ದುಬೈ: ಕರಾವಳಿಯ ಯಶಸ್ವಿ ಪ್ರದರ್ಶನ ಗೊಳ್ಳುತ್ತಿರುವ ತುಳು ಚಿತ್ರ ಕಟ್ಟೆಮಾರ್ ದುಬೈನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿ ಅಪಾರ ಪ್ರತಿಕ್ರಿಯೆ ಪಡೆಯುತ್ತಿದೆ. ಯುಎಇಯಲ್ಲಿ ವಾಸಿಸುವ ತುಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಆಗಮಿಸಿ ಚಿತ್ರತಂಡಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು.
ದುಬೈ ನಗರದ ಪ್ರಮುಖ ಥಿಯೇಟರ್‌ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು. ವಿದೇಶದಲ್ಲಿ ತುಳು ಚಿತ್ರದ ಬಿಡುಗಡೆ ಕರಾವಳಿ ಕಲಾವಿದರ ಪರಿಶ್ರಮಕ್ಕೆ ದೊರೆತ ದೊಡ್ಡ ಗೌರವವೆಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದರು .ಚಿತ್ರದ ಕಥೆ, ಹಾಸ್ಯ ಮತ್ತು ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ಬಗ್ಗೆ ಪ್ರಶಂಸೆಯ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.
ತುಳು ಚಿತ್ರರಂಗವು ದೇಶ-ವಿದೇಶಗಳಲ್ಲಿ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಮಾರ್ ಚಿತ್ರದ ದುಬೈ ಬಿಡುಗಡೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಚಿತ್ರರಂಗದವರು ಹೇಳಿದ್ದಾರೆ.ಒಟ್ಟಿನಲ್ಲಿ, ಕರಾವಳಿಯ ಸಾಂಸ್ಕೃತಿಕ ಸೊಗಡನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವತ್ತ ತುಳು ಚಿತ್ರರಂಗ ಮತ್ತೊಂದು ಹೆಜ್ಜೆ ಇಟ್ಟಿದೆ.