ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಪ್ರಕರಣ – ಸೂಕ್ತ ತನಿಖೆಗೆ ವುಮೆನ್ ಇಂಡಿಯಾ ಮೊಮೆಂಟ್ ಆಗ್ರಹ

ದೇಶದಾದ್ಯಂತ ಸಂಚಲನವನ್ನು ಮೂಡಿಸಿದ ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಪ್ರಕರಣ ಸರಿಯಾದ ಕ್ರಮದಲ್ಲಿ ತನಿಖೆ ಆಗಬೇಕೆಂದು ವುಮೆನ್ ಇಂಡಿಯಾ ಮೊಮೆಂಟ್ ನ ರಾಜ್ಯಧ್ಯಕ್ಷರಾದ ಫಾತಿಮಾ ನಸೀಮಾ ನಗರದ ಎಸ್ ಡಿ ಪಿ ಐ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಯಾದ ಸಾಕ್ಷಿಗಳು ಇದ್ದರೂ ಕೂಡ ತನಿಖೆಗಳು ಯಾಕೆ ನಡೆಯುತ್ತಿಲ್ಲ ?!. ಇಲ್ಲಿ ನಡೆದ ಕೊಲೆಯ ಬಗ್ಗೆ ಸರಕಾರ ಸೂಕ್ತ ತನಿಖೆಯನ್ನು ನಡೆಸಬೇಕು. ಲವ್ ಜಿಹಾದ್ ವಿಚಾರವನ್ನು ಪ್ರಶ್ನೆ ಮಾಡುವ ಹಿಂದೂ ನಾಯಕರು ಈ ವಿಚಾರವನ್ನು ಯಾಕೆ ಪ್ರಶ್ನೆ ಮಾಡ್ತಾ ಇಲ್ಲ. ಪೊಲೀಸ್ ಇಲಾಖೆ ಪ್ರತಿಭಟನೆಗೆ ಅವಕಾಶವನ್ನು ನೀಡುತ್ತಾ ಇಲ್ಲ ಈ ಮೂಲಕ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ. ಇದು ನಾನ ಅನುಮಾನಗಳಿಗೆ ಕಾರಣವಾಗ್ತಾ ಇದೆ. ಅಲ್ಲಿ ಹೂತ ಹೆಣಗಳು ಹೊರತೆಗೆದರೆ ಸಾಕ್ಷಿಗಳು ತಾನಾಗಿಯೇ ಸಿಗುತ್ತದೆ. ಈ ಬಗ್ಗೆ ಸಮಗ್ರ ತನಿಖೆಯಾಗಲು ಸರ್ಕಾರದ ಎಸ್ ಐ ಟಿ ತಂಡವನ್ನು ರಚನೆ ಮಾಡಬೇಕು.

ವುಮೆನ್ ಇಂಡಿಯಾ ಮೊಮೆಂಟ್ ಕರಾವಳಿಯಾದದಂತ್ಯ ಮನೆ ಮನೆ ಜನಾಂದೋಲನವನ್ನು ಪ್ರತಿಭಟನೆಯ ರೀತಿ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಸ್ರೀಯ ಬೆಳ್ಳಾರೆ, ರಾಜ್ಯ ಸಮಿತಿಯ ಸದಸ್ಯರಾದ ಜಬಿನಾ ಮೈಸೂರು ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!