ಸಂಸ್ಕಾರ ಪುಸ್ತಕಗಳ ಉಚಿತ ವಿತರಣೆ

ಉಡುಪಿ : ಸಚ್ಚಿದಾನಂದ ಪರಮಾರ್ಥ ಟ್ರಸ್ಟ್ ವತಿಯಿಂದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ, ಕೊಡಿ ಬೆಟ್ಟು, ಹಿರಿಯಡ್ಕ, ಉಡುಪಿ ಇಲ್ಲಿನ 60 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

‘ಸಂಸ್ಕಾರ ವಹಿ’ಯ ಮುಖಪುಟ ಹಾಗೂ ಹಿಂಬದಿಯ ಪುಟಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಪುರುಷರ ಹಾಗೂ ಉತ್ತಮ ರಾಜ್ಯಾಡಳಿತ ನಡೆಸಿ ಪ್ರಜೆಗಳ ಹಿತಕ್ಕಾಗಿ ದುಡಿದ ರಾಜ–ಮಹಾರಾಜರ ಆದರ್ಶಗಳು ನೀಡಲಾಗಿದೆ. ಒಳಗಿನ ಪುಟಗಳಲ್ಲಿ ಸುಸಂಸ್ಕಾರ ಮತ್ತು ನೈತಿಕತೆ ಕುರಿತು ವಿಷಯಗಳು ಒಳಗೊಂಡಿವೆ. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಕ್ಕಳು ‘ಆದರ್ಶ ವಿದ್ಯಾರ್ಥಿ’ಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ. ಇದರಿಂದ ಅವರು ಮುಂದೆ ‘ಆದರ್ಶ ರಾಷ್ಟ್ರ’ವನ್ನು ಕಟ್ಟಲು ಸಾಧ್ಯವಾಗುತ್ತದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರಾದ ಸೌ. ಲಲಿತಾ ಹಾಗೂ ಸೌ. ಸುವರ್ಣ ವಿಶ್ವನಾಥ್ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಾದವ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!