ದೇಶದೆಲ್ಲೆಡೆ ಕೋವಿಡ್ 19 ರ ಮೂರನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರ ,ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕು ಭಾದಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.ದೇಶದೆಲ್ಲೆಡೆ ವಿವಿಧ ರಾಜ್ಯಗಳಲ್ಲಾಗಿ ಒಟ್ಟು ಸಾವಿರಕ್ಕಿಂತಲೂ ಸೋಂಕು ಭಾದಿತರಾದ ಬಗ್ಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ.
ಎಲ್ಲಾ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.ಕಳೆದೆರಡು ಬಾರಿ ಬಂದ ಕೊರೊನದಿಂದಾಗಿ ಜನರು ತೀರಾ ಹೈರಾಣಾಗಿದ್ದು ಇನ್ನೊಂದು ಅಲೆಯನ್ನು ಎದುರಿಸಲು ವಿವಿಧ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ.
ಹೆಚ್ಚಾಗಿ ಬೇಸಿಗೆಕಾಲದಲ್ಲಿ ಕೊರೋನಾ ವೇಗವಾಗಿ ಹರಡುತ್ತದೆ.ಯಾಕೆಂದರೆ ಈ ಸಮಯದಲ್ಲಿ ಜನರು ಹೆಚ್ಚಾಗಿ ಹವಾನಿಯಂತ್ರಣ ಕೊಠಡಿಯನ್ನು ಬಳಸುವುದರಿಂದ,ಈ ಸಮಯದಲ್ಲಿ ಜನರು ಹೆಚ್ಚಾಗಿ ಪ್ರವಾಸ ಕೈಗೊಳ್ಳುವುದರಿಂದ ಹಾಗೂ ಇನ್ನಿತರ ಹಲವು ಕಾರಣಗಳಿಂದ ಸೋಂಕು ವೇಗವಾಗಿ ಈ ಸಮಯದಲ್ಲಿ ಹರಡುತ್ತದೆ ಎಂದು ತಜ್ಞರ ಅಭಿಪ್ರಾಯ .
ಮಹಾರಾಷ್ಟ್ರದಲ್ಲಿ ಸ್ಥಿತಿ ಅಲ್ಪ ಗಂಭೀರವಾಗಿದ್ದು ಕರ್ನಾಟಕದಲ್ಲಿ ಈಗಾಗಲೇ ಕೊರೋನಾ ಪಾಸಿಟಿವ್ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದೆ.ಈ ಬಗ್ಗೆ ಆರೋಗ್ಯ ಇಲಾಖೆ ತೀವ್ರ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ,ಎಲ್ಲಾ ರಾಜ್ಯ ಸರಕಾರಗಳು ವಿವಿಧ ರೀತಿಯ ಸಭೆಗಳನ್ನು ಮಾಡಿ ,ವಿವಿಧ ಆಯಾಮಗಳಲ್ಲಿ ಚರ್ಚಿಸಿ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಚಿಂತಿಸುತ್ತಿದೆ.ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಕೆಲವು ಸೂಚನೆಗಳನ್ನು ನೀಡಿದ್ದು ,ಶೀತ ಜ್ವರ ಇರುವ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ.ಕೇರಳದಲ್ಲೂ ಸೋಂಕು ಹರಡುವಿಕೆ ವ್ಯಾಪಕವಾಗಿದ್ದು ಕಳೆದ ಬಾರಿಯೂ ಕೇರಳದಲ್ಲೇ ಕೊರೋನಾ ಮೊದಲ ಪ್ರಕರಣ