ಶ್ರೀ ಗುರುಪರಾಶಕ್ತಿ ಮಠ, ಮರಕಡ ಹಾಗೂ ಶ್ರೀ ಪರಾಶಕ್ತಿ ಕ್ಷೇತ್ರ, ಮಡ್ಯಾರು ಇದರ ಸ್ಥಾಪಕ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ಪೂರ್ಣಾನುಗ್ರಹದೊಂದಿಗೆ, ಪೂಜನೀಯ ಮಾತೆ ಶಕುಂತಲಾ ಅಮ್ಮನವರು ಮತ್ತು ಶ್ರೀ ಕ್ಷೇತ್ರದ ಮಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರ ನೇತೃತ್ವದಲ್ಲಿ ನಡೆದ ಶ್ರೀ ಪರಾಶಕ್ತಿ ಕ್ಷೇತ್ರ, ಮಡ್ಯಾರು ಇಲ್ಲಿನ ಇಪ್ಪತ್ತೆರಡನೇ ಪ್ರತಿಷ್ಠಾ ವರ್ಧಂತಿ ಹಾಗೂ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಅರ್ಹ ಸಾಧಕರಿಗೆ ‘ಪ್ರತಿಭಾ ಪುರಸ್ಕಾರ’ ಮತ್ತು ‘ಸನ್ಮಾನ’ ಕಾರ್ಯಕ್ರಮ ಮಯೂರ ಮಂಟಪದಲ್ಲಿ ನಡೆಯಿತ್ತು.
ಈ ಸಂದರ್ಭದಲ್ಲಿ ಗಿರೀಶ್ ಪಿ ಎಂ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನವನ್ನು ನೀಡಲಾಯಿತ್ತು . ಇವರು 2024 ನೇ ವರ್ಷದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ‘ಇತಿಹಾಸ ಮತ್ತು ಪುರಾತತ್ತ್ವ’ ವಿಷಯದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಸನ್ಮಾನವನ್ನು ಪೂಜನೀಯ ಮಾತೆ ಶಕುಂತಲಾ ಅಮ್ಮನವರು ಮತ್ತು ಶ್ರೀ ಕ್ಷೇತ್ರದ ಮಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳ ಅಮೃತ ಹಸ್ತದಿಂದ ನೀಡಿದರು . ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ‘ಪ್ರತಿಭಾ ಪುರಸ್ಕಾರ’ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತ್ತು .