ಬಂಟ್ವಾಳ: ಶುಕ್ರವಾರ ಬೆಳಿಗ್ಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಕಾಡಬೆಟ್ಟು ನಿವಾಸಿ ಯಶೋಧರ ಅವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ಯಶೋಧರ ಅವರ ಪತ್ನಿ ಮನೆ ಮಣಿನಾಲ್ಕೂರು ಗ್ರಾಮದ ಅಗರಗಂಡಿಯಾಗಿದ್ದು, ಅವರು ಶುಕ್ರವಾರ ಬೆಳಿಗ್ಗೆ ಸರಪಾಡಿ ಸಮೀಪ ನದಿ ಬದಿಯಲ್ಲಿ ಶರ್ಟ್ ,ಚಪ್ಪಲಿ ಇಟ್ಟು ನೇತ್ರಾವತಿ ನದಿಗೆ ಹಾರಿದ್ದ. ಮಧ್ಯಾಹ್ನ ವೇಳೆ ಬೆಳಕಿಗೆ ಬಂದು ನದಿಯಲ್ಲಿ ಸ್ಥಳೀಯರು ಹುಡುಕಾಡಿದ್ದರು.ಇಂದು ಬೆಳಿಗ್ಗೆ ಸ್ಥಳೀಯ ನಿವಾಸಿ ದೋಣಿ ನಾವಿಕ ಇಸಾಕ್ ಎಂಬವರಿಗೆ ಮೃತದೇಹ ಪತ್ತೆಯಾಗಿದ್ದು, ನದಿಯ ಬದಿಗೆ ತಂದು ಹಾಕಿದ್ದಾರೆ.