ಚೆನ್ನೈ: ಇತ್ತೀಚೆಗೆ ಮಧುರೈನ ಬೀದಿ ಬದಿಯಲ್ಲಿ ಸಣ್ಣ ಹೊಟೇಲ್ ನಡೆಸುತ್ತಿರುವ ತಮ್ಮ ಕಟ್ಟಾ ಅಭಿಮಾನಿಯೊಬ್ಬರನ್ನು ಭೇಟಿಯಾದ ಸೂಪರ್‌ಸ್ಟಾರ್ ರಜನಿಕಾಂತ್ ಆತನ ಗೌರವಾನ್ವಿತ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಮಾನಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಳೆದ 15 ವರ್ಷಗಳಿಂದ ಮಧುರೈನ ರಸ್ತೆ ಬದಿಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿರುವ ನಟ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ ಶೇಖರ್, 15 ವರ್ಷಗಳ ಹಿಂದೆ ರಜನೀಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಐದು ರೂಪಾಯಿಗೆ ಪರೋಟ ಮಾರಾಟ ಮಾರಲು ಪ್ರಾರಂಭಿಸಿದರು
ಅಂದಿನಿಂದ ಇಂದಿನವರೆಗೂ ಅದೇ 5 ರೂಪಾಯಿ ಬೆಲೆಯಲ್ಲಿ ಪರೋಟ ಮಾರಾಟ ಮಾಡುತ್ತಿದ್ದಾರೆ. ಇಂದು ಎಲ್ಲಾ ಕಚ್ಚಾಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದರೂ ,ಶೇಖರ್ ಅವರು ತಮ್ಮಲ್ಲಿ ಹಸಿದು ಬರುತ್ತಿರುವ ಬಡ ಗ್ರಾಹಕರಿಗಾಗಿ ಬೆಲೆಯನ್ನು ಏರಿಸದೆ ಕೇವಲ 5 ರೂಪಾಯಿಗೆ ಪರೋಟವನ್ನು ನೀಡುತ್ತಿದ್ದಾರೆ.ರಜನೀಕಾಂತ್ ಅವರ ಅಭಿಮಾನಿ ಆಗಿರುವ ಅವರು ಮಧುರೈಯಾದ್ಯಂತ ತುಂಬಾ ಫೇಮಸ್ ಅಲ್ಲಿನ ಜನ ಅವರನ್ನು “ರಜನೀ ಶೇಖರ್ ” ಎಂದೇ ಕರೆಯುತ್ತಿದ್ದಾರೆ
ತಮ್ಮ ಪುಟ್ಟ ಹೋಟೆಲ್ ನ ಗೋಡೆಗಳ ಮೇಲೆಲ್ಲಾ ರಜನೀಕಾಂತ್ ಅವರ ಪೋಟೋ, ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಕೈಯ ಮೇಲೆ ರಜನೀಕಾಂತ್ ಚಿತ್ರದ ಹಚ್ಚೆಯನ್ನೂ ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಜನೀಕಾಂತ್ ಅವರು ಶೇಖರ್ ಅವರನ್ನು ಅವರ ಕುಟುಂಬ ಸಮೇತ ತಮ್ಮ ಮನೆಗೆ ಆಹ್ವಾನಿಸಿ ಅವರು ಮಾಡುತ್ತಿರುವ ಸೇವೆಗೆ ಧನ್ಯವಾದ ತಿಳಿಸಿದ್ದಲ್ಲದೆ, ಅವರಿಗೆ ಚಿನ್ನದ ಹಾರ ನೀಡಿ, ಹಣ,ತಮ್ಮ ಗುರುಗಳ ಪೋಟೋ ನೀಡಿ ಆಶೀರ್ವಾದ ಮಾಡಿದ್ದಾರೆ.