ಕನ್ನಡ ಭವನ ರೂವಾರಿಗಳಿಗೆ ಡಾ. ಸಿ ಸೋಮಶೇಖರ್ ಗೌರವ ಸನ್ಮಾನ.

ಕರ್ನಾಟಕ ಸರಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರೂ ಆದ ಡಾ. ಸಿ. ಸೋಮಶೇಖರ್ ಅವರು ಕಾಸರಗೋಡು ಕನ್ನಡ ಭವನ ಗ್ರಂಥಾಲಯ ದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಯನ್ನು ತನ್ನ ನಿವಾಸಕ್ಕೆ ಬರಮಾಡಿಕೊಂಡು ಕನ್ನಡ ಭವನ ಹಾಗೂ ಕೇರಳ ರಾಜ್ಯ -ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಗಳನ್ನು, ವಿಶೇಷವಾಗಿ ಕಾಸರಗೋಡು ಜಿಲ್ಲೆಯ ಹೊರಗೆ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಗಮನಿಸಿ ಹೆಮ್ಮೆಯಿಂದ ಕೊಂಡಾಡಿ ನೀಡಿದ ಗೌರವ ಸನ್ಮಾನ. ಕನ್ನಡ ಭವನ ಗ್ರಂಥಾಲಯ ವನ್ನು ಅಧಿಕಾರಾವಾದಿಯಲ್ಲಿ ಸಂದರ್ಶಿಸಿದ್ದ ಇವರು, ಕನ್ನಡ ಭವನದ ಆತಿತ್ಯವನ್ನು ನೆನಪಿಸಿ ಎಲ್ಲ ರೀತಿಯ ಶುಭ ಆಶಂಸೆಯನ್ನು ಹಾರೈಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!