ಗುಜರಾತ್ ನ ಅಹಮದಾಬಾದ್ ನ ಮೇಘಾನೀ ಪ್ರದೇಶದಲ್ಲಿ ನೆಲಕ್ಕಪ್ಪಳಿಸಿದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ
ಗುಜರಾತಿನ ಅಹ್ಮದಾಬಾದ್ ನ ಮೇಘನಿ ನಗರ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಏರ್ ಇಂಡಿಯಾ ವಿಮಾನ ಪತನವಾಗಿದೆ. ಸರದಾರ್ ವಲ್ಲಭಾ ಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ವಿಮಾನ ಫತನವಾಗಿದ್ದು, ವಿಮಾನದಲ್ಲಿ 242ಪ್ರಯಾಣಿಕರಿದ್ದರು. ಇದರಲ್ಲಿ ಇಬ್ಬರು ಪೈಲಟ್ ಸೇರಿಜಂತೆ 12ಮಂದಿ ವಿಮಾನ ಸಿಬಂದಿಗಳೆನ್ನಲಾಗಿದೆ. ವಿಮಾನ ನಿಲ್ದಾಣ ಬಳಿಯಲ್ಲೇ ಪತನವಾದ ವಿಮಾನದಿಂದ ಬೆಂಕಿ , ದಟ್ಟ ಹೊಗೆಯೇಳುತ್ತಿದೆ. ದಟ್ಟ ಜ್ವಾಲೆಯ ಹೊಗೆಯಿಂದ ಏನೂ ಕಾಣದ ಪರಿಸ್ಥಿತಿ ಇದೆಯೆಂದು ಪ್ರಾಥಮಿಕ ವರದಿ ಉಲ್ಲೇಖಿಸಿದೆ. ಜನರ ಸಾವು ನೋವಿನ ಮಾಹಿತಿ…