ಮಂಗಳೂರು: ಪ್ರಸ್ತುತ 2023-2025 ನೇ ಸಾಲಿನ ಎಂ ಎ (ಇತಿಹಾಸ ಮತ್ತು ಪುರಾತತ್ವಶಾಸ್ತ್ರ) ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಟಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.
ಇವರು ತಚ್ಚಮ್ಮೆ ಮನೆ,ಪೆರುವಾಯಿ ಗ್ರಾಮದವರಾಗಿದ್ದು ಶ್ರೀ ರಾಜೇಶ್ ಮಣಿಯಾಣಿ ಮತ್ತು ಶ್ರೀಮತಿ ಸುಮಿತ್ರ ದಂಪತಿಗಳ ಪುತ್ರಿಯಾಗಿದ್ದಾರೆ . ಸ್ನಾತಕೋತ್ತರ ಪದವಿಯನ್ನು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪೂರೈಸಿದ್ದಾರೆ .