ಭಾಷೆ, ಸಾಹಿತ್ಯ, ಸಂಸ್ಕೃತಿಪರ ಚಟುವಟಿಕೆ ಮೂಲಕಸ್ವಸ್ಥ ಸಮಾಜ ನಿರ್ಮಾಣ ಡಾ| ಎಚ್. ಪ್ರಭಾಕರ್ ರಾವ್

ಮಂಗಳೂರು:ಕಲೆ ಸಾಹಿತ್ಯಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಆರೋಗ್ಯಪೂರ್ಣರಾಗಿರುತ್ತಾರೆ. ಇದು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರದಾನ ಪಾತ್ರವಹಿಸುತ್ತದೆ. ವ್ಯಕ್ತಿ ಆರೋಗ್ಯ ವೈದ್ಯರಿಂದ ಸರಿಪಡಿಸಲಾಗುವುದು ಸಮಾಜದ ಸ್ವಾಸ್ಥ ಆರೋಗ್ಯಪೂರ್ಣವಾಗಬೇಕಾದರೆ, ವಾಮನ ರಾಯರಂತಹ ಸಂಘಟಕರ ಯೋಚನೆ, ಯೋಜನೆಗಳು ಸಾಂಗವಾಗಿ ನಡೆಯಬೇಕಿದೆ, ಅದಕ್ಕೆ ಎಲ್ಲರೂ ಸ್ಪಂದಿಸಬೇಕಿದೆ ಎಂದು ಕನ್ನಡ ಭವನದ “ರಜತ ಸಂಭ್ರಮ” ಕಾರ್ಯಕ್ರಮವಾದ ”ನಾಡು-ನುಡಿ ಹಬ್ಬ”-2026 ಕನ್ನಡ ಭವನದ “ಶ್ರೀ ಕೃಷ್ಣ ದೇವರಾಯ” ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಡಾ| ಎಚ್. ಪ್ರಭಾಕರ್ ಮಂಗಳೂರು ಅಭಿಪ್ರಾಯಪಟ್ಟರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ| ರವೀಂದ್ರ ಜೆಪ್ಪು ಸಮಾರೋಪ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ “ಶ್ರೀ ಶ್ರೀ ಭಿಕ್ಷು ಡಾ| ಲಕ್ಷ್ಮಣಾನಂದ ಸ್ವಾಮೀಜಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ”-2026 ಪ್ರದಾನ ಮಾಡಲಾಯಿತು. ಡಾ| ರವೀಂದ್ರ ಜೆಪ್ಪು, ಕೆ. ಶ್ರೀನಿವಾಸ್ ಸೆರ್ವೆಗಾರ್ ಹೆಬ್ರಿ, ಎಚ್.ಶಶಿಧರ್ ನಾÊಕ್, ಜೆ.ಕೆ.ರಾವ್ ಮಂಗಳೂರು, ಡಾ| ಬಾಲಕೃಷ್ಣ ಎಸ್. ಮದ್ದೋಡಿ, ಡಾ| ದೇವಪ್ಪ ಕೆ.ವಿ, ಡಾ| ಸತೀಶ್, ಡಾ| ರಾಜೇಶ್ ಮಂಗಳೂರು, ಪ್ರದೀಪ್ ಬೇಕಲ್, ಕೊತ್ವಾಲ್ ಪದ್ಮನಾಭ ಶೆರುಗಾರ್, ಡಾ| ರಾಜೇಂದ್ರ, ಮಂಜುನಾಥ ಬೈಂದೂರು, ಗಣಪತಿ ಹೋಬಳಿದಾರ್, ಉಮೇಶ್ ಕುಂಬ್ಳೆ, ದಿನೇಶ್ ನಾಗರಕಟ್ಟೆ, ಶ್ರೀಮತಿ ರೇಖಾ ಸುಧೇಶ್ ರಾವ್, ನಾಗರಾಜ್ ಮದ್ದೋಡಿ ಇವರೀಗೆ ಪ್ರಶಸ್ತಿ ನೀಡಲಾಯಿತು. ಇದೇ ವೇದಿಕೆಯಲ್ಲಿ ಕಾಸರಗೋಡು ನಗದಸಭೆಗೆ ಆಯ್ಕೆಯಾದ ಬಿ.ಜೆ.ಪಿಯ 12 ನೂತನ ನಗರಸಭಾ ಸದಸ್ಯರೀಗೆ ಕನ್ನಡ ಭವನದಿಂದ ಡಾ| ವಾಮನ್ ರಾವ್ ಬೇಕಲ್ ಗೌರವಿಸಿದರು. ಕನ್ನಡ ಭವನದ ಕಳೆದ 25 ವರ್ಷದ ಸಹಯಾತ್ರಿಕರೀಗೆ “ರಜತ ಸಂಭ್ರಮದ ಗೌರವ ಪ್ರಶಸ್ತಿ” ನೀಡಲಾಯಿತು.
ರಜತ ಸಂಭ್ರಮ ಸಮಿತಿ ಸಂಚಾಲಕ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ಸ್ವಾಗತಿಸಿ ಕನ್ನಡ ಭವನದ ದ.ಕ. ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಸುಧೇಶ್ ರಾವ್ ಕಾರ್ಯಕ್ರಮ ನಿರೂಪಣೆಗೈದು ಕಾರ್ಯದರ್ಶಿ ವಸಂತ್ ಕೆರೆಮನೆ ಧನ್ಯವಾದವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!