ಶಬರಿಮಲೆಯ ಅಯ್ಯಪನ ದರ್ಶನ ಪಡೆದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು

ತಿರುವನಂತಪುರಂ, ಅ. 22  ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಇರುಮುಡಿ ಕಟ್ಟು ಹೊತ್ತು ಶಬರಿಮಲೆಗೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸೋಮವಾರದಿಂದ ಸಂಜೆ 6:20ರ ಸುಮಾರಿಗೆ ತಿರುವನಂತಪುರಂಕ್ಕೆ ಆಗಮಿಸಿದ ಮುರ್ಮು ಅವರಿಂದು ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್‌ಡೋರ್ ಸ್ಟೇಡಿಯಂಗೆ ಬಂದಿಳಿದರು . ನಂತರ ಅಲ್ಲಿಂದ ಶಬರಿಮಲೆಗೆ ತೆರಳಿ ತುಲಾ ಮಾಸ ಪೂಜೆಯ ಕೊನೆಯ ದಿನದಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!