ಮಂಗಳೂರು: ಪಿಲಿಕುಳ ಗಾಲ್ಫ್ ಕ್ಲಬ್‌ನಲ್ಲಿ ಇಂದು ಸಂಜೆ 4 ಗಂಟೆಗೆ ಭಾರತದ ಮೊದಲ ಫ್ಲಡ್‌ಲೈಟ್ ಪ್ರೊ-ಆಮ್ ಗಾಲ್ಫ್ ಟೂರ್ನಮೆಂಟ್ (ಮಂಗಳೂರು ಕಪ್) ಉದ್ಘಾಟನೆಯಾಗಲಿದ್ದು ಇದರಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಗಾಲ್ಫ್ ಆಟಗಾರರು ಭಾಗವಹಿಸಲಿದ್ದು ಇದು ಪ್ರಮುಖ ಕ್ರೀಡಾ ಬೆಳವಣಿಗೆಯಾಗಿದೆ ಎಂದು ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು.
ಅವರು ಗಾಲ್ಫ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಪಂದ್ಯಾಕೂಟದಲ್ಲಿ ೧೨ ಜನ ಅಂತರಾಷ್ಟ್ರೀಯಯ ಗಾಲ್ಫ್ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ . ಇಂದು ೧೦ ಪಂದ್ಯಕೂಟಗಳು ನಡೆಯಲಿದೆ . ಈ ಪಂದ್ಯಕೂಟಕ್ಕೆ ದೆಹಲಿ , ನಾಗಪುರ , ಬೆಂಗಳೂರು , ಮೈಸೂರು ಹೀಗೆ ಬೇರೆ ಬೇರೆ ರಾಜ್ಯದ ಸ್ಪರ್ದಿಗಳು ಭಾಗವಹಿಸಲಿದ್ದಾರೆ ಎಂದರು .
ಪಿಜಿಸಿ ಅಧ್ಯಕ್ಷರು ಹಾಗು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್.ವಿ ಅವರ ಮಾರ್ಗದರ್ಶನದಲ್ಲಿ ಕಲ್ಪಿಸಲ್ಪಟ್ಟ ಮತ್ತು ಕಾರ್ಯಗತಗೊಳಿಸಲಾದ ಈ ಪಂದ್ಯಾವಳಿಯನ್ನು ಮಂಗಳೂರಿನಲ್ಲಿ ಗಾಲ್ಸ್ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಈ ಪ್ರದೇಶಕ್ಕೆ ಬಲವಾದ ಮತ್ತು ಸುಸ್ಥಿರ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂದರು .
ಈ ಪಂದ್ಯಾಕೂಟದಲ್ಲಿ ಹವ್ಯಾಸಿ ಗಾಲ್ಫ್ ಆಟಗಾರದ ಅಮನ್ ರಾಜ್, ಆರ್ಯನ್ ರೂಪ ಆನಂದ್, ದಿವ್ಯಾಂಶು ಬಜಾಜ್, ಎಂ. ಧರ್ಮ, ಅಲಾಪ್ ಐ.ಎಲ್., ಯಶಸ್ ಚಂದ್ರ ಎಂ.ಎನ್.. ಉದಯನ್ ಮಾನೆ, ಖಾಲಿನ್ ಜೋಶಿ, ಸ್ನೇಹ ಸಿಂಗ್, ಅವನಿ ಪ್ರಶಾಂತ್, ಚಿಕ್ಕರಂಗಪ್ಪ ಎಸ್., ಮತ್ತು ಸಮರ್ಥ್ ದ್ವಿವೇದಿ ಭಾಗವಹಿಸಲಿರುವರು ಎಂದರು .
ಪತ್ರಿಕಾಗೋಷ್ಠಿಯಯಲ್ಲಿ ಪಂದ್ಯಾವಳಿಯ ನಿರ್ದೇಶಕರಾದ ಗೌತಮ್ ಆರ್ ಪಡಿವಾಳ್ , ಹವ್ಯಾಸಿ ಗಾಲ್ಫ್ ಆಟಗಾರರಾದ ಅಮನ್ ರಾಜ್, ಆರ್ಯನ್ ರೂಪ ಆನಂದ್, ದಿವ್ಯಾಂಶು ಬಜಾಜ್, ಎಂ. ಧರ್ಮ, ಅಲಾಪ್ ಐ.ಎಲ್., ಯಶಸ್ ಚಂದ್ರ ಎಂ.ಎನ್.. ಉದಯನ್ ಮಾನೆ, ಖಾಲಿನ್ ಜೋಶಿ, ಸ್ನೇಹ ಸಿಂಗ್, ಅವನಿ ಪ್ರಶಾಂತ್, ಚಿಕ್ಕರಂಗಪ್ಪ ಎಸ್., ಮತ್ತು ಸಮರ್ಥ್ ದ್ವಿವೇದಿ ಭಾಗವಹಿಸಲಿರುವರು.