ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಷಷ್ಠಮ ದಿನ

ಮಂಗಳೂರು: ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಸ್ನೇಹ ಕಲಾಪ್ರತಿಷ್ಠಾನ((ರಿ) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಕ್ಷಮಂಜರಿ ಯ ಷಷ್ಠಮ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಡಿಯೂರು ಶ್ರೀ ವಿವಿದ್ಧೋದೇಶ ಸಹಕಾರಿ ಸಂಘ’ದ ಅಧ್ಯಕ್ಷರಾದ ಲ| ಸುರೇಶ್ ರೈ ಇವರು ಒಬ್ಬ ವ್ಯಕ್ತಿಯ ಜೀವನ ಬದಲಾಗ ಬೇಕಾದರೆ ಭಾವನೆಗಳು ಬದಲಾಗಬೇಕು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಭಾವನೆಗಳು ಬದಲಾಗುತ್ತದೆ ತನ್ಮೂಲಕ ಸಂಸ್ಕಾರಯುತ ಜೀವನ ನಮ್ಮದಾಗುತ್ತದೆ ಎಂದರು.

ಕೊಂಚಾಡಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಮತಿ ಕಮಲಾಕ್ಷಿ ಬಾಬು ಇವರು ದೀಪ ಬೆಳಗಿಸಿ ಆಶೀರ್ವದಿಸಿದರು. ವೇದಿಕೆಯಲ್ಲಿ ಬಾರ್ಯ ವಿಷ್ಣು ಮೂರ್ತಿ ದೇವಸ್ಥಾನದ ಮೊಕ್ತೇಸರರಾದ ಭಾಸ್ಕರ ಬಾರ್ಯ, ಮಾಜಿ ಸಹಾಯಕ ಅರಣ್ಯಾಧಿಕಾರಿ ಶ್ರೀನಿವಾಸ ಕೊಟ್ಟಾರಿ, ನಿವೃತ್ತ ರೇಂಜರ್ ರಾಘವ ಪಾಠಾಳಿ, ವಿಜಯ ಬ್ಯಾಂಕ್ ನ ನಿವೃತ್ತ ಪ್ರಬಂಧಕರಾದ ಆನಂದ ದೇವಾಡಿಗ, ಶ್ರೀಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಇದರ ಸಂಚಾಲಕಿ ಹರಿಣಾಕ್ಷಿ ಜೆ.ಶೆಟ್ಟಿ ಉಪಸ್ಥಿತರಿದ್ದರು. ಈ ಸಂಧರ್ಭ ಯಕ್ಷ ಸ್ನೇಹ ಕಲಾಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ ಆಧ್ಯಕ್ಷೆ ಗೀತಾಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ, ಆಧ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ, ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಮಹಿಳಾ ಕಲಾವಿದರಿಂದ ಶಮಂತಕ ಮಣಿ ಜಾಂಬವತಿ ಕಲ್ಯಾಣ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!