ಡಿ ಎನ್ ಎ ಪರೀಕ್ಷೆಯಲ್ಲಿ ತಂದೆಯೆಂದು ಸಾಬೀತಾದ ಕೃಷ್ಣ ಜಿ ರಾವ್ ಮದುವೆಯಾಗಲು ಹಿಂದೇಟು ಹಾಕುವುದೇಕೆ ….. ? ; ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ

ಮಂಗಳೂರು: ಕೃಷ್ಣ ಜಿ ರಾವ್ನ ಡಿ ಎನ್ ಎ ಪರೀಕ್ಷೆಯ ಮೂಲಕ ಈತನದ್ದೇ ಮಗುವೆನ್ನುವ ಸತ್ಯ ಇದೀಗ ಹೊರ ಬಂದಿದೆ , ಈತನೇ ತಂದೆ ಎಂದು ಸಾಬೀತಾದರೂ ಕೂಡ ಬಾಲಕಿಯನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾನೆ , ಈ ಹಿಂದೂ ಹೆಣ್ಣು ಮಗಳಿಗೆ ಆದ ಅನ್ಯಾಯವನ್ನು ಯಾವ ಹಿಂದೂ ಮುಖಂಡರಾಗಲಿ , ಸ್ವಾಮೀಜಿಗಳಾಗಲಿ , ರಾಜಕೀಯ ವ್ಯಕ್ತಿಗಳಾಗಲಿ ಮಾತನಾಡದೇ ಇರುವುದು ದುರಂತ . ಆದರೆ ಶ್ರೀಮಂತ , ರಾಜಕೀಯವಾಗಿ ಪ್ರಬಲ ಕುಟುಂಬದ ಹೆಣ್ಣಾಗಿದ್ದರೆ ಈ ಅನ್ಯಾಯ ಆಗುತ್ತಿತ್ತಾ…. ? ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಪ್ರಶ್ನೆ ಮಾಡಿದರು.

ಅವರು ಪತ್ರಿಕಾಭವನದಲ್ಲಿ ಈ ಬಗ್ಗೆ ಮಾತನಾಡಿ , ಒಂದು ವೇಳೆ ಹಿಂದೂ ಅಥವಾ ಮುಸ್ಲಿಂ ವ್ಯಕ್ತಿಗಳ ಕೊಲೆಯೇನಾದರೂ ಆಗಿದ್ದರೆ ರಾಜಕೀಯ ನಾಯಕರು ತಮ್ಮ ಬೆಳೆಯನ್ನು ಬೇಯಿಸಲು ಸಮಾವೇಶಗಳನ್ನು , ಪ್ರತಿಭಟನೆಗಳನ್ನು , ಹೇಳಿಕೆಯನ್ನು ನೀಡ್ತಾ ಇದ್ರು . ಆದರೆ ಆ ಹುಟ್ಟಿದ ಮಗುವಿಗೆ ಆದ ಅನ್ಯಾಯವನ್ನು ಯಾರು ಕೂಡ ಮಾತನಾಡದೇ ಇರುವುದು ವಿಪರ್ಯಾಸ.

ಮಗುವಿನ ತಂದೆ ಕೃಷ್ಣ ಎಂಬುದಾಗಿ ಸಾಬೀತಾದರೂ ಕೂಡ ಆತ ರಾಜಾರೋಷವಾಗಿ ತಿರುತ್ತಾ ಇದ್ದಾನೆ . ತಪ್ಪು ಕಲ್ಪನೆಯು ಅವನಲ್ಲಿ ಇಲ್ಲ . ಡಿ ಎನ್ ಎ ಪರೀಕ್ಷೆಯಲ್ಲಿ ಪೊಸಟಿವ್ ಬಂದರು ಕೂಡ ಆತನ್ನನ್ನು ಇದುವರೆಗೂ ಯಾರು ಪ್ರಶ್ನೆ ಮಾಡಿಲ್ಲ . ಆತನಿಗೆ ಜಾಮೀನು ಸಿಕ್ಕಿ ಹಾಯಾಗಿ ಅಮಾಯಕನಂತೆ ನಡೆದುಕೊಳ್ತಾ ಇದ್ದಾನೆ . ಡಿ ಎನ್ ಎ ಪರೀಕ್ಷೆಯಲ್ಲಿ ಪೊಸಟಿವ್ ಬಂದರೆ ಕೃಷ್ಣನನ್ನು ಈ ಹೆಣ್ಣು ಮಗಳ ಜೊತೆ ವಿವಾಹ ಮಾಡಿಕೊಡುವುದಾಗಿ ಆತನ ಮನೆಯವರು ಒಪ್ಪಿಗೆಯನ್ನು ಸೂಚಿಸಿದ್ದರು , ಆದರೆ ಇದೀಗ ಮಗು ಆತನದ್ದೇ ಎಂಬುದಾಗಿ ಸಾಬೀತಾಗಿದ್ರೂ ಮದುವೆಯಾಗಲು ಹಿಂದೇಟು ಹಾಕ್ತಾ ಇದ್ದಾನೆ . ಆತ ವಿವಾಹಕ್ಕೆ ಒಪ್ಪಿ ಸಂಸಾರ ನಡೆಸಬೇಕು . ಒಂದು ವೇಳೆ ಅದಕ್ಕೆ ತಿರಸ್ಕರಿಸಿದರೆ ಕಾನೂನು ಚೌಕಟ್ಟಿನೊಳಗೆ ಪ್ರಭಲವಾದ ಹೋರಾಟ ಮಾಡುವುದರ ಜೊತೆಗೆ ಇಲ್ಲಿನ ತುಟಿ ಬಿಚ್ಚದ ರಾಜಕೀಯ ಮುಖಂಡರ ನಡವಳಿಕೆಯನ್ನು ಖಂಡಿಸುವುದಾಗಿ ಎಚ್ಚರಿಕೆ ನೀಡಿದರು .

ಸಮಾಜ ದಾರಿ ತಪ್ಪುತ್ತಿದೆ ಎಂದು ಗೊತ್ತಾದ ಕೂಡಲೇ ಅದನ್ನು ಸರಿ ಪಡಿಸುವ ಕೆಲಸವನ್ನು ಮಾಡಬೇಕು . ಒಂದು ವೇಳೆ ಈ ಪ್ರಕರಣಕ್ಕೆ ಸಮಂಧಿಸಿದಂತೆ ಸರಿಯಾದ ನ್ಯಾಯ ಸಿಗದೇ ಹೋದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತೆ . ಸಮಾಜಕ್ಕೆ ಈ ಪ್ರಕರಣದ ಮೂಲಕ ನೀತಿ ಪಾಠವನ್ನು ಕಲಿಸುವ ಪಾಠ ಮಾಡಬೇಕು . ಕೃಷ್ಣ ಈ ವಿವಾಹಕ್ಕೆ ಒಪ್ಪಿದ್ದೇ ಆದಲ್ಲಿ ಅದರ ಸಂಪೂರ್ಣ ಖರ್ಚು ವೆಚ್ಚವನ್ನು ಖುದ್ದು ನಾನೇ ಭರಿಸುವೆನು ಎಂದು ಭರವಸೆ ನೀಡಿದರು .ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕರ್ಮ ಸಮಾಜದ ಮಹಿಳಾ ಆಯೋಗದ ಸದಸ್ಯೆ ಅರ್ಚನಾ , ಹೆಣ್ಣು ಮಗಳ ತಾಯಿ ನಮಿತಾ ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!