ಕಡಲ ನಗರಿಯಲ್ಲಿ ನವರಾತ್ರಿ ಸಮಾಪ್ತಿಗೆ ಕ್ಷಣಗಣೆಯ ರಾತ್ರಿ ….!!!

ಮಂಗಳೂರು: ಕರಾವಳಿಯಲ್ಲಿ ನವರಾತ್ರಿ ಸಂಭ್ರಮ ಇಂದು ರಾತ್ರಿ ಸಮಾರೋಪಗೊಳ್ಳುತ್ತಿದೆ. ನವರಾತ್ರಿ ಹಬ್ಬ, ಕುದ್ರೋಳಿ ದಸರಾ ಮತ್ತು ಉಚ್ಚಿಲ ದಸರಾಗಳು ಕರಾವಳಿಗೆ ಬಹು ಸಂಖ್ಯೆಯಲ್ಲಿ ಭಕ್ತರು, ಯಾತ್ರಿಕರನ್ನು ಆಕರ್ಷಿಸಿವೆ.

ಉಡುಪಿಯ ಕೊಲ್ಲೂರು, ಮಂಗಳೂರಿನ‌ ಮಂಗಳಾದೇವಿ ಕ್ಷೇತ್ರ ಸೇರಿದಂತೆ ಸಾಂಪ್ರದಾಯಿಕ ನವರಾತ್ರಿ ಆಚರಣೆ ಜಾರಿಯಲ್ಲಿರುವ ಕ್ಷೇತ್ರಗಳಲ್ಲಿಯೂ ಭಕ್ತ ಸಂದಣಿ ಹೆಚ್ಚಾಗಿತ್ತು.ನವರಾತ್ರಿ ದೀಪಾಲಂಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶೇಷ ಆಕರ್ಷಣೆಯಾಗಿತ್ತು.

ನವರಾತ್ರಿಯಲ್ಲಿ ಶಾರದಾ ಪ್ರತಿಷ್ಟಾಪನೆ ಮಾಡಿದ ವಿವಿಧ ಮಂಡಳಿಗಳು ಶಾರದಾ ಮಾತೆ ವಿಸರ್ಜನೆಗೆ ತಯಾರಾಗಿವೆ. ಕುದ್ರೋಳಿಯಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸಿದ, ಪೂಜೆ ಸ್ವೀಕರಿಸಿದ ವಿಗ್ರಹಗಳು ಇಂದು ಸಂಜೆ ವೈಭವದ ಮೆರವಣಿಗೆಯಲ್ಲಿ ತೆರಳಿ ಜಲಸ್ತಂಭನಗೊಳ್ಳಲಿವೆ. ಮಂಗಳೂರು ನಗರ ಈ ಮೆರವಣಿಗೆಗೆ ತಯಾರಾಗುತ್ತಿದೆ.ನೂರಾರು ಸ್ವಯಂಸೇವಕರ ಪಡೆ ನವರಾತ್ರಿ ಸಾಂಗವಾಗಿ ನೆರವೇರಲು ಹಗಲು ರಾತ್ರಿ ದುಡಿದಿದೆ.

ನವರಾತ್ರಿಯ ಹುಲಿ ವೇಷಗಳು ಈಗ ಜಗದ್ವಿಖ್ಯಾತಿ ಗಳಿಸುತ್ತಿವೆ. ಸಣ್ಣ ಬಾಲಕರು, ಬಾಲಕಿಯರು, ಹೆಣ್ಣುಮಕ್ಕಳು ಹುಲಿ ವೇಷ ಹಾಕುತ್ತಿದ್ದಾರೆ. ಹುಲಿ ವೇಷ ಸ್ಪರ್ಧೆಗಳು ನವೀನ ಕುಣಿತಗಳನ್ನು ಪರಿಚಯಿಸಲು ಕಾರಣವಾಗಿವೆ.ವೇದಿಕೆಗೆ ಹುಲಿವೇಷಗಳ ಪ್ರವೇಶ ಕೂಡಾ ವಿಶಿಷ್ಟ ರೀತಿಯಲ್ಲಾಗುತ್ತಿದೆ. ಸೆಲೆಬ್ರಿಟಿಗಳ ಆಗಮನ ,‌ಕ್ರಿಕೆಟ್ ತಾರೆಯರ ಆಗಮನ ಹುಲಿ ವೇಷಗಳಿಗೆ ಹೊಸ ಪ್ರೋತ್ಸಾಹ, ಉತ್ಸಾಹ ತಂದಿದೆ.ಅನೇಕ ಆಕರ್ಷಣೆಗಳು, ಸಾಂಪ್ರದಾಯಿಕ ಆಚರಣೆಗಳ ಸಂಯೋಜನೆಯಾಗಿರುವ ನವರಾತ್ರಿ ದಸರಾ ಮೆರವಣಿಗೆಯೊಂದಿಗೆ ಸಮಾರೋಪಗೊಳ್ಳುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!