ಹನಿಮೂನ್ ಗೆ ತೆರಳಿದ ಜೋಡಿ ನಾಪತ್ತೆ ಪ್ರಕರಣ ಇನ್ನೂ ಕಗ್ಗಂಟಾಗಿದೆ

ಯುವಕ ಶವವಾಗಿ ಪತ್ತೆಯಾದರೂ, ಯುವತಿ ವಿಚಾರ ಇನ್ನೂ ಪ್ರಶ್ನೆಯಾಗಿ ಉಳಿದಿದೆ

ಇಂದೋರ್ ನಲ್ಲಿ ಸಾರಿಗೆ ವ್ಯವಹಾರ ಮಾಡುತಿದ್ದ ರಘುವಂಶಿ ಫ್ಯಾಮಿಲಿ.ಮನೆಯ ಪುತ್ರ ರಾಧಾ ರಘುವಂಶಿಯ ವಿವಾಹವು ಸೋನಮ್ ಎನ್ನುವ ಯುವತಿಯೊಂದಿಗೆ ಮೇ 11 ರಂದು ವಿವಾಹವಾಗಿತ್ತು.ಎರಡೂ ಕುಟುಂಬದ ಒಪ್ಪಿಗೆಯಿಂದಲೇ ಈ ವಿವಾಹ ನೆರವೇರಿತ್ತು.


ವಿವಾಹ ನಂತರ ಅನಿಮೂನ್ ಗೆಂದು ಮೊದಲು ಕಾಶ್ಮೀರಕ್ಕೆ ತೆರಳುವ ಆಲೋಚನೆ ಮಾಡಿದ್ದರು. ಪೆಹಲ್ ಗಾವ್ ಘಟನೆಯ ನಂತರ ತಮ್ಮ ತೀರ್ಮಾನದಲ್ಲಿ ಬದಲಾವಣೆ ಮಾಡಿಕೊಂಡು ಅಸ್ಸಾಂ ಗೆ ತೆರಳಲು ನಿರ್ಧರಿಸಿ ಮೇ 20 ರಂದು ಹನಿಮೂನ್ ಗೆಂದು ಅಸ್ಸಾಂ ವಿಮಾನವೇರಿ ಅಂದು ಸಾಯಂಕಾಲ ಅಸ್ಸಾಂ ಗೊಹಟಿ ತಲುಪತ್ತಾರೆ. ಅಂದು ಅಲ್ಲೇ ಉಳಿದು ಮರುದಿನ ಕಾಮಾಕ್ಯ ದೇವಸ್ಥಾನ ಸಂದರ್ಶಸಿ ಮೇ 22 ರಂದು ಬೆಳಗ್ಗೆ ಮೇಘಲಯಕ್ಕೆ ತೆರಳುತ್ತಾರೆ, ಪ್ರಪಂಚದಲ್ಲೇ ಅತೀ ಹೆಚ್ಚು ಮಳೆ ಬೀಳುವ ಚಿರಾಪುಂಜಿಯಾ ಸಮೀಪ ಒಂದು ಹೋಂಸ್ಟೇ ಪಡೆದು ಉಳಿದು ಕೊಂಡು ಅಂದೇ ಒಂದು ಆಕ್ಟಿವಾ ಸ್ಕೂಟರನ್ನು ಕೂಡ ಬಾಡಿಗೆ ಪಡೆದು ಸ್ಕೂಟರಿನಲ್ಲಿ ತಿರುಗಾಡಿ ಮತ್ತೆ ಹೋಂ ಸ್ಟೇಗೆ ವಾಪಸಗುತ್ತಾರೆ. ಹಾಗೆ ಅಂದು ಕಳೆದು ಮರುದಿನ ಮೇ 23 ರಂದು ಬೆಳಗ್ಗೆ ಹೋಂ ಸ್ಟೇಯಿಂದ ಚೆಕ್ ಔಟ್ ಮಾಡಿ ಸ್ಕೂಟರಿನಲ್ಲಿ ಪಟ್ಟಣವನ್ನು ಸುತ್ತಿ ಮದ್ಯಾಹ್ನ ಟ್ರಕಿಂಗ್ ಗೆ ತೆರಳುತ್ತಾರೆ.

ಬಹಳ ಎತ್ತರವಾದ ಜಾಗ ಆದಾಗಿತ್ತು. ಟ್ರಕಿಂಗ್ ಮದ್ಯೆ ಸುಸ್ತಾದ ಸೊನಮ್ ಒಂದು ಕಾಫಿ ಶಾಪಲ್ಲಿ ಉಳಿದುಕೊಳ್ಳುತ್ತಾಳೆ. ರಘುವಂಶಿಯ ತನ್ನ ಯಾತ್ರೆಯನ್ನ ಮುಂದುವರಿಸುತ್ತಾನೆ. ಮದ್ಯಾಹ್ನ ಸುಮಾರು 1 ಮತ್ತು 2:0ರ ಮದ್ಯೆ ಸೊನಮ್ ಗೆ ತನ್ನ ಅತ್ತೆ (ರಘುವಂಶಿಯ ತಾಯಿ) ಕಾಲ್ ಬರುತ್ತೆ. ಅತ್ತೆ ಸೊಸೆ ಮದ್ಯೆ ಕುಶಲೋಪಚಾರ ನಡೆಯುತ್ತೆ ನಂತರ ತಾನು ವೃತದಲ್ಲಿರುವುದರಿಂದ ಸರಿಯಾಗಿ ಆಹಾರ ವ್ಯವಸ್ಥೆ ಇಲ್ಲದೇ ಇರುವುದರಿಂದ ಸುಸ್ತಾಗಿ ಕಾಫಿ ಶಾಪಲ್ಲಿ ಉಳಿದು ಕೊಂಡಿರುವ ವಿಚಾರ ಮತ್ತು ರಘುವಂಶಿ ಹತ್ತಿರದ ಜಲಾಶಯ ಕ್ಕೆ ಹೋಗಿರುವುದಾಗಿ ತಿಳಿಸಿ ಸ್ವಲ್ಪ ಕಳೆದು ಕಾಲ್ ಮಾಡುತ್ತೇನೆ ಎಂದು ಹೇಳಿ ಕರೆ ಅಂತ್ಯ ಗೊಳಿಸುತ್ತಾಳೆ. ಮತ್ತೆ 2 ಗಂಟೆ ಬಳಿಕ ಕರೆ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಒಫ್ ಆಗಿತ್ತು ಏನೋ ಘಾಟಿ ಪ್ರದೇಶವಾದುದರಿಂದ ರೇಂಜ್ ಇಲ್ಲದಿರಬಹುದು ಎಂದುಕೊಂಡು ಸುಮ್ಮನಾಗಿ ಮತ್ತೆ ಸ್ವಲ್ಪ ಸಮಯದ ನಂತರ ಕಾಲ್ ಮಾಡಿದಾಗಲೂ ಸ್ವಿಚ್ ಒಫ್ ಆಗಿತ್ತು ಅಂದು ಪೂರ್ತಿ ಸಂಪರ್ಕ ಸಿಗಲೇ ಇಲ್ಲ ಮರುದಿನ ಕಾಲ್ ಮಾಡಿದಾಗ ಮತ್ತೆ ಸ್ವಿಚ್ ಒಫ್ ಬಂದಾಗ ಮನೆಯವರು ಗಾಭರಿ ಗೊಳ್ಳುತ್ತಾರೆ. ಆದರೂ ಬೆಟ್ಟ ಪ್ರದೇಶ ಮಾತ್ರವಲ್ಲ ಹೆಚ್ಚು ಮಳೆ ಸುರಿಯುವ ಪ್ರದೇಶ ಆದರಿಂದ ನೆಟ್ವರ್ಕ್ ಸಮಸ್ಯೆ ಇರಬಹುದು ಎಂದುಕೊಂಡು ತಮಗೆ ತಾವೇ ಸಮಾಧಾನ ಮಾಡಿಕೊಂಡು ಕಾಲ್ ಗಾಗಿ ಕಾಯುತ್ತಾರೆ. ಆದರೆ ಎರಡೂ ದಿನವಾದ್ರೂ ಕಾಲ್ ಬರದೇ ಇದ್ದಾಗ ಅನುಮಾನ ಗೊಂಡ ಮನೆಯವರು ತಮ್ಮ ಕಿರಿಯ ಮಗನ್ನು ಮತ್ತು ಸೊನಮ್ ನ ಸಹೋದರನನ್ನು ಮೇಘಾಲಯಕ್ಕೆ ಕಳಿಸುತ್ತಾರೇ. ಮೇ 25ರಂದು ಮೆಗಾಲಯ ತಲುಪಿದ ಸಹೋದರರು ಪೊಲೀಸ್ಟೇಷನಲ್ಲಿ ಕಂಪ್ಲೇಂಟ್ ನೀಡುತ್ತಾರೆ.

ಹಾಗೆ ರಘುವಂಶಿ ಮತ್ತು ಸೊನಮ್ ತಿರುಗಾಟದ ಮದ್ಯೆ ಕಳುಹಿಸಿದ ಫೋಟೋ ಗಳನ್ನು ಪೊಲೀಸರಿಗೆ ನೀಡುತ್ತಾರೇ,ಅಚಾನಕ್ಕಾಗಿ ಪೊಲೀಸರಿಗೆ ಫೋಟೋದಲ್ಲಿ ಇವರ ಹಿಂಬದಿ ನಿಲ್ಲಿಸಿರುವ ಆಕ್ಟಿವಾದ ಮೇಲೆ ಕಣ್ಣಾಯಿಸುತ್ತಾರೆ. ಅದರಲ್ಲಿ ಫೋನ್ ನಂಬರ್ ಬರೆದಿತ್ತು. ಆ ನಂಬರಿಗೆ ಕರೆ ಮಾಡುತ್ತಾರೆ ಅದು ಆಕ್ಟಿವಾ ಬಾಡಿಗೆ ನೀಡಿದವನ ನಂಬರ್ ಆಗಿತ್ತು, ವಿಷಯ ತಿಳಿಸಿದಾಗ ಅವರೇ ಬಾಡಿಗೆಗೆ ತೆಗೆದುಕೊಂಡು ಹೋಗಿರುವುದು ಮತ್ತು ಇದುವರೆಗೂ ಹಿಂತಿರುಗಿಸಲೇ ಇಲ್ಲ ಮತ್ತು ಅವರು ಸಂಪರ್ಕಕ್ಕೆ ಸಿಗಿತಿಲ್ಲ ಎಂದು ಅವನೂ ತಿಳಿಸುತ್ತಾನೆ, ಪಕ್ಕದ ಎಲ್ಲಾ ಪೊಲೀಸ್ಟೇಷನಿಗೂ ಕಂಪ್ಲೇಂಟ್ ರವಾನಿಸಲಾಗುತ್ತದೆ, ಆಗಲೇ ತಿಳಿಯುತ್ತದೆ ಒಂದು ಆಕ್ಟಿವಾ ಸಂಶಯ ರೀತಿಯಲ್ಲಿ ನಿಲ್ಲಿಸಿವುದು ಪತ್ತೆಯಾಗುತ್ತದೆ ಪರಿಶೀಲಿಸಿದಾಗ ಅದೇ ಸ್ಕೂಟರ್ ಆಗಿರುರುತ್ತದೆ.


ಅಷ್ಟಗಲೇ ಇಂದೋರ್ ಪೊಲೀಸ್ ಕೂಡ ಮೇಘಾ ಲಯ ಪೊಲೀಸರನ್ನು ಸಂಪರ್ಕಿಸಿ ಶೋದ ತ್ವರಿತ ಗೊಳಿಸಲು ಕೇಳಿಕೊಳ್ಳುತ್ತರೇ.


ವಿಶೇಷ ಪಡೆಯೊಂದಿಗೆ ಸ್ಕೂಟರ್ ನಿಲ್ಲಿಸಿದ ಸುತ್ತ ಮುತ್ತ ಶೋದ ಆರಂಭಿಸಿದ ಮೇಘಾಲಯ ಪೊಲೀಸರಿಗೆ ಬಹಳ ಪ್ರಯತ್ನದ ಬಳಿಕ ದೂರದ ಕಾಡಿನಲ್ಲಿ ಚಲ್ಲಾ ಪಿಲ್ಲಿಯಾದ ಸ್ಥಿತಿಯಲ್ಲಿ ಎರಡು ಬ್ಯಾಗ್ ಕಾಣಸಿಗುತ್ತದೆ. ಸಹೋದರ ಪರೀಕ್ಷಿಸಿದಾಗ ಅದು ಅವರದ್ದೇ ಬ್ಯಾಗ್ ಎಂದು ದೃಢ ಗೊಳ್ಳುತ್ತದೆ. ಮತ್ತೆ ಶೋದ ಆರಂಭಿಸಿದ ಪೊಲೀಸರಿಗೆ ಇನ್ನೊಂದು ಆಳದ ಪ್ರದೇಶದಲ್ಲಿ ಶವವೊಂದು ಪತ್ತೆಯಾಗುತ್ತದೆ, ಗುರುತು ಹಿಡಿಯಲು ಸಾದ್ಯವಾಗದ ರೀತಿಯಲ್ಲಿದ್ದ ಶವದ ಕೈಯಲ್ಲಿದ್ದ ಟ್ಯಾಟೋ ನೋಡಿ ಸಹೋದರ ತನ್ನ ಅಣ್ಣನ ಶವವೆಂದು ದೃಡೀಕರಿಸುತ್ತಾನೆ.

ಹಾಗಿದ್ದರೆ ಸೊನಮ್ ಎಲ್ಲಿ ….ಇದುವರೆಗೂ ಸೊನಮ್ ಪತ್ತೇ ಇಲ್ಲ,,…ರಘುವಂಶಿಯ ಶವ ಪರೀಕ್ಷೆಯಲ್ಲಿ ಇನ್ನೊಂದು ಸತ್ಯ ಹೊರಬರುತ್ತದೆ,ರಘುವಂಶಿಯನ್ನು ಮಾರಕಯುಧ ದಿಂದ ಹೊಡೆದು ಕೊಲ್ಲಲಾಗಿದೆ. ಹಾಗಿದ್ದರೆ ಕೊಂದವರು ಯಾರು? ಸೊನಮ್ ಎಲ್ಲಿ ? ಈ ಮದ್ಯೆ ರಘುವಂಶಿಯ ದೇಹದಲ್ಲಿ ಸುಮಾರು 10. ಲಕ್ಷಕ್ಕೂ ಮಿಕ್ಕ ಬೆಲೆಬಾಳುವ ಆಭರಣಗಳು ಇದ್ದವು. ಈಗ ಯಾವುದೂ ಇಲ್ಲ ಆಗಿದ್ದರೆ ದರೋಡೆ ಮಾಡಿ ಕೊಂದಿರಬಹುದೇ? ಸೊನಮ್ಗೆ ಏನಾಗಿರಬಹುದು?

SHARE
Loading spinner

Leave a Reply

Your email address will not be published. Required fields are marked *

error: Content is protected !!