ದಕ್ಷಿಣ ಕನ್ನಡ ಎಸ್ಡಿಪಿಐ ಕಾರ್ಯಕರ್ತರ ಮನೆಗಳಿಗೆ NIA ದಾಳಿ ರಾಜಕೀಯ ಪ್ರೇರಿತವಾಗಿದ್ದು ಇದು ಖಂಡನೀಯ ಎಂದು ಎಸ್ಟಿಪಿಐ ದ.ಕ ಜಿಲ್ಲಾ ಅಧ್ಯಕ್ಷ ಜಲೀಲ್ ಕೃಷ್ಣಪುರ ತಿಳಿಸಿದರು .
ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಎಸ್ಡಿಪಿಐ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿದೆ . ನಮ್ಮ ಕಾರ್ಯಕರ್ತರನ್ನು ವಿಚಲಿತ ಮಾಡಲು ಪ್ರಯತ್ನಿಸಿದರೆ ಕಾನೂನು ಹೋರಾಟ ಮತ್ತು ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
ಕೇಂದ್ರ ಸರಕಾರ ಕೆಲವು ಆಡಳಿತ ಸಂಸ್ಥೆಯನ್ನು ತನ್ನ ಸ್ವಂತಿಕೆಗಾಗಿ ಬಳಸ್ತಾ ಇದೆ . ED , NIA , ತನಗೆ ಬೇಕಾದ ಹಾಗೆ ಬಳಸಿಕೊಳ್ತಾ ಇದೆ . ಕುಡುಪು ಅಶ್ರಫ್ ಹತ್ಯೆಯನ್ನು ಎಸ್ಐಟಿ ಕೊಡಬೇಕು ಎಂದು ಪದೇ ಪದೇ ಹೇಳಿದ್ದೆವು, ರಹೀಮಾನ್ ಹತ್ಯೆಗೆ ಯುಎಪಿಎ ಕೇಸು ಕೂಡ ದಾಖಲಾಗಲಿಲ್ಲ ಇದು ಅನ್ಯಾಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮೌನವಾಗಿರುವುದು ಖೇದಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೊಕಟ್ಟೆ ಜಿಲ್ಲಾ ಸಮಿತಿ ಸದಸ್ಯರಾದ ಇರ್ಷಾದ್ ಹಳೆಯಂಗಡಿ, ಅಶ್ರಫ್ ಅಡ್ಡೂರು ಉಪಸ್ಥಿತತರಿದ್ದರು.