ಮೆಡಿಕಲ್ ಕಾಲೇಜು ಡೀನ್ ಪುತ್ತೂರು ಭೇಟಿ-ಶಾಸಕ ಅಶೋಕ್ ರೈ ಜೊತೆ ಮಾತುಕತೆ


ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜು ವಿಚಾರಕ್ಕೆ ಸಂಬಂದಿಸಿದಂತೆ ಕಾಲೇಜು ಡೀನ್ ಲೋಕೇಶ್ ರವರು ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.


ಈಗಾಗಲೇ ಮೆಡಿಕಲ್ ಕಾಲೇಜು ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗಿದೆ. ಕಟ್ಟಡ ನಿರ್ಮಾಣ ವಿಚಾರಕ್ಕೆ ಸಂಬಂದಿಸಿದಂತೆ ಶಾಸಕರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು ಪುತ್ತೂರು ಮೆಡಿಕಲ್ ಕಾಲೇಜಿಗೆ ಶೀಘ್ರವೇ ಶಿಲಾನ್ಯಾಸ ನೆರವೇರಲಿದೆ. ಸರಕಾರ ಶೀಘ್ರ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಲಿದೆ ಅದಕ್ಕೆ ಮೊದಲು ಸಂಬಂದಪಟ್ಟ ಎಲ್ಲಾ ಪ್ರಕ್ರಿಯೆಗಳಿಗೆ ವೇಗತೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು ನಿರ್ಮಾಣವಾಗುವ ಸಂಬಂಧ ನಿಮ್ಮ ಉತ್ಸಾಹವನ್ನು ನಾವು ಗಮನಿಸಿದ್ದೇವೆ. ನೀವು ಸರಕಾರ ಮನಸ್ಸು ಮಾಡಿದರೆ 2027 ರಲ್ಲಿ ಕಾಲೇಜು ಉದ್ಘಾಟನೆಗೊಂಡು ಪ್ರಥಮ‌ಪ್ರವೇಶಾತಿಯೂ ನಡೆಯಬಹುದು ಎಂದು ಡೀನ್ ಲೋಕೇಶ್ ಅಭಿಪ್ರಾಯಿಸಿದರು. ಈ ಸಂಧರ್ಭ ಮಡಿಕೇರಿ ಮೆಡಿಕಲ್ ಕಾಲೇಜಿನ ಸಹಾಯಕ ವೈದ್ಯರಾದ ರವಿಕಿರಣ್, ಆರೋಗ್ಯ ಇಕಾಖೆಯ ಎಡಬ್ಲ್ಯು ಗುರುಪ್ರಸಾದ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!