ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ -ತ್ವರಿತ ಕಾರ್ಯಾಚರಣೆ ನಡೆಸಬೇಕೆಂದು ಸಾರ್ವಜನಿಕರ ಆಗ್ರಹ

ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ ಶುರುವಾಗುವ ಸಾಧ್ಯತೆ ಎದ್ದು ಕಾಣ್ತಾ ಇದೆ . ಈ ಮೂಲಕ ಹಳೆ ಚಾಳಿ ಮುಂದುವರೆದಿದೆ . ಮಹಾನಗರ ಪಾಲಿಕೆ ಇವುಗಳ ಮೇಲೆ ಕಣ್ಣಿಟ್ಟು ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಕೆಲವು ತಿಂಗಳ ಹಿಂದೆ ನಿರಂತರ ಕಾರ್ಯಾಚರಣೆ ಮೂಲಕ ಮಂಗಳೂರು ನಗರವನ್ನು ಪ್ಲೆಕ್ಸ್ ಮುಕ್ತಗೊಳಿಸುವಲ್ಲಿ ಪಾಲಿಕೆ ಯಶಸ್ವಿಯಾಗಿತ್ತು. ಆದರೆ ಮುಂಗಾರು ಆರಂಭದ ಬೆನ್ನಲೇ ಈ ಕಾರ್ಯಾಚರಣೆಯ ವೇಗ ಕುಗ್ಗಿತ್ತು ,ಇದೀಗ ಮತ್ತೆ ಕೆಲವು ಕಡೆಗಳಲ್ಲಿ ಪ್ಲೆಕ್ಸ್‌ ಗಳು ಎದ್ದು ನಿಂತಿವೆ.

ನಗರದ ಪುರಭವನದ ಸನಿಹ ಪ್ಲೆಕ್ಸ್ ಗಳು ಪ್ರತ್ಯಕ್ಷವಾಗಿದ್ದು, ಪಾಲಿಕೆ ವತಿಯಿಂದ ತೆರವು ಕಾರ್ಯವಾಗಿಲ್ಲ. ಆದೇ ರೀತಿ ನಗರದ ಕೆಲವು ಕಡೆಗಳಲ್ಲಿ , ನಗರದ ಹೊರ ಭಾಗದಲ್ಲಿ ಪ್ಲೆಕ್ಸ್ ಗಳು ತಮ್ಮ ಹಾವಳಿಯ ಆರಂಭದ ಮುನ್ಸೂಚನೆಯನ್ನು ನೀಡಿವೆ. ಪಾಲಿಕೆ ಕಾರ್ಯಾಚರಣೆಯಿಂದ ನಗರ ಸ್ವಚ್ಛಗೊಂಡಿದೆ. ತೆರವು ಕಾರ್ಯವನ್ನು ನಿರಂತರವಾಗಿ ಮುಂದುವರಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಒಂದೆರಡು ತಿಂಗಳುಗಳ ಕಾಲ ನಿರಂತರ ತೆರವುಗೊಳಿಸುವ ಕಾರ್ಯವೂ ಆಗಿತ್ತು. ಬಳಿಕ ಕಾರ್ಯಾಚರಣೆಯ ವೇಗ ತಗ್ಗಿದೆ. ಅಲ್ಲಲ್ಲಿ ಪ್ಲೆಕ್ಸ್‌ಗಳು ತಲೆ ಎತ್ತಿವೆ.

ಪ್ರತ್ಯಕ್ಷವಾದ ಪ್ಲೆಕ್ಸ್‌ಗಳಿಗೆ ಕಡಿವಾಣ ಹಾಕದಿದ್ದರೆ ಮತ್ತೊಮ್ಮೆ ನಗರ ಪ್ಲೆಕ್ಸ್‌ಗಳಿಂದ ರಾರಾಜಿಸಲಿದೆ .ಈ ಫ್ಲೆಕ್ ಗಳಿಂದ ಸಂಚಾರಕ್ಕೆ ತೊಡಕಾಗುತ್ತದೆ. ಜೋರಾಗಿ ಗಾಳಿ ಬೀಸಿ ಮಳೆ ಬಂದಾಗ ಇವು ಅಂಗಾತ ಬೀಳುತ್ತವೆ. ಪಾಪದ ಪಾದಚಾರಿಯೋ, ದ್ವಿಚಕ್ರ ವಾಹನ ಸವಾರರೋ ಆ ಸಂದರ್ಭ ಅಲ್ಲಿದ್ದರೆ ಆತನ ಸ್ಥಿತಿ ಚಿಂತಾಜನಕವಾಗುತ್ತದೆ.ಪಾಲಿಕೆ ಅದು ಅಕ್ರಮ ಫಲಕ ಎಂದು ಒಂದು ವಾಕ್ಯದಲ್ಲಿ ಹೇಳಿ ಜಾರಿಕೊಳ್ಳುತ್ತದೆ. ನಾಗರಿಕ ತನ್ನದಲ್ಲದ ತಪ್ಪಿಗೆ ಆಸ್ಪತ್ರೆ ಖರ್ಚು ಭರಿಸಬೇಕಾಗುತ್ತದೆ. ಇಷ್ಟೇ ಅಲ್ಲ ಈ ಫ್ಲೆಕ್ಸ್ ಗಳು ವಾಹನ ಚಾಲಕರ ದೃಷ್ಟಿಗೂ ಅಡ್ಡಿಯಾಗುತ್ತವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!