ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಸಾವು

ವಾಷಿಂಗ್ಟನ್; ಅಮೆರಿಕಾದ ಆಸ್ಟಿನ್ ಸಾಮೂಹಿಕ ಗುಂಡಿನ ದಾಳಿಯಲ್ಲಿ ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಸಾವಿಗೀಡಾಗಿದ್ದಾರೆ. ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ಗುಂಡು ಹಾರಿಸಿದ ಶೂಟರ್ ನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್‌ನ ವೆಸ್ಟ್ ಸಿಕ್ಸ್ತ್ ಸ್ಟ್ರೀಟ್‌ನಲ್ಲಿರುವ ಬುಫೋರ್ಡ್‌ನಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಸಾವನ್ನಪ್ಪಿದವರನ್ನು ಭಾರತೀಯ-ಅಮೆರಿಕನ್ ವಿದ್ಯಾರ್ಥಿ 21 ವರ್ಷದ ಸವಿತಾ ಶಾನ್ ಮತ್ತು ಇನ್ನೊಬ್ಬಳು 19 ವರ್ಷದ ರೈಡರ್ ಹ್ಯಾರಿಂಗ್ಟನ್ ಎಂದು ಗುರುತಿಸಲಾಗಿದೆ.

ಸವಿತಾ ಶಾನ್

ಆಸ್ಟಿನ್ ಪೊಲೀಸ್ ಇಲಾಖೆ ಗುಂಡಿನ ದಾಳಿಯಲ್ಲಿ ಮೃತಪಟ್ಟ ಇಬ್ಬರನ್ನು ಮಾತ್ರ ಗುರುತಿಸಿದ್ದರೂ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

53 ವರ್ಷದ ನ್ಡಿಯಾಗಾ ಡಯಾಗ್ನೆ ಎಂದು ಗುರುತಿಸಲಾದ ಶೂಟರ್ ಭಾನುವಾರ ಆಸ್ಟಿನ್‌ನ ಜನದಟ್ಟಣೆಯ ಬಾರ್‌ನಲ್ಲಿ ಗುಂಡು ಹಾರಿಸಿದ್ದಾರೆ. ಶಂಕಿತನ ಬಟ್ಟೆಗಳು ಇರಾನಿನ ಧ್ವಜದ ವಿನ್ಯಾಸ ಹೊಂದಿದ್ದವು ಮತ್ತು ಅದರಲ್ಲಿ “ಅಲ್ಲಾಹನ ಆಸ್ತಿ” ಎಂದು ಬರೆಯಲಾಗಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಿದ್ದು ಅಮೆರಿಕಾದಲ್ಲಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಮತ್ತು ವಿರುದ್ದ ಹೇಳಿಕೆ ಸಮರ, ಸಂಭ್ರಮೋತ್ಸವ ಮತ್ತು ಪ್ರತಿಭಟನೆಗಳು ನಡೆಯುತ್ತಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!