ಮಂಗಳೂರು: ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ವತಿಯಿಂದ ಪ್ರೊ. ಬಿ.ಎ. ವಿವೇಕ ರೈ ಇವರ ಕೃತಿ ಬಿಡುಗಡೆ ಸರಣಿ -1 ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆಯು ನಗರದ ಪತ್ರಿಕಾಭವನದಲ್ಲಿ ಇಂದು ನಡೆಯಿತು .
ಕೃತಿ ಲೋಕಾರ್ಪಣೆಯ ನಂತರ ಪ್ರೊ. ಬಿ.ಎ. ವಿವೇಕ ರೈ ಪ್ರಾಸ್ತಾವಿಕ ನುಡಿಯನ್ನು ಆಡಿ, ಪತ್ರಿಕಾಭವನದಲ್ಲಿ ಈ ವರ್ಷದ ನನ್ನ ಮೊದಲ ಕೃತಿ ಬಿಡುಗಡೆ ಮಾಡುತ್ತಿರುವುದು ಖುಷಿ ತಂದಿದೆ . ಇದು ನನ್ನ ಅಸೆ ಕೂಡ ಆಗಿತ್ತು . ಈ ಕೃತಿಯಲ್ಲಿ ಗತಿಸಿ ಹೋದ ಕರಾವಳಿಯ ಹಿರಿಯ ಸಾಹಿತಿಗಳು, ಸಮಾಜ ಸುಧಾಕರು , ಕವಿಗಳು , ಸಂಶೋಧರ ಕುರಿತು ಈ ಕೃತಿಯಲ್ಲಿ ಬೇಯಲಾಗಿದೆ . ಈ ಕೃತಿಯಲ್ಲಿ ಕುದ್ಮುಲ್ ರಂಗರಾವ್ , ಪಂಜೆ ಮಂಗೇಶರಾವ್ , ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ , ಮುಳಿಯ ತಿಮ್ಮಪ್ಪಯ್ಯ , ಡಾ. ಕೆ. ಶಿವರಾಮ ಕಾರಂತ , ಸೇಡಿಯಾಪು ಕೃಷ್ಣಭಟ್ಟ , ಕಡೆಂಗೋಡ್ಲು ಶಂಕರಭಟ್ಟ , ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ,ನಾಡೋಜ ಕಯ್ಯಾರ ಕಿಞ್ಞಣ್ಣ ರೈ , ಪ್ರೊ. ಎಂ. ಗೋಪಾಲಕೃಷ್ಣ ಅಡಿಗ , ಬಿ.ಎಂ. ಇದಿನಬ್ಬ , ಪ್ರೊ. ಕು.ಶಿ. ಹರಿದಾಸ ಭಟ್ಟ , ನಿರಂಜನ , ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ , ಪ್ರೊ. ಅಮೃತ ಸೋಮೇಶ್ವರ , ಪ್ರೊ. ಎಂ. ರಾಮಚಂದ್ರ , ಎಂ. ಮನೋರಮಾ ಭಟ್ ,ಡಾ. ವಾಮನ ನಂದಾವರ , ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಹೀಗೆ ೧೯ ಸಾಧಕರ ಕುರಿತು ವಿಶೇಷವಾದ ಮಾಹಿತಿ ಈ ಕೃತಿಯಲ್ಲಿ ಅಡಕವಾಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಚಂದ್ರಕಲಾ ನಂದಾವರ, ಡಾ. ಕೆ. ಚಿನ್ನಪ್ಪ ಗೌಡ, ಡಾ. ನಾ. ದಾಮೋದರ ಶೆಟ್ಟಿ , ಕಲ್ಲೂರ ನಾಗೇಶ ಉಪಸ್ಥಿತರಿದ್ದರು .