ಮತ್ತೊಂದು ತಾಂತ್ರಿಕ ನಿಯೋಗಕ್ಕೆ ಶಶಿ ತರೂರ್, ಲಕ್ಷ್ಮಣ ರೇಖೆ ದಾಟಿದರೆ ಶಿಸ್ತು ಕ್ರಮ: ಕೆ. ಸಿ ಎಚ್ಚರಿಕೆ

ತಿರುವನಂತಪುರ : ಆಪರೇಷನ್ ಸಿಂಧೂರ್ ನಂತರ ವಿದೇಶ ರಾಜ್ಯಗಳಿಗೆ ಭಾರತೀಯ ನಿಲುವುಗಳನ್ನು ಕೇಂದ್ರ ಸರಕಾರ ನಿಯೋಜಿಸಿದ ರಾಜ ತಾಂತ್ರಿಕ ನಿಯೋಗ ವು ವಿದೇಶ ರಾಜ್ಯಗಳ ಪರ್ಯಟನೆ ಮಾಡಿ ತಮ್ಮ ಯುದ್ಧ ನೀತಿಯ ಬಗ್ಗೆ ವಿವರಿಸಿ ಯಶಸ್ವಿಯಾಗಿ ಹಿಂತಿರುಗಿದ ಬಳಿಕ ಮತ್ತೊಮ್ಮೆ ಇದೇ ನಿಯೋಗ ವಿಶ್ವ ರಾಷ್ಟ್ರಗಳ ಪರ್ಯಟನೆ ಮಾಡುವ ಯೋಜನೆ ಕೇಂದ್ರ ಸರಕಾರದ ಚಿಂತನೆಯಲ್ಲಿದೆ.

ಈ ನಿಯೋಗವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರ್ವಹಿಸಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಇದು ಇರಿಸುಮುರಿಸು ಉಂಟು ಮಾಡಿದೆ. ಮೊದಲಿನ ನಿಯೋಗದಲ್ಲಿ ತರೂರ್ ಪಾಲ್ಗೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಒಪ್ಪಿಗೆ ಇಲ್ಲದಿದ್ದರೂ, ದೇಶದ ರಾಜತಾಂತ್ರಿಕ ವಿಷಯದಲ್ಲಿ ತಾನು ರಾಜಕೀಯ ಮಾಡುವುದಿಲ್ಲ, ತನ್ನ ಸೇವೆಯನ್ನು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿ ನನ್ನಿಂದಾದ ಸೇವೆಯನ್ನು ಮಾಡುತ್ತೇನೆಂದು ತರೂರ್ ಸ್ಪಷ್ಟಪಡಿಸಿದ್ದರು.

ಇದೀಗ ಮತ್ತೊಮ್ಮೆ ಅದೇ ನಿಯೋಗ ವಿದೇಶಯಾತ್ರೆ ಮಾಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಸಹಜವಾಗಿಯೇ ಅಸಮಾಧಾನವಿದ್ದು ಶಶಿ ತರೂರ್ ಲಕ್ಷ್ಮಣ ರೇಖೆ ದಾಟಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಚ್ಚರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!