ಬಹುವರ್ಷಗಳ ಬೇಡಿಕೆ ಈಡೇರಿಕೆ: ಅನಧಿಕೃತ ಬಡಾವಣೆ ಸಕ್ರಮ, ಮನೆ ನಿರ್ಮಾಣಕ್ಕೆ ದಾರಿ ತೆರೆದಿತು

ಪುತ್ತೂರು; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜಾಗವನ್ನು ಕಟ್ ಮಾಡಿ ಕೃಷಿಯೇತರ ವಿಚಾರಗಳಿಗೆ ಬಳಕೆ ಮಾಡಿಕೊಂಡಿರುವ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗುವಂತೆ ರಾಜ್ಯ ಸರ್ಕಾರ ಇದೀಗ ಅನಧಿಕೃತ ಬಡಾವಣೆಗಳನ್ನು ಸಕ್ರಮೀಕರಿಸುವ ಮೂಲಕ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ನೀಡುವ ಮಹತ್ವದ ಕೆಲಸ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೨೦೨೪ರ ಸೆಪ್ಟಂಬರ್ ೧೦ರ ಮೊದಲು ರಚಿಸಲಾದ ಅಕ್ರಮ ಬಡಾವಣೆಗಳನ್ನು ರಾಜ್ಯ ಸರ್ಕಾರ ಅಕ್ರಮಗೊಳಿಸಲು ಮುಂದಾಗಿದೆ. ಇದರಿಂದ ಈ ಹಿಂದೆ ಕೃಷಿ ಕೃತಾವಳಿಯ ಜಮೀನಿನನ್ನು ತಮ್ಮ ಮಕ್ಕಳಿಗೆ ಪಾಲು ಮಾಡಿ ಹಂಚಿರುವ ಸಾಕಷ್ಟು ಮಂದಿಗೆ ಮನೆ ನಿರ್ಮಾಣ ಮಾಡಲು ಇದ್ದ ತೊಡಕು ನಿವಾರಣೆಯಾದಂತಾಗಿದೆ. ಇದು ದಕ್ಷಿಣ ಕನ್ನಡ ಮತ್ತು ಉಡುಪಿಜಿಲ್ಲೆಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿತ್ತು. ಕಟ್ ಕನ್ವರ್ಷನ್ ಸಮಸ್ಯೆಯಿಂದ ಇರುವ ಜಾಗವನ್ನೂ ಅನುಭವಿಸಲಾಗದೆ ತುಂಬಾ ಮಂದಿ ಪರದಾಡುವಂತಾಗಿತ್ತು. ಇಂತಹ ಜಾಗದಲ್ಲಿ ಅನಧಿಕೃತವಾದ ಬಡಾವಣೆಗಳನ್ನು ನಿರ್ಮಿಸಿದವರಿಗೂ ಸಾಕಷ್ಟು ತೊಂದರೆಗಳುAಟಾಗಿತ್ತು. ಸರ್ಕಾರ ಷರತ್ತುಬದ್ಧವಾಗಿ ಸಕ್ರಮಕ್ಕೆ ಅವಕಾಶ ಕಲ್ಪಿಸಿರುವುದು ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿದಂತಾಗಿದೆ ಎಂದು ಅವರು ತಿಳಿಸಿದರು.

ಇಂತಹ ಅಕ್ರಮ ಬಡಾವಣೆಗಳು ರಸ್ತೆಯನ್ನು ಹೊಂದಿರಬೇಕು ಎಂಬುವುದು ಕಡ್ಡಾಯ ನಿಮಯವಾಗಿದೆ.
ಕೃಷಿಕರು ತಮ್ಮ ಜಮೀನನ್ನು ಮಕ್ಕಳಿಗೆ ಪಾಲು ಮಾಡಿಕೊಟ್ಟಿದ್ದರೂ ಈ ಪ್ರತಿಯೊಂದು ಜಾಗಕ್ಕೂ ರಸ್ತೆ ಅಗತ್ಯ. ಒಂದು ವೇಳೆ ರಸ್ತೆಗೆ ಜಾಗದ ಕೊರತೆ ಇದ್ದರೆ ಪಾಲು ಮಾಡಿಕೊಟ್ಟಿರುವ ಜಾಗದಲ್ಲಿಯೇ ರಸ್ತೆ ನಿರ್ಮಿಸಲು ದಾನಪತ್ರದ ಮೂಲಕ ನಗರಸಭೆಗೆ ರಸ್ತೆಗೆ ಬೇಕಾದ ಸ್ಥಳವನ್ನು ನೀಡಬೇಕು. ಹಾಗಾದ ಪಕ್ಷದಲ್ಲಿ ಮಾತ್ರ ಈ ಸಕ್ರಮೀಕರಿಸುವ ಹಾಗೂ ನಗರಸಭೆಯಿಂದ ಖಾತೆಯನ್ನು ಹೊಂದುವ ಅವಕಾಶ ನೀಡಲಾಗಿದೆ. ಆದರೆ ೨೦೨೪ದ ನಂತರದ ಅಕ್ರಮ ಬಡಾವಣೆಗಳಿಗೆ ಈ ಸಕ್ರಮ ವ್ಯವಸ್ಥೆ ಇಲ್ಲ. ಇನ್ನು ಮುಂದೆ ಮಾಡುವ ಯಾವುದೇ ಅನಧಿಕೃತ ಬಡಾವಣೆಗಳಿಗೂ ಸಕ್ರಮದ ಅವಕಾಶವನ್ನು ಪ್ರಸ್ತುತ ನಿರಾಕರಣೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಆದೇಶವಾಗಿದೆ ಎಂದು ಅವರು ತಿಳಿಸಿದರು.
೩ ಸೇತುವೆ ರೂ.೬.೦೫ ಕೋಟಿ ಅನುದಾನ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ ರೂ. ೨.೪೦ ಕೋಟಿ ಅನುದಾನ ಮಂಜೂರಾಗಿದೆ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಪಂಗೆ ಸೇರಿದ ಪರ್ಪುಂಜ ಕುಟಿನೋಪಡ್ಕ ರಸ್ತೆಯ ಮುಳಿಯಡ್ಕ ಎಂಬಲ್ಲಿ ಸರ್ವಋತು ಸೇತುವೆ ನಿರ್ಮಾಣಕ್ಕಾಗಿ ರೂ.೨ ಕೋಟಿ ಅನುದಾನ ಮಂಜೂರುಗೊAಡಿದೆ.

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯಾರು ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಾಣಕ್ಕಾಗಿ ರೂ.೧.೬೫ ಕೋಟಿ ಮಂಜೂರುಗೊAಡಿದ್ದು, ಒಟ್ಟು ೩ ಸೇತುವೆಗಳಿಗೆ ರೂ.೬.೦೫ ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿದೆ ಎಂದವರು ತಿಳಿಸಿದರು.

ಧಾರ್ಮಿಕ ತಾಣಗಳಿಗೆ ಪಹಣಿ- ಪ್ರಾಯೋಗಿಕ ಚಿಂತನೆ
ಪುತ್ತೂರು ತಾಲೂಕಿನ ಧಾರ್ಮಿಕ ತಾಣಗಳು ಬಹುತೇಕ ಸರ್ಕಾರಿ ಜಾಗದಲ್ಲಿದ್ದು, ಇದಕ್ಕೆ ಯಾವುದೇ ಅನುದಾನ ನೀಡಲು ಅವಕಾಶ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ತಾಲೂಕಿನ ೯ ಧಾರ್ಮಿಕ ತಾಣಗಳಿಗೆ ಜಾಗ ಮಂಜೂರು ಮಾಡಿ ದೇವರ ಹೆಸರಲ್ಲಿಯೇ ಪಹಣಿಪತ್ರಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ತಾಲೂಕಿನ ದೈವಗಳ ಗುಡಿ, ಭಜನಾಮಂದಿರ, ದೇವಸ್ಥಾನ, ಚರ್ಚು, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ತಾಣಗಳು ಸರ್ಕಾರಿ ಜಾಗದಲ್ಲಿದ್ದರೆ ಅಂತಹ ಧಾರ್ಮಿಕ ತಾಣಗಳಿಗೆ ಸ್ವಂತ ನೆಲೆ ಕಲ್ಪಿಸುವ ಚಿಂತನೆ ಇದರ ಹಿಂದೆ ಅಡಗಿದೆ.

ಪ್ರಸ್ತುತ ಪ್ರಾಯೋಗಿಕ ನೆಲೆಯಲ್ಲಿ ಈ ಕಾರ್ಯ ನಡೆಯುತ್ತಿದೆ. ಮುಂದೆ ಎಲ್ಲಾ ಧಾರ್ಮಿಕ ತಾಣಗಳಿಗೂ ಇದು ಅನ್ವಯವಾಗಲಿದೆ. ಈ ಪ್ರಾಯೋಗಿಕ ಚಿಂತನೆಗೆ ತಂತ್ರಾAಶದಲ್ಲಿ ಅಳವಡಿಕೆ ಯಶಸ್ವಿಯಾದರೆ ರಾಜ್ಯಕ್ಕೇ ಮಾದರಿಯಾಗಲಿದೆ ಎಂದು ಅವರು ಹೇಳಿದರು.
ಹಾರಾಡಿ ಅಂಡರ್‌ಪಾಸ್ ರೈಲ್ವೇ ಬ್ರಿಡ್ಜ್ ಗೆ ರೂ.೮ ಕೋಟಿಅನುದಾನ ಮಂಜೂರುಗೊAಡಿದೆ. ರೈಲ್ವೇ ಬೋರ್ಡಿನ ಮೇಲುಸ್ಥುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿ ನಡೆಸಲಿದೆ. ರೈತವರ್ಗದ ಬೆಳೆ ವಿಮೆ ವಿಚಾರವಾಗಿ ಬೆಂಗಳೂರಿನಲ್ಲಿ ಸ್ವೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ಸಭೆ ನಡೆಯಲಿದೆ. ಇದರಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ವಿಮಾ ಕಂಪೆನಿ ಅಧಿಕಾರಿಗಳ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ನಿಹಾಲ್ ಶೆಟ್ಟಿ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಗ್ಯಾರಂಟಿಯೋಜನೆಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಪಿ.ಆಳ್ವ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!