ಕಣ್ಣೂರು ರೈಲು ನಿಲ್ದಾಣದಲ್ಲಿ ಆರೋಗ್ಯ ಸಚಿವೆ ಮೇಲೆ ದಾಳಿ: ಕೊರಳಿಗೆ ಗಂಭೀರ ಗಾಯ, ಎಂಆರ್‌ಐ ಸಲಹೆ

ಕಾಸರಗೋಡು: ಕಣ್ಣೂರು ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಕೆ. ಎಸ್. ಯು ನೇತೃತ್ವದಲ್ಲಿ ಆರೋಗ್ಯ ಸಚಿವೆ ವಿರುದ್ಧ ಕರಿಪತಾಕೆ ಪ್ರದರ್ಶನದ ಪ್ರತಿಭಟನೆಯ ಮರೆಯಲ್ಲಿ ಸಚಿವೆಯ ಮೇಲೆ ನಡೆದ ಆಕ್ರಮಣ ಕೇರಳಾದ್ಯಂತ ವ್ಯಾಪಕ ಪ್ರತಿಭಟನೆಗೆ ಗುರಿಯಾಗಿದೆ. ರೈಲು ನಿಲ್ದಾಣದಲ್ಲಿ ರೈಲನ್ನೇರಲು ಹೋಗುವ ಸಂದರ್ಭ ಸಚಿವೆಯನ್ನು ಆಕ್ರಮಿಸಿ ಗಾಯಗೊಳಿಸಲಾಗಿದ್ದು, ಸಚಿವೆಗೆ ಗಂಭೀರ ಏಟುಗಳಾಗಿವೆ. ಆಕ್ರಮಣದ ಬೆನ್ನಲ್ಲೇ ಕಣ್ಣೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವೆ ಯ ಆರೋಗ್ಯ ಸ್ಥಿತಿಯ ಕುರಿತು ಮೆಡಿಕಲ್ ಬುಲೆಟಿನ್ ಪ್ರಕಟಿಸಲಾಗಿದ್ದು, ಸಚಿವೆಯ ಕೊರಳಿಗೆ…

Read More

ಭಾರತೀಯ ಮಜ್ದೂರ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮತ್ತು ಪ್ರಧಾನಮಂತ್ರಿಗೆ ಮನವಿ

ಭಾರತೀಯ ಮಜ್ದೂರ್ ಸಂಘ (BMS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ವಿವಿಧ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಪ್ರತಿಭಟನೆ ಮತ್ತು ಮನವಿಯನ್ನು ದ ಕ ಜಿಲ್ಲಾಧಿಕಾರಿಗಳ ಮತ್ತು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯಲ್ಲಿ ಮಾನ್ಯ ಪ್ರಧಾನಮಂತ್ರಿಗಳಿಗೆ, ಕೇಂದ್ರ ಕಾರ್ಮಿಕ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೆ, ರಾಜ್ಯ ಕಾರ್ಮಿಕ ಸಚಿವರಿಗೆ ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳು ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಾಡಲಾಯಿತು.ಪ್ರತಿಭಟನೆ ಮತ್ತು ಮನವಿಯ ನೇತೃತ್ವವನ್ನು ಬಿಎಮ್ಎಸ್ ಜಿಲ್ಲಾ ಅಧ್ಯಕ್ಷ, ವಕೀಲರಾದ ಅನಿಲ್ ಕುಮಾರ್ ಯು ವಹಿಸಿದ್ದರು. ಪ್ರತಿಭಟನೆಯಲ್ಲಿ…

Read More

ಕಪ್ಪೆಕೆರೆ,‌ ಮಾಂಬಾಡಿ, ಜಬ್ಬಾರ್ ಸಮೊಗೆ ಯಕ್ಷಮಂಗಳ ಪ್ರಶಸ್ತಿ, ‘ಬಲಿಪ ಮಾರ್ಗ’ ಹಾಗೂ ‘ಅಗರಿ ಮಾರ್ಗ’ ಗ್ರಂಥಕ್ಕೆ ಕೃತಿ ಪ್ರಶಸ್ತಿ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ‌ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರ ‘ಬಲಿಪ ಮಾರ್ಗ ಹಾಗೂ ಅಗರಿಮಾರ್ಗ’ ಕೃತಿಯು ಆಯ್ಕೆಯಾಗಿದೆ.ಯಕ್ಷಮಂಗಳ ಪ್ರಶಸ್ತಿಯು 25,000 ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ…

Read More

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಬಾನು ಚಿಬ್ ಬಂಧನ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ … !

ಮಂಗಳೂರು:ಪ್ರಧಾನಿ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ (Epstein Files) ಎಂದು ಆರೋಪಿಸಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಬಾನು ಚಿಬ್ ಬಂಧನ ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ನಗರದ ಲಾಲ್‌ಬಾಗ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆಯನ್ನು ನಡೆಸಿದರು . ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ನೇತೃತ್ವವಹಿಸಿದ್ದರು. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ, ರಾಜ್ಯ ಯುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್, ಡೆನ್ನಿಸ್…

Read More

ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026: ವಿಜಯ್ ಕುಮಾರ್‌ಗೆ “ಕನ್ನಡ ಕಟ್ಟಾಳು” ಪ್ರಶಸ್ತಿ

ಕಾಸರಗೋಡು: ಕಾಸರಗೋಡು ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಂದ ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರ ನಂ. ವಿಜಯ್ ಕುಮಾರ್ (ವಿಜಿ) ಅವರಿಗೆ “ಕನ್ನಡ ಕಟ್ಟಾಳು” ಬಿರುದಾಂಕಿತ ಪ್ರಶಸ್ತಿ ಪ್ರದಾನಿಸಲಾಯಿತು.ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಭವನ ಪ್ರಾಯೋಜಿಸಿದ “ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026” ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಕೇರಳ ರಾಜ್ಯ ಬಿಜೆಪಿ ಕೊಝಿಕೋಡ್ ವಲಯ ಅಧ್ಯಕ್ಷ ಅಡ್ವೋ. ಎ. ಶ್ರೀನಾಥ್, ಡಾ. ವಾಮನ್ ರಾವ್…

Read More

ಬದಿಯಡ್ಕದ ಯುವ ಪ್ರತಿಭೆ ಕಾರ್ತಿಕ್ MG ಆಚಾರ್ಯ – ಶಿವನ ಕಲಾಕೃತಿ International Book of Records ಗೆ ಭಾಜನ

ಬದಿಯಡ್ಕ ನಿವಾಸಿಗಳಾದ ಗಂಗಾಧರ ಆಚಾರ್ಯ ಮತ್ತು ಶಶಿಕಲಾ ಆಚಾರ್ಯ ದಂಪತಿಯ ಸುಪುತ್ರ ಕಾರ್ತಿಕ್ MG ಆಚಾರ್ಯ ಅವರ ಅಪೂರ್ವ ಕಲಾ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆತಿದೆ.ಕಾರ್ತಿಕ್ MG ಆಚಾರ್ಯ ಅವರ ಕೈಚಳಕದಲ್ಲಿ A/0 ಗಾತ್ರದ (4/3) ಕ್ಯಾನ್ವಾಸ್ ಮೇಲೆ ಕರಿಯಲ್ಲಿ ಅದ್ಭುತವಾಗಿ ಮೂಡಿಬಂದ ಶಿವನ ಕಲಾಕೃತಿ, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಪಾರ ಪ್ರಶಂಸೆಗೆ ಪಾತ್ರವಾಗಿದೆ. ಅತ್ಯಂತ ಸೂಕ್ಷ್ಮತೆ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಕಲಾತ್ಮಕ ನೈಪುಣ್ಯತೆಯಿಂದ ರಚಿಸಲ್ಪಟ್ಟ ಈ ಶಿವನ ಚಿತ್ರವು,…

Read More

​ಇನ್ನು ‘ಕೇರಳ’ವಲ್ಲ, ‘ಕೇರಳಂ’ ರಾಜ್ಯದ ಮರುನಾಮಕರಣಕ್ಕೆ ಕೇಂದ್ರ ಸಂಪುಟದ ಗ್ರೀನ್ ಸಿಗ್ನಲ್

​ನವದೆಹಲಿ/ಮಂಜೇಶ್ವರ: ದಶಕಗಳ ಬೇಡಿಕೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಮಹತ್ವದ ಅನುಮೋದನೆ ನೀಡಿದೆ.​ಪ್ರಧಾನಮಂತ್ರಿಯವರ ನೂತನ ಕಚೇರಿ ‘ಸೇವಾ ತೀರ್ಥ’ದಲ್ಲಿ ನಡೆದ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಮಲಯಾಳಿಗಳ ದೀರ್ಘಕಾಲದ ಕನಸು ನನಸಾಗುವತ್ತ ಹೆಜ್ಜೆ ಇಟ್ಟಿದೆ. ಬದಲಾವಣೆಯ ಹಾದಿ ಹೀಗಿದೆ:​ಸಂವಿಧಾನ ತಿದ್ದುಪಡಿ: ಭಾರತೀಯ ಸಂವಿಧಾನದ ಒಂದನೇ ಅನುಸೂಚಿಯಲ್ಲಿ ಪ್ರಸ್ತುತ ‘ಕೇರಳ’ ಎಂದಿರುವ ಹೆಸರನ್ನು ‘ಕೇರಳಂ’…

Read More

ಸಿಪಿಐ ನಾಯಕಿ ಹಿಂದೂ ಸಮಾವೇಶದಲ್ಲಿ ಭಾಗಿ: ಪಕ್ಷದಿಂದ ಸುಂದರಿ ಶೆಟ್ಟಿಗೆ ಕಾರಣ ಕೇಳಿ ನೋಟಿಸ್ ಜ್ಯಾರಿ

​ಮಂಜೇಶ್ವರ: ಮೀಂಜ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯೆ ಸುಂದರಿ ಶೆಟ್ಟಿ ಅವರು ಆರ್‌ಎಸ್‌ಎಸ್ ನೇತೃತ್ವದ ‘ಹಿಂದೂ ಸಮಾಜೋತ್ಸವ’ದಲ್ಲಿ ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೈದ್ಧಾಂತಿಕವಾಗಿ ಸಂಘ ಪರಿವಾರವನ್ನು ವಿರೋಧಿಸುವ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕಿಯೇ ಇಂತಹ ಸಮಾವೇಶದಲ್ಲಿ ಕಾಣಿಸಿಕೊಂಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ​ಮೀಂಜದಲ್ಲಿ ನಡೆದ ಏಕತಾ ಸಮ್ಮೇಳನದಲ್ಲಿ ಸುಂದರಿ ಶೆಟ್ಟಿ ಅವರು ಭಾರತಾಂಬೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಲ್ಲದೆ, ವೇದಿಕೆಯಲ್ಲಿ ಭಾಷಣವನ್ನೂ ಮಾಡಿದ್ದರು. ಸಂಘದ ಶತಮಾನೋತ್ಸವದ ಅಂಗವಾಗಿ…

Read More

ಆಂಬ್ಯುಲೆನ್ಸ್ ವಾಹನದಲ್ಲಿ ಗಂಡು ಮಗುವಿಗೆ ಜನ್ಮ .ಹೆರಿಗೆ ಮಾಡಿಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಸಿಸ್ಟರ್ ಗಳು

ಬೆಳ್ತಂಗಡಿ : ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಹೋಗುತ್ತಿದ್ದಾಗ ದಾರಿ ಮಧ್ಯೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಫೆ.23 ರಂದು ಬೆಳಗ್ಗಿನ ಜಾವ ಹೆರಿಗೆಗೆಂದು ಬಂದಿದ್ದ ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಲೀಲಾವತಿ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು.ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲೇ ಹೆರಿಗೆಯಾಗಬೇಕೆಂಬ ಅಭಿಲಾಷೆಯೊಂದಿಗೆ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಇಬ್ಬರು ಶುಶ್ರೂಶಕಿಯರ ಜೊತೆಗೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ತುರ್ತು ವಾಹನದಲ್ಲಿ ವೈದ್ಯರು ಮಂಗಳೂರಿಗೆ ಕಳುಹಿಸಿದ್ದರು….

Read More

ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಜನರ ಜೀವನ ಸುಭದ್ರ: ಸಂಸದ ಕೋಟ

ಉಡುಪಿ: ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ಉಡುಪಿಯಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ…

Read More
error: Content is protected !!