ಮರೋಳಿ ಶಾಂತಿನಗರದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ: ಶಾಸಕ ವೇದವ್ಯಾಸ್ ಕಾಮತ್ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಸಮೀಪದ 37ನೇ ವಾರ್ಡಿನ ಶಾಂತಿನಗರ ರುಕ್ಕಯ್ಯ ದೇವಾಡಿಗ ಮನೆ ಪರಿಸರದ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ್ ಕಾಮತ್‌ ರವರ ನೇತೃತ್ವದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಸ್ಥಳೀಯರ ಮನವಿ ಮೇರೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 28 ಲಕ್ಷ ರೂ ವೆಚ್ಚದಲ್ಲಿ ರಸ್ತೆ, ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಯು ನಡೆಯಲಿದೆ. ಇದು ತುರ್ತಾಗಿ ನಡೆಯಬೇಕಿರುವ ಕಾಮಗಾರಿಯಾಗಿದ್ದು ಈ ಹಿಂದೆಯೇ ಗುದ್ದಲಿ ಪೂಜೆ ನಡೆದಿದ್ದರೂ ಅರ್ಧಕ್ಕೆ ನಿಂತಿತ್ತು. ಇದೀಗ ಮತ್ತೆ ಪ್ರಕ್ರಿಯೆ ಆರಂಭವಾಗಿದ್ದು ಕಾಮಗಾರಿ ಸುಸೂತ್ರವಾಗಿ ಮುಂದುವರಿಯಲು ತಮ್ಮ ಒಂದಿಷ್ಟು ಸ್ಥಳವನ್ನು ಬಿಟ್ಟು ಕೊಟ್ಟು ಸಹಕರಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಪ್ರಮುಖರಾದ ಕಿರಣ್‌ ದೇವಾಡಿಗ, ಜಗದೀಶ್ ಶೆಣೈ, ರಾಘವೇಂದ್ರ, ಪ್ರಶಾಂತ್ ಪ್ರಭು, ಅರುಣ್ ಶೆಟ್ಟಿ, ಪ್ರಶಾಂತ್, ಅನಿತಾ, ಮಾಲತಿ, ಮಮತ, ರಾಜೇಶ್ ಅಲಂಗಾರ್, ಮ್ಯಾಕ್ಸಿ ಡಿಸೋಜ, ಜಾನ್ ಡಿಸೋಜ, ಆಗ್ನೇಸ್, ನಾಗೇಶ್ ಸರಳ, ಲಕ್ಷ್ಮಣ, ರುಕ್ಮಯ್ಯ, ಸುಲೋಚನ, ರಾಜೇಶ್, ದೀಪಕ್, ಸೇರಿದಂತೆ ವಾರ್ಡಿನ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!