ ಪಾತ್ರೆಗೆ ಸ್ಪಿರಿಟ್ ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಪ್ರದೇಶದಿಂದ ಕೋಝಿಕ್ಕೋಡ್ ಗೆ ತೆರಳುತಿದ್ದ ಟ್ಯಾಂಕರ್ ಲಾರಿಯಲ್ಲಿ ಈ ರೀತಿಯ ಸೋರಿಕೆ ಕಂಡು ಬಂದಿದೆ.ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸರು ಆಗಮಿಸಿ ಸುರಕ್ಷತೆಯಲ್ಲಿ ಬೇರೊಂದು ಟ್ಯಾಂಕರಿಗೆ ಸ್ಪಿರಿಟ್ ವರ್ಗಾಯಿಸಿದ್ದಾರೆ.

Read More

ವರ್ಕಾಡಿ ಕಜೆಪದವಿನಲ್ಲಿ ಭೂಮಿ ಬಿರುಕು ಉಂಟಾದ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತ್ತಿನ ಕೆಜೆಪದವಿಯಲ್ಲಿ ಭಯಾನಕವಾಗಿ ಉಂಟಾಗುತ್ತಿರುವ ಭೂಮಿ ಬಿರುಕುಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿಶೇಷ ತಂಡ ಸ್ಥಳಕ್ಕೆ ಭೇಟಿ ನೀಡಿತು. 2019ರಿಂದ ಆರಂಭವಾದ ಈ ಸಮಸ್ಯೆ, ಕಳೆದ ವರ್ಷ (2024) ಅತ್ಯಂತ ಗಂಭೀರ ಸ್ವರೂಪವನ್ನು ಪಡೆದಿದ್ದು, ಈ ವರ್ಷ ಭೂಭಾಗವು ಹೆಚ್ಚು ತಳಮಟ್ಟಕ್ಕೆ ಇಳಿಯುತ್ತಿದ್ದಂತೆ, ಆ ಪ್ರದೇಶದ ಮೂವರು ಕುಟುಂಬಗಳನ್ನು ತುರ್ತು ಅವಸ್ಥೆಯಲ್ಲಿ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಭೂಮಿ ಬಿರುಕುಗಳಿಂದಾಗಿ ಕೃಷಿಭೂಮಿಗಳು ನಾಶವಾಗಿದ್ದು, ಸ್ಥಳೀಯರ ಪ್ರಮುಖ ಆರ್ಥಿಕ ಆಧಾರವಾದ ಕೃಷಿಯೇ ದುರ್ಬಲಗೊಂಡಿದೆ. ಪ್ರದೇಶದಲ್ಲಿನ ಮನೆಗಳು ಕೂಡ…

Read More

ಶ್ರೀ ಅಯ್ಯಂಗಾಳಿ (1863 – 1941 )

ಕೇರಳದ ನವೋತ್ಥಾನ ನಾಯಕರಲ್ಲಿ ಒಬ್ಬರಾದ , ಅಗ್ರಗಣ್ಯ ಧೀಮಂತ ನಾಯಕರು ಆಗಿರುವ ದಲಿತರ ಸಾಮಾಜಿಕ ರಾಜಕೀಯ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ ಕೇರಳದ ಅಂಬೇಡ್ಕರ್ ಎಂದು ವಿಶೇಷಣವನ್ನು ಪಡೆದಿರುವ ಕೇರಳದ ಮಹಾನ್ ಪುತ್ರನಾಗಿರುವ ಶ್ರೀ ಅಯ್ಯಂಕಾಲಿ ಅವರ ಜನ್ಮದಿನವನ್ನು ಅಗಸ್ಟ್ 28ರಂದು ಎಲ್ಲಾ ವರ್ಷ ಅಯಂಕಾಲಿ ದಿನವನ್ನಾಗಿ ಆಚರಿಸಲಾಗುವುದು. ಶ್ರೀ ಅಯ್ಯಂಗಾಳಿಯವರು ತಿರುವನಂತಪುರದ ವೆಂಗನೂರು ಎಂಬಲ್ಲಿ ಶ್ರೀ ಅಯ್ಯನ್ ಮತ್ತು ಶ್ರೀಮತಿ ಮಾಲ ದಂಪತಿಗಳಿಗೆ 1863 ಅಗಸ್ಟ್ 28ರಂದು ಜನಿಸಿದರು. ಕೇರಳದ ದಲಿತ ಸಮುದಾಯದ ಸಾಮಾಜಿಕ ರಾಜಕೀಯ ಶೈಕ್ಷಣಿಕ…

Read More

ಶಿರಿಯ ಪ್ರಗತಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೊಸರು ಕುಡಿಕೆ ಉತ್ಸವ.

ಉಪ್ಪಳ ಮುಟ್ಟಂ ಶಿರಿಯ ಪ್ರಗತಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ಬಿನ ವತಿಯಿಂದ 28 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ ಹಾಗೂ ಮಕ್ಕಳಿಗೆ ವಿವಿಧ ಅತೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಮದ್ಯಾನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಯು.ಎಮ್ ಮೂಲ್ಯ ಧಾರ್ಮಿಕ ಭಾಷಣ ಮಾಡಿದರು. ಶಶಿ ಆರ್.ಕೆ ಅಧ್ಯಕ್ಷತೆ ವಹಿಸಿದ ಸಭೆ ಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರಿಯ ಪ್ರಶಸ್ತಿ ಪಡೆದ ಡಾ. ವಿಜಯ್ ಪಂಡಿತ್…

Read More

ಕೃಷ್ಣ ಜನ್ಮಾಷ್ಟಮಿ ಸಮಿತಿ ಇಡಿಯ ಕಡಂಬಾರಿನಲ್ಲಿ 22ನೇ ವರ್ಷದ ಮೊಸರುಕುಡಿಕೆ ಉತ್ಸವ ಆಚರಣೆ

ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಇಡಿಯ ಕಡಂಬಾರು ಇಲ್ಲಿ 22ನೇ ವರ್ಷದ ಮೊಸರುಕುಡಿಕೆ ಉತ್ಸವನ್ನು ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ದೂಮ ಪೂಜಾರಿ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಅಂಗವಾಗಿ ಮಕ್ಕಳು,ಮಹಿಳೆಯರು ಹಾಗು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು . ಸಾಯಂಕಾಲ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷ ಸ್ಥಾನವನ್ನು ಜನ ಜಾಗೃತಿ ವೇದಿಕೆ ಮಂಜೇಶ್ವರ ಇದರ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಮಾಡ ವಹಿಸಿದರು .ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಂಬಾರು ಮಂಗಲ್ಪಾಡಿ ಇದರ ಮುಖ್ಯಸ್ಥರು ಹಾಗು ಧಾರ್ಮಿಕ ಮುಂದಾಳು ಡಾ ವಿಜಯ ಪಂಡಿತ್…

Read More

ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವ ದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ

ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ (ರಿ) K.G.D 6412ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಮಾಡಿ ಮಾತನಾಡಿದರು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಶಕ್ತಿಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ. ಯುವಶಕ್ತಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ,ಯುವಶಕ್ತಿ ಲೈಬ್ರೆರಿ ಕಾರ್ಯದರ್ಶಿ…

Read More

ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ( ರಿ) ಗುವೇದಪಡ್ಪು ನಲ್ಲಿ ಸ್ವಾತಂತ್ರ್ಯ ದಿನಾಚರಣೆ.

ಗುವೇದಪಡ್ಪು: ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ( ರಿ) ಗುವೇದಪಡ್ಪು ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರವೀಂದ್ರ ಬಗಂಬಿಲ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಚಿದಾನಂದ ಶೆಟ್ಟಿ ಗುವೇದಪಡ್ಪು ,ಚಂದ್ರಹಾಸ ಕತ್ತೆರಿಕೋಡಿ ಶುಭ ಹಾರೈಸಿದರು.ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

ಮಾದಕ ಮುಕ್ತ ಸಮಾಜಕ್ಕೆ ಕರೆ, ಸರಕಾರಿ ಪ್ರೌಢಶಾಲೆ ಮೂಡಂಬೈಲಿನಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಇಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯೀನಿ ಶ್ರೀಮತಿ ದಯಾವತಿ ಸಾಲಿಯನ್ ಧ್ವಜಾರೋಹಣ ನಡೆಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು . ಬಳಿಕ ಮುಖ್ಯ ಅತಿಥಿಗಳಾದ ಮಂಜೇಶ್ವರ ಜನ ಮೈತ್ರಿ ಪೊಲೀಸ್ ಅಧಿಕಾರಿಯಾದ ಮಧು ಸರ್ ಅವರು ಮಾತನಾಡಿ ನಮ್ಮ ಸಮಾಜ ಮಾದಕ ವಸ್ತುವಿನ ಪಿಡುಗುವಿನಿಂದಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ ಇದನ್ನು ಬಗೆಹರಿಸಲು ನಾವೆಲ್ಲರೂ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಕೈಜೋಡಿಸಬೇಕಾಗಿ ವಿನಂತಿಸಿದರು. ಬಳಿಕ…

Read More

ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)K .G .D 6412 ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಯು.ಶೆಟ್ಟಿ ಧ್ವಜಾರೋಹಣ ಮಾಡಿ ಉದ್ಘಾಟಿಸಿ ಮಾತಾಡಿದರು. ಈ ಸಂದರ್ಭದಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ಆರ್ ಶೆಟ್ಟಿ ಶುಭಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ, ಲೈಬ್ರೆರಿ ಕಾರ್ಯದರ್ಶಿ…

Read More
error: Content is protected !!