ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ

ಉಡುಪಿ: ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ(ಬಲಿ ತರ್ಪಣಂ) ವನ್ನು ಮೊದಲ ಬಾರಿಗೆ ಕೇರಳ ಸಮಾಜಂ ಉಡುಪಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಜುಲೈ 24 ರಂದು ಅಯೋಜಿಸಿತ್ತು.

ಮಾಲಯಾಳಂ ಕ್ಯಾಲೆಂಡರ್ ಪ್ರಕಾರ ಜುಲೈ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಬರುವ ತಿಂಗಳನ್ನು ಕರ್ಕಿಡಕ ಮಾಸ ಎಂದು ಕರೆಯುತ್ತಾರೆ.ಈ ಸಂದರ್ಭದಲ್ಲಿ ಮೃತ ಪೂರ್ವಜರ ಅತ್ಮ ಶಾಂತಿ ,ಸದ್ಗತಿಗಾಗಿ ಬಲಿ ತರ್ಪಣಂ ಮಾಡುವುದು ಕೇರಳದ ಸಂಪ್ರದಾಯ.

ಕೇರಳದ‌ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ ಆಲುವಾ ಶಿವ ದೇವಾಲಯದ ಬಳಿಯ ಪೆರಿಯಾರನಂತಹ ನದಿ ದಂಡೆಗಳು ಮತ್ತು ವರ್ಕಳ ಪಾಪನಾಶಮ್‌ನಂತಹ ಕಡಲತೀರಗಳಲ್ಲಿ ಕರ್ಕಿಡಕ ವಾವು ಬಲಿ ಯನ್ನು ಬೃಹತ್ ಸಂಖ್ಯೆಯಲ್ಲಿ ಜನರು ಅಚರಿಸುತ್ತಾರೆ.

ಉದ್ಯೋಗಕ್ಕಾಗಿ ಹಾಗೂ ಇನ್ನಿತರ ಕಾರ್ಯಕ್ಕಾಗಿ ಕೇರಳ ಬಿಟ್ಟು ಉಡುಪಿಯಲ್ಲಿ ನೆಲೆಯೂರಿರುವ ಕೇರಳ‌ ಸಮಾಜದವರಿಗೆ ಇಲ್ಲಿಯೇ ಈ ಪುಣ್ಯ ಕಾರ್ಯ ವನ್ನು ಮಾಡಲು *ಉಡುಪಿ ಕೇರಳ ಸಮಾಜಂ ಸಂಘಟನೆ ಈ ವ್ಯವಸ್ಥೆಯನ್ನು ಮಾಡಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!