ಮಾಜಿ ಪ್ರಧಾನಿ ದೇವೆಗೌಡರು ಕರಾವಳಿ ಪ್ರವಾಸ ! ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮನ… !

ಕಡಬ :ಭಾರತ ಸರಕಾರದ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೆ ಗೌಡರು ರವಿವಾರ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದರು.
ಬೆಂಗಳೂರು ಜಕ್ಕೂರು ವಿಮಾನ ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೆಲಿಕಾಫ್ಟರ್ ಮೂಲಕ ಹೊರಟು 5.30ಕ್ಕೆ ಕಡಬ ತಾಲೂಕಿನ ಬಿಳಿನೆಲೆ ಹೆಲಿಪ್ಯಾಡ್ಗೆ ಆಗಮಿಸಿ ಅಲ್ಲಿಂದ ರಸ್ತೆಮೂಲಕ ಕಾರಿನಲ್ಲಿ ಬಿಗಿಭದ್ರತೆಯೊಂದಿಗೆ ಕುಕ್ಕೇ ಸುಬ್ರಹ್ಮಣ್ಯದ ವಿವಿಐಪಿ ಅತಿಥಿಗ್ರಹಕ್ಕೆ ಬಂದರು.ಈ ಸಂಧರ್ಭದಲ್ಲಿ ಶ್ರೀ ದೇವಳದ ಪರವಾಗಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂದಿ ಮಾಜಿ ಪ್ರಧಾನಿಯವರನ್ನು ಸ್ವಾಗತಿಸಿ ಬರಮಾಡಿಕೊಂಡರು.

ಅತಿಥಿಗ್ರಹದಲ್ಲಿ ವಿಶ್ರಾಂತಿ ಪಡೆದು ರಾತ್ರಿ ಮಹಾಪೂಜೆಯಲ್ಲಿ ಪಾಲ್ಗೊಂಡರು. ಹಾಗೂ ಇಂದು ಆಶ್ಲೇಷ ಪೂಜೆಯಲ್ಲಿ ಭಾಗವಹಿಸಲಿರುವರು. ದಕ್ಷಿಣ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವಗೌಡ,ರಾಜ್ಯವಕ್ತಾರರದ ಎಂಬಿ ಸದಾಶಿವ,ದಯಕರ್ ಆಳ್ವ,ಸಂತೋಷ್ ಜಾಕೆ, ಮಾಜಿ ಜಿಲ್ಲಾಪಂಚಾಯತ್ ಸಯ್ಯದ್ ಮೀರಾ ಸಾಹೇಬ್,ಕೇನ್ಯ ರವೀಂಧ್ರನಾಥ ಶೆಟ್ಟಿ, ಶಶಿರಾಜ್ ಶೆಟ್ಟಿ ಮಂಗಳೂರು, ಉಮೇಶ್ ಕುಮಾರ್ ಗೌಡ ಬಂಟ್ವಾಳ, ಚಂದ್ರಶೇಖರ ಗೌಡ ಕೂಡಿಂಬಾಳ ಶಿಷ್ಟಚಾರದ ಅಧಿಕಾರಿ ಜಯರಾಮ ರಾವ್ ಹಾಗೂ ವೈದ್ಯಾಧಿ ಕಾರಿ ಡಾl ಮಂಜುನಾಥ್, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಹಾಗೂ ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮುಂತಾದವರು ಹಾಜರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!