ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ದ್ವಾರಕೋತ್ಸವ-೨೦೨೬ ಕಾರ್ಯಕ್ರಮವು ಫೆ.೧ ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಾರಕೋತ್ಸವವು ವರ್ಷಂಪ್ರತಿ ಆಚರಿಸುತ್ತಿರುವ ಗ್ರಾಹಕರ ಹಾಗೂ ಸಮಾಜದ ಸಕಲ ಬಂಧುಗಳ ಸಮ್ಮಿಲನ ದ್ವಾರಕೋತ್ಸವದಲ್ಲಿ ಸಾಧಕರಿಗೆ ಸನ್ಮಾನ, ಕಲಾಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುತ್ತಿರುವ ಎಳೆಯರ ರಾಮಾಯಣ, ಕಿಶೋರ ಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ನಡೆಯಲಿದೆ ಎಂದರು.
ಬೆಳಗ್ಗೆ ೧೦ ಗಂಟೆಗೆ ಸಭಾ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಹೇಶ್ ಕಜೆ ಉದ್ಘಾಟಿಸಲಿದ್ದು, ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭಾಸ್ಕರ ಬಾರ್ಯ, ಬಿ.ವಿ. ಸೂರ್ಯನಾರಾಯಣ ಭಾಗವಹಿಸಲಿದ್ದಾರೆ.
ವೇದ ವಿದ್ವಾಂಸ ವಿದ್ವಾನ್ ಗಣೇಶ್ ಭಟ್ ಪರಕ್ಕಜೆ, ಡಾ. ಹರಿಕೃಷ್ಣ ಪಾಣಾಜೆ, ವಿದ್ವಾನ್ ದಈಪಕ್ ಕುಮಾರ್, ಮುರಳೀಕೃಷ್ಣ ಅವರಿಗೆ ಸನ್ಮಾನ ನಡೆಯಲಿದೆ. ಇದೇ ಸಂದರ್ಭದಲ್ಲಿಅರ್ತ್ಯಡ್ಕದ ಹರಿಕೃಷ್ಣ ಭಟ್ ಹಾಗೂ ಉಪ್ಪಿನಂಗಡಿಯ ನವೀನಕೃಷ್ಣರ ನೂತನ ಗ್ರಂಥಗಳು ಲೋಕಾರ್ಪಣೆಗೊಳ್ಳಲಿದೆ.
ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಲೆ ಗ್ರಂಥ ಅನಾವರಣ ಮಾಡಲಿದ್ದಾರೆ ಎಂದು ಹೇಳಿದರು.
ವಿಚಾರಗೋಷ್ಠಿ
ಮಧ್ಯಾಹ್ನ ೧೨ ಗಂಟೆಗೆ `ಸ್ವಾವಲಂಬನೆಗಾಗಿ ಆರ್ಥಿಕ ಹೂಡಿಕೆ ಎಂಬ ವಿಚಾರಗೋಷ್ಠಿ ನಡೆಯಲಿದೆ. ಸಮನ್ವಯಕಾರರಾಗಿ ವಿರ್ವಕಾನಂದ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಡೀನ್ ಡಾ. ವಿಜಯ ಸರಸ್ವತಿಯವರು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಆರ್ಥಿಕ ತಜ್ಞ ಕುಂಬ್ಳೆ ನರಸಿಂಹ ಪ್ರಭು ಪಾಲ್ಗೊಳ್ಳಲಿದ್ದಾರೆ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಸಂಶೋಧಿತ ವಿಚಾರಗಳನ್ನು ಮಂಡಿಸಲಿದ್ದಾರೆ.
ಇಳಿ ಹಗಲಿನಲ್ಲಿ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಅಬ್ಬರತಾಳ, ಕೀಬೋರ್ಡ್ ವಾದನ ಯಕ್ಷಗಾನ ವೈಭವ, ಪಟ್ಟಿ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾರಾಧನ, ಝೀ ಕನ್ನಡ ಖ್ಯಾತಿಯ ಅಖಿಲಾ ಪಜಿಮಣ್ಣು ಬಳಗದವರಿಂದ ಗಾನರಸಧಾರ, ವಿದ್ವಾನ್ ಕಲಾದೀಪ ದೀಪಕ್ ಕುಮಾರ್ ಬಳಗದವರಿಂದ ಭರತನಾಟ್ಯ ಹಾಗೂ ಕೊನೆಯಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ `ಭೂಮಿಪುತ್ರ’ ಎಂಬ ಯಕ್ಷಗಾನ ಬಯಲಾಟವಿದೆ.
ಊಟ, ಉಪಾಹಾರ, ಸನ್ಮಾನನೀಯರ ಭವ್ಯ ಮೆರವಣಿಗೆ, ಗ್ರಾಹಕರೊಂದಿಗೆ ವಿಚಾರ, ವಿನಿಮಯಗಳೊಂದಿಗೆ ಹನ್ನೆರಡು ಗಂಟೆಗಳ ನಿರಂತರ ಕಾರ್ಯಕ್ರಮವಿದಾಗಿರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ, ಕಾರ್ಯದರ್ಶಿ ಗಣರಾಜ ಕುಂಬ್ಲೆ, ಆಪರೇಷನ್ ಹೆಡ್ ದುರ್ಗಾ ಗಣೇಶ್ ಉಪಸ್ಥಿತರಿದ್ದರು.