ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ದಾಖಲೆ ಸಡಿಲಿಕೆಗೆ ಮನವಿ ಮಾಡಿದ ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಇಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೆ ಗೌಡ ಅವರನ್ನು ಬೆಂಗಳೂರು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಆಗುವ ಸಮಸ್ಯೆಯ ಬಗ್ಗೆ ಅವರಿಗೆ ವಿಸ್ತಾರವಾಗಿ ಪವನ್ ಕುಮಾರ್ ಶಿರ್ವ ಅವರು ವಿವರಿಸಿದರು.. ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿ ಅವರಿಗೆ ಮತ್ತು ಸಚಿವರಿಗೆ ಜಾತಿ ಪ್ರಮಾಣ ಪತ್ರಕ್ಕೆ ನೀಡುವ ವಲಸೆ ಪ್ರಮಾಣ ಪತ್ರಕ್ಕೆ ಸಡಿಲಿಕೆ ನೀಡಬೇಕು ಮತ್ತು ದಾಖಲೆಗಳನ್ನು ನೀಡುವಾಗ ವಲಸೆ ಪ್ರಮಾಣ ಪತ್ರ ಕೈ ಬಿಡಬೇಕಾಗಿ ಮನವಿ ಮಾಡಿದರು..

ಈ ಸಂಧರ್ಭದಲ್ಲಿ ಮನವಿಗೆ ಸ್ಪಂದಿಸಿದ ಸಚಿವರು ಈ ಸಮಸ್ಯೆಗೆ ಆ ಎರಡು ಜಿಲ್ಲೆಗಳಲ್ಲಿ ತುಂಬಾನೇ ಕಷ್ಟ ಪಡುವುದು ಮಾಹಿತಿ ಇದೆ.. ನಿಮಗೆ ಜಾತಿ ಪ್ರಮಾಣ ಪತ್ರ ಮಾಡಲು ಅವಕಾಶ ಮಾಡಿಕೊಡುತ್ತೇವೆ.. ನೀವು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಯನ್ನು ಸಲ್ಲಿಸಿ.. ಅವರು ನಿಮಗೆ ನೀಡಲು ಸಮಸ್ಯೆ ಮಾಡಿದ್ದಲ್ಲಿ ನಮ್ಮ ಗಮನಕ್ಕೆ ತನ್ನಿ.. ಅದಕ್ಕೆ ಪರಿಹಾರ ನೀಡುತ್ತೇವೆ ಇಂದು ಪ್ರತಿಕ್ರಿಯಿಸಿದರು….

SHARE
Loading spinner

Leave a Reply

Your email address will not be published. Required fields are marked *

error: Content is protected !!