ಮಂಗಳೂರು ನಗರದಲ್ಲಿ ಒಂದು ಪ್ರಮುಖ ರಸ್ತೆಯ ಕಾಮಗಾರಿ – ಕೂಲೂರು ಸೇತುವೆ ಬಳಿ ರಸ್ತೆ ದುರಸ್ತಿ ಕಾರ್ಯ ಆರಂಭಗೊಳ್ಳುತ್ತಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮಹತ್ವದ ಮಾಹಿತಿ ಇಲ್ಲಿದೆ.ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ-66, ಕೆಐಒಸಿಎಲ್ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ಜುಲೈ 22ರ ರಾತ್ರಿ 8 ಗಂಟೆಯಿಂದ, ಜುಲೈ 25ರ ಬೆಳಗ್ಗೆ 8 ಗಂಟೆವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ.
ಈ ವೇಳೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಹೊಸ ಕೂಳೂರು ಸೇತುವೆ ದ್ವಿಪಥ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಐಒಸಿಎಲ್ ಜಂಕ್ಷನ್, ಪಣಂಬೂರು ಜಂಕ್ಷನ್, ಕೋಡಿಕಲ್ ಕ್ರಾಸ್ ಮೊದಲಾದ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗಗಳ ಸೂಚನೆ – ಮಂಗಳೂರು ನಗರ ಪೊಲೀಸ್ ಆಯುಕ್ತರಿಂದ:
📌 ಉಡುಪಿ → ಬೆಂಗಳೂರು/ಮೈಸೂರು ಕಡೆಗೆ:
ಪಡುಬಿದ್ರೆ → ಕಾರ್ಕಳ → ಮೂಡಬಿದ್ರೆ ಮಾರ್ಗ.
📌 ಉಡುಪಿ/ಮುಲ್ಕಿ → ಮಂಗಳೂರು ನಗರ ಕಡೆಗೆ:
ಮುಲ್ಕಿ ವಿಜಯ ಸನ್ನಿಧಿ → ಎಡಕ್ಕೆ ತಿರುವು → ಕಿನ್ನಿಗೋಳಿ → ಕಟೀಲು → ಬಜಪೆ → ಮರವೂರು → ಕಾವೂರು → ಮಂಗಳೂರು.
📌 ಮಂಗಳೂರು/ಕೊಟ್ಟಾರ ಚೌಕಿ → ಉಡುಪಿ ಕಡೆಗೆ:
ಕಾವೂರು → ಮರವೂರು → ಬಜಪೆ → ಕಟೀಲು → ಕಿನ್ನಿಗೋಳಿ → ಮುಲ್ಕಿ ವಿಜಯ ಸನ್ನಿಧಿ → ಉಡುಪಿ.
📌 ಬಿ.ಸಿ.ರೋಡ್/ಬೆಂಗಳೂರು/ಮೈಸೂರು → ಉಡುಪಿ:
ಬೀಕರ್ನಕಟ್ಟೆ → ಕುಲಶೇಖರ → ವಾಮಂಜೂರು → ಕೈಕಂಬ → ಬಜಪೆ → ಕಟೀಲು → ಕಿನ್ನಿಗೋಳಿ → ಮುಲ್ಕಿ → ಉಡುಪಿ.
📌 ಇಂಧನ ಮತ್ತು ಗ್ಯಾಸ್ಗಳ ಟ್ಯಾಂಕರ್‌ಗಳಿಗೆ:
MCF, HPCL, ONGC, BASF ಮುಂತಾದ ಕಂಪೆನಿಗಳಿಗೆ ಬರುವ ಅಥವಾ ಹೊರಡುವ ವಾಹನಗಳು ಪೀಕ್ ಅವರ್ಸ್ ಹೊರತುಪಡಿಸಿ ನಿಗದಿತ ಸಮಯದಲ್ಲಿ ಕೂಲೂರು ಹೊಸ ಸೇತುವೆ ಬಳಸಿ ಸಂಚರಿಸಬಹುದು.
ರಸ್ತೆ ದುರಸ್ತಿ ಸಮಯದಲ್ಲಿ ಸಾರ್ವಜನಿಕರು ಸಹಕಾರ ನೀಡುವುದು ಅಗತ್ಯ. ಅನಾವಶ್ಯಕ ವಾಹನ ಸಂಚಾರ ತಪ್ಪಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ವಿನಂತಿಸಿದ್ದಾರೆ.