ವೈಟ್ನರ್ ಬಳಸದಿರಿ…ಇದು ಹಾನಿಕಾರಕ.
ವಿಶ್ವ ಮಾನವ ಕುಲಕ್ಕೆ ಮಾರಕವಾಗಿ ಪರಿಣಮಿಸುವ ಮಾದಕ ವಸ್ತುಗಳನ್ನು ಸಂಪೂರ್ಣ ತಡೆಗಟ್ಟಿ ಮಾದಕ ವ್ಯಸನ ದಿಂದ ಮುಕ್ತರಾಗಿ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ” ನಶಾ ಮುಕ್ತ್ ಭಾರತ್” ಯೋಜನೆಯ ಅಂಗವಾಗಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟಕ್ಕೆ ಕಠಿಣ ನಿರ್ಬಂಧಗಳನ್ನು ಹೇರಬೇಕಾದ ಅಗತ್ಯವಿದೆ.
ಇತ್ತೀಚಿನದಿನಗಳಲ್ಲಿ ವಿದ್ಯಾರ್ಥಿಗಳು ಸಹಿತ ನಾವೆಲ್ಲರೂ ಹೆಚ್ಚಾಗಿ ಉಪಯೋಗಿಸುವ ವೈಟ್ನರ್ ಪೀಡ್ ತೀರಾ ಹಾನಿಕಾರಕವಾಗಿದ್ದು ಇದರ ಉಪಯೋಗಕ್ಕೆ ನಿಷೇಧ ಹೇರಬೇಕಾದ ಅಗತ್ಯವಿದೆ. ಅಪ್ಪಿ ತಪ್ಪಿ ಇದನ್ನು ಸೇವಿಸಿದ್ದಲ್ಲಿ ಇದು ಮೆದುಳಿನ ಹಾಗೂ ನರಗಳಿಗೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. 18 ವರ್ಷ ಕೆಳಗಿನ ವಿದ್ಯಾರ್ಥಿಗಳು ಇದನ್ನು ಉಪಯೋಗಿಸುವುದಕ್ಕೆ ಸರಕಾರವು ನಿಷೇಧ ಹೇರಿದೆ.
ವಿದ್ಯಾರ್ಥಿಗಳು ಹೆಚ್ಚಾಗಿ ಆತಂಕ ಹಾಗೂ ಪರೀಕ್ಷಾ ಭಯಗಳನ್ನು ನಿವಾರಿಸಲು ಹೆಚ್ಚಾಗಿ ಮಾದಕ ವಸ್ತುಗಳನ್ನು ಉಪಯೋಗಿಸಿ ತನ್ನ ಜೀವನವನ್ನೇ ಬಲಿಕೊಟ್ಟ ಅದೆಷ್ಟೋ ಪ್ರಸಂಗಗಳು ನಡೆದಿದೆ. ವಿದ್ಯಾ ಸಂಸ್ಥೆಗಳ 100 ಮೀಟರ್ ಅಂತರದಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಸರಕಾರ ನಿಷೇಧ ಹೇರಿದ್ದರೂ ಗೌಪ್ಯವಾಗಿ ಇದರ ಮಾರಾಟವಾಗುತ್ತಿರುವುದು ಕಳವಳಕಾರಿಯಾಗಿದೆ.
ಡ್ರಗ್ಸ್, ಗಾಂಜಾ ದಂತಹ ಮಾದಕ ವಸ್ತುಗಳು ಪೊಲೀಸರ ಕಣ್ಣು ತಪ್ಪಿಸಿ ಸಾಗಾಟವಾಗುತ್ತಿದ್ದು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಕ್ರೀಡಾಪಟುಗಳು ತಮ್ಮ ಸಾಮರ್ಥ್ಯದ ಉತ್ತೇಜನಕ್ಕೆ ಬೇಕಾಗಿ ಕೆಲವೊಮ್ಮೆ ಇಂತಹ ಅಮಲು ಪದಾರ್ಥಗಳನ್ನು ಸೇವಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯವಾಗಿದೆ. ಇದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಏರಬೇಕಾದ ಅಗತ್ಯವಿದೆ.
ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಜಾಗೃತಿ ಶಿಬಿರಗಳು, ವಿವಿಧ ರೀತಿಯ ಮಾಹಿತಿ ತರಗತಿಗಳು ನಡೆಯಬೇಕಿದ್ದು, ಮಾದಕ ವ್ಯಸನದ ವಿರುದ್ಧ ಸಾಮೂಹಿಕ ಹೋರಾಟದ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯಯಿದ್ದು ಶಾಲಾ ಪಠ್ಯ ಪುಸ್ತಕದಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ. ಮಾದಕ ವಸ್ತುಗಳ ಮಾರಾಟದ ವಿರುದ್ಧ ಪೊಲೀಸರ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅತಿ ಅಗತ್ಯವಾಗಿದ್ದು , ಪೊಲೀಸರ ಮತ್ತು ಸಾರ್ವಜನಿಕರ ಜಂಟಿ ಸಹಭಾಗಿತ್ವದಲ್ಲಿ ಮಾತ್ರ ಸರಕಾರದ ಕಾನೂನುಗಳನ್ನು ಜಾರಿಗೆ ತಂದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಾಧ್ಯವಿದೆ.
ಈ ನಿಟ್ಟಿನಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮೊದಲ 15 ದಿನ ವ್ಯಸನ ಮುಕ್ತದ ಬಗ್ಗೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಸೇರಿದಂತೆ ವಿವಿಧ ವಿಷಯದ ಕುರಿತಾಗಿ ಮಾಹಿತಿ ತರಗತಿಗಳನ್ನು ನಡೆಸಲು ಅದಿಸೂಚನೆ ನೀಡಿ ಶಾಲೆಗಳಲ್ಲಿ ಕಾರ್ಯರೂಪಕ್ಕೆ ಬರುವಂತೆ ಮಾಡಿದ್ದು ಶ್ಲಾಘನೀಯವಾಗಿದೆ. ಭಾರತ ಸರಕಾರವು ಈ ನಿಟ್ಟಿನಲ್ಲಿ ನಶಾ ಮುಕ್ ಭಾರತ್ ಯೋಜನೆಯ ಮೂಲಕ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಟಕ್ಕೆ ಹೆಚ್ಚಿನ ನಿರ್ಬಂಧಗಳನ್ನು ಹೇರಿ ಕಠಿಣ ಕಾನೂನುಗಳನ್ನ ರೂಪಿಸಿದ್ದು ಉತ್ತಮ ಕಾರ್ಯವಾಗಿದೆ. ಎಲ್ಲಾ ಸರಕಾರಗಳು ಮಾದಕ ವಸ್ತುಗಳ ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರಿ ಧರೆ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.