ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಸಭಾಭವನದಲ್ಲಿ ಕಲಾ ಸೌರಭ ಸಂಗೀತ ವಿದ್ಯಾರ್ಥಿಗಳ ಕಲಾ ಸಂಭ್ರಮ

ಭಟ್ಕಳ- ತಾಲೂಕಿನ ಪ್ರಸಿದ್ದ ಶಿಕ್ಷಣ ಸಂಸ್ಥೆ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ನ್ಯೂ ಇಂಗ್ಲೀಷ್ ಸಭಾಭವನದಲ್ಲಿ ಶನಿವಾರ ಸಂಗೀತ ವಿದ್ಯಾರ್ಥಿಗಳ ಅದ್ಬುತ ಕಲಾ ಪ್ರದರ್ಶನ ನಡೆಯಿತು.ಕಲಾ ಸೌರಭ ಸಂಗೀತ ಶಾಲೆ ಹಾಗೂ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಇದರ ಸಹಯೋಗದಲ್ಲಿ ಶನಿವಾರ ಸಂಗೀತ ಹಾಗೂ ತಬಲ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎಪರ್ಡಿಸಲಾಗಿತ್ತು. ಕಾರ್ಯಕ್ರಮವನ್ನು ಕಲಾ ಸೌರಭ ಹಾಗೂ ಭಟ್ಕಳ ಎಜ್ಯುಕೇಷನ್ ಸಂಸ್ಥೆಯ ಮುಖ್ಯಸ್ಥರಾದ ಕೇದಾರ ಕೊಲ್ಲೆ ಹಾಗೂ ರಾಜೇಶ ನಾಯಕ ಅವರು ಉದ್ಘಾಟಿಸಿದರು.ಗಣಪತಿ ಶಿರೂರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತಾವು ಕಲಿತ ಕಲಾ ಪ್ರಕಾರಗಳನ್ನು ಅಮೋಘವಾಗಿ ಪ್ರದರ್ಶನ ಗೈದರು. ಐದು ಗಂಟೆಗಳ ಸುದೀರ್ಘ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ ರಾಗಗಳು, ತಬಲ ಸೋಲೊ ಹಾಗೂ ಗಾಯನ ಸಾಥ್ ನೀಡಿದ ರೀತಿ ಹಾಗೂ ಹಿರಿಯ ವಿದ್ಯಾರ್ಥಿ ಪರಶುರಾಮ್ ಅವರ ತಬಲ ವಾದನ ಎಲ್ಲರ ಹುಬ್ಬೆರಿಸುವಂತೆ ಮಾಡಿತು. ಕೊನೆಯಲ್ಲಿ ಸಂಗೀತ ಗುರುಗಳಾದ ಸ್ಮೀತಾ ಹೆಬ್ಬಾರ ಅವರಿಂದ ಗಾಯನ ಪ್ರಸ್ತುತಿ ನೆರೆದವರನ್ನು ಮಂತ್ರ ಮುಗ್ಧ ಗೊಳಿಸಿತು.ವಿದ್ವಾನ್ ಬಾಲಚಂದ್ರ ಹೆಬ್ಬಾರ ಅವರ ತಬಲ ವಾದನ ಹಾಗೂ ಎಂಎನ್ ಹೆಗಡೆಯವರ ಹಾರ್ಮೋನಿಯಂ ಸಾಥ್ ಅಮೋಘವಾಗಿತ್ತು.

ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಸ್ಮೀತಾ ಹೆಬ್ಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂರ್ಣಿಮಾ ನಾಯ್ಕ ಹಾಗೂ ಮಂಜುಳಾ ಶಿರೂರ್ ಕರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕಲಾ ಸೌರಭ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!