ಸರ್ವಧರ್ಮ ಭಾವೈಕ್ಯತೆಯ ಸಂದೇಶ ಸಾರಲಿರುವ ಧಾರ್ಮಿಕ ಮುಖಂಡರು

ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ 11ನೇ ವರ್ಷದ ಇಫ್ತಾರ್ ಸೌಹಾರ್ಧ ಕೂಟವು ಮಾರ್ಚ್ 7 ರಂದು ಮಂಗಳೂರಿನ ಜೆಪ್ಪು ಮೋರ್ಗನ್ಸ್‌ ಗೇಟ್ ನ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಮಾಜಿ ಕಾರ್ಪೋರೇಟರ್ ಜೆ.ನಾಗೇಂದ್ರ ಕುಮಾರ್ ತಿಳಿಸಿದರು .

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ ಹಬ್ಬ, ಕ್ರಿಸ್ಮಸ್ ಸಂಭ್ರಮಾಚರಣೆ ಹಾಗೂ ರಂಜಾನ್ ಹಬ್ಬವನ್ನು ಮಂಗಳೂರಿನ ಹಲವು ಕಡೆಗಳಲ್ಲಿ ಸರ್ವಧರ್ಮಿಯರು ಸೇರಿಕೊಂಡು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಸಂಜೆ 5:00 ಗಂಟೆ ಯಿಂದ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ .

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು, ಮುಸ್ಲಿಂ ಧರ್ಮಗುರು ಕುದ್ರೋಳಿ ನಡುಪಲ್ಲಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ, ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ ಫಾ ಜೆ ಬಿ ಜೆ.ಬಿ.ಸಾಲ್ದಾನಾ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪ್ರೋ.ಪಿ.ಎಲ್. ಧರ್ಮ ಅವರು ಭಾಗವಹಿಸಲಿದ್ದು, ಸರ್ವಧರ್ಮದ ಸಂದೇಶ ಸಾರುವರು ಸಾಮಾಜಿಕ ನೇತಾರರು, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಇನ್ನಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ .

ಸಂಜೆ 6:30 ಕ್ಕೆ ಉಪವಾಸ ಬಿಡುವ ಸಮಯದಲ್ಲಿ ನಮಾಜ್ ಮಾಡುವರೇ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ ಬಂದಂತಹ ಏಲ್ಲಾ ಸರ್ವ ಧರ್ಮಿಯರಿಗೆ ಸಹಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ . ಸುದ್ದಿಗೋಷ್ಠಿಯಲ್ಲಿ ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಇಮ್ರಾನ್ ಕುದ್ರೋಳಿ, ಸತೀಷ್ ಪೆಂಗಲ್ , ಚಂದ್ರಹಾಸ್ ಪೂಜಾರಿ ಕೋಡಿಕಲ್, ಮಹಮ್ಮದ್ ನವಾಜ್ ಮಹಾಕಾಳಿ ಪಡ್ಪು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!