ಕರ್ನಾಟಕ: ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ-ಧರ್ಮಸ್ಥಳದ ಸಮಗ್ರ ತನಿಖೆಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ -ಸಭಾಧ್ಯಕ್ಷರಾದ ಯು ಟಿ ಖಾದರ್

ಕರ್ನಾಟಕದಲ್ಲಿ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ 20 ರ ತನಕ ನಡೆಯಲಿದೆ ಎಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಭಾಧ್ಯಕ್ಷರಾದ ಯು ಟಿ ಖಾದರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಆದಂತೆ ಉಳ್ಳಾಲ ಗ್ರಾಮಾಂತರ ಭಾಗದಲ್ಲಿ ಬಾಲಕಿಯರಿಗೆ ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗುವುದು. ವಸತಿ ಶಾಲಾ ಕಾಲೇಜು ಇದಾಗಿದ್ದು ಈ ಶಿಕ್ಷಣ ಸಂಸ್ಥೆಯನ್ನು ಕೊಣಾಜೆ ಅಥವಾ ಫಜೀರು ಭಾಗದಲ್ಲಿ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಬಜೆಟ್ ನಲ್ಲಿ 17 ಕೋಟಿ ರೂಪಾಯಿ ಸರ್ಕಾರದಿಂದ ಅನುದಾನ ಇದಕ್ಕೆ ಸಿಕ್ಕಿರುತ್ತದೆ . ಇದು ಪ್ರಾಥಮಿಕ ವಿದ್ಯಾಬ್ಯಾಸದಿಂದ ಹಿಡಿದು ಪದವಿ ಶಿಕ್ಷಣದವರೆಗಿನ ವಿದ್ಯಾಸಂಸ್ಥೆ ಯಾಗಲಿದೆ .ಬಾಲಕಿಯರಿಗೆ ಉತ್ತಮವಾದ ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಈ ಶಿಕ್ಷಣ ಕೇಂದ್ರವು ಸಹಕಾರಿ ಆಗಲಿದೆ . ಶೀಘ್ರವೇ ಇದಕ್ಕೆ ಸ್ಥಳ ನಿಗದಿಸಿ ಶಂಕು ಸ್ಥಾಪನೆ ಕಾರ್ಯ ನಡೆಯಲಿದೆ . ಈ ಶಿಕ್ಷಣ ಸಂಸ್ಥೆಯ ಜೊತೆಗೆ ಉಳ್ಳಾಲ ನಗರ ಭಾಗದಲ್ಲಿ ಕರ್ನಾಟಕ ವಕ್ಫ್ ಮಂಡಳಿಯ ವತಿಯಿಂದ ಬಾಲಕಿಯರ ಶಿಕ್ಷಣ ಪ್ರೋತ್ಸಾಹಿಸುವ ದೃಷ್ಟಿಯಿಂದ 1 ರಿಂದ ದ್ವಿತೀಯ ಪಿ ಯು ಸಿ ತನಕದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಳ್ಳಗಾಗಿದೆ .

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರು ನಾಮಕರಣ ಮಾಡುವ ವಿಷಯಕ್ಕೆ ಸಮಂಧಿಸಿ ಮಾಧ್ಯಮ ಪತ್ರಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರಾದ ಯು ಟಿ ಖಾದರ್ . ಮಂಗಳೂರು ಎಂದು ಮರುನಾಮಕರಣ ಮಾಡುವ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕು . ಈ ಭಾಗದಲ್ಲಿ ಮರುನಾಮಕರಣಕ್ಕಿಂತಲೂ ಮುಖ್ಯವಾಗಿ ಶಾಂತಿ , ಸೌಹಾರ್ದತೆ ಹುಟ್ಟಬೇಕು . ಇಲ್ಲಿ ದ್ವೇಷ ರಹಿತವಾದ ವಾತಾವರಣ ನಿರ್ಮಾಣವಾಗಬೇಕು . ಹೆಸರು ಬದಲಾವಣೆ ಮುಖ್ಯವಲ್ಲ ಇಲ್ಲಿ ಜನರು ಹೇಗೆ ಇರ್ತಾರೆ ಎನ್ನುವುದು ಮುಖ್ಯ . ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗದು . ಸದ್ಯ ದಕ್ಷಿಣ ಕನ್ನಡ ಬೆಳವಣಿಗೆ ಆಗ ಬೇಕಾದರೆ ಶಾಂತಿ ಅಗತ್ಯ ಎಂಬುದಾಗಿ ಒತ್ತಿ ಹೇಳಿದರು . ಸಮಾಜ ಕಟ್ಟುವುದು ಮೊದಲ ಆದ್ಯತೆ ಆಗಬೇಕು ಎಂದು ಹೇಳಿದರು.

ಧರ್ಮಸ್ಥಳದಲ್ಲಿ ನಡೆದ ಅಹಿತಕರ ಪ್ರಕರಣಕ್ಕೆ ಸಮಧಿಸಿದಂತೆ ಸರಕಾರ ಎಸ್ ಐ ಟಿ ತನಿಖೆಯನ್ನು ಮಾಡುವ ವಿಷಯಕ್ಕೆ ಸಮಂಧಿಸಿ ಮಾಧ್ಯಮ ಪತ್ರಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರಾದ ಯು ಟಿ ಖಾದರ್ ,ಕಾನೂನು ಪ್ರಕಾರ ಎಸ್ ಐ ಟಿ ತನಿಖೆ ನಡೆಯಲಿದೆ .

ಅದರ ಸತ್ಯಾಸತ್ಯತೆಗಳು ಹೊರ ಬರಲಿದೆ . ಸಮರ್ಪಕವಾದ ತನಿಖೆಯ ಮುಖಾಂತರ ಸತ್ಯಾಸತ್ಯತೆಗಳು ಹೊರ ಬರುತ್ತದೆ . ಯಾವುದೇ ತನಿಖೆ ಹೊರ ಬರುವ ಮೊದಲೇ ನಾವೇ ಸ್ವತಃ ತೀರ್ಮಾನವನ್ನು ಕೈಗೊಳ್ಳಬಾರದು . ಒಂದು ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯಬಾರದು . ಕ್ಷೇತ್ರವನ್ನು ಕಟ್ಟಲು ಕಷ್ಟ ಇದೆ . ಯಾರೇ ತಪಿಗಸ್ತರು ಇದ್ದರು ಅದು ಬಹಿರಂಗಕೊಂಡು ಕಾನೂನಿನ ಪ್ರಕಾರ ಶಿಕ್ಷೆ ಆಗಲಿ . ಎಸ್ ಐ ಟಿ ತನಿಖೆಯ ತೀರ್ಮಾನಗಳು ಹೊರಬರುವ ತನಕ ನಾಗರಿಕರು ಸಮಾಧಾನವಾಗಿ ಇರಬೇಕೆಂದು ಕೋರಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!