ಉಡುಪಿ: ಪವನ್ ಕುಮಾರ್ ಚಾರಿಟೇಬಲ್ ಟ್ರಸ್ಟ್ನ ಉದ್ಘಾಟನಾ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆ ನಿವಾಸದಲ್ಲಿ ನಡೆಯಿತು. ಟ್ರಸ್ಟ್ ಅನ್ನು ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಮಾಜಿ ಸಚಿವರು, ಕೊಡುಗೈ ದಾನಿ ಹಾಗೂ ಬಡವರ ನೆರವಿಗೆ ಸದಾ ಮುಂದಾಗುವ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಸಂಸ್ಥಾಪಕ ಪವನ್ ಕುಮಾರ್ ಶಿರ್ವ ಅವರು “ಬಡವರ ಬಂದು” ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥಾಪಕ ಪವನ್ ಕುಮಾರ್ ಶಿರ್ವ ಅವರು, “ಯಾರೇ ಬಡವರು ಆಗಲಿ ಅಥವಾ ಸಂಘ ಸಂಸ್ಥೆಗಳು ಆಗಲಿ, ಸಹಾಯಕ್ಕಾಗಿ ತಮ್ಮ ಮನೆಯನ್ನು ಸಂಪರ್ಕಿಸಿದಾಗ ಸಾಧ್ಯವಾದಷ್ಟು ನೆರವು ನೀಡುವ ಜಿಲ್ಲೆಯ ಏಕೈಕ ವ್ಯಕ್ತಿ ಪ್ರಮೋದ್ ಮಧ್ವರಾಜ್” ಎಂದು ಪ್ರಶಂಸಿಸಿದರು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.