ಬೈಕಂಪಾಡಿ ನಂತೂರು ನಡುವೆ ಭಾರಿ ಟ್ರಾಫಿಕ್ ಜಾಮ್- ಸಂಕಷ್ಟಕ್ಕೆ ಸಿಲುಕಿದ ವಾಹನ ಸವಾರರು

ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್. ಜಂಕ್ಷನ್ ನಿಂದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಮಾಡಿರುವ ಮಾರ್ಪಾಡಿನಿಂದ ಬೈಕಂಪಾಡಿಯಿಂದ ನಂತೂರು ವರೆಗೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.

ಬೆಳಗ್ಗೆಯಿಂದಲೇ ಕೊಟ್ಟಾರ ಚೌಕಿ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದೆ. ಕಿಲೋ ಮೀಟರ್ ವರೆಗೆ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ. ಈ ಕಡೆ ಕೆಪಿಟಿ, ನಂತೂರು, ಕೊಟ್ಟಾರದ ವರೆಗೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೆ, ಸೇತುವೆಯಿಂದ ಮುಂದಕ್ಕೆ ಬೈಕಂಪಾಡಿಯನ್ನು ದಾಟಿ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!