ಉಡುಪಿ: ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪಣವಾನಂದ ಸ್ವಾಮೀಜಿಗಳು ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಬಿಲ್ಲವ ಸಮಾಜದ ಹಿರಿಯ ಮುಖಂಡರಾದ ಮಂಜುನಾಥ ಪೂಜಾರಿಯವರನ್ನು ಹೆಬ್ರಿಯಲ್ಲಿ ಭೇಟಿ ಮಾಡಿದರು . ಈ ಸಂದರ್ಭದಲ್ಲಿ ಡಿಸೆಂಬರ್ 7ನೇ ತಾರೀಕು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಐತಿಹಾಸಿಕ ಪಾದಯಾತ್ರೆಯ ಪೂರ್ವಭಾವಿ ಸಭೆಯ ಕುರಿತು ಚರ್ಚೆಯನ್ನು ನಡೆಸಲಾಯಿತು .
ಮಂಜುನಾಥ ಪೂಜಾರಿ ಅವರನ್ನು ಭೇಟಿ ಮಾಡಿ ನಿಗಮದ ಹಲವಾರು ವಿಷಯಗಳ ಬಗ್ಗೆ ಸುಮಾರು 2 ಗಂಟೆಗಳ ಕಾಲ ಶ್ರೀಗಳು ಚರ್ಚೆ ಮಾಡಿದರು ಮತ್ತು ಜನವರಿ 6ನೇ ತಾರೀಕು ನಡೆಯಲಿರುವ ಐತಿಹಾಸಿಕ ಪಾದಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶ್ರೀಗಳು ಮಂಜುನಾಥ್ ರವರಿಗೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ಉಡುಪಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಕಾಪು, ಐತಿಹಾಸಿಕ ಪಾದಯಾತ್ರೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ದಿವಾಕರ್ ಸನಿಲ್ , ಜಯಕುಮಾರ್ ಪೂಜಾರಿ, ರಾಷ್ಟ್ರೀಯ ಮಹಾಮಂಡಳಿಯ ಮುಖಂಡರಾದ ಅನಿಲ್, ಅಖಿಲ ಭಾರತ ರಾಷ್ಟ್ರೀಯ ಬಿಲ್ಲವ ಮಹಾಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಭಾಕರ್ ಬಂಗೇರ ಮತ್ತು ಹೆಬ್ರಿ ಬಿಲ್ಲವ ಸಮಾಜದ ಮುಖಂಡರುಗಳು ಶ್ರೀಗಳ ಜೊತೆ ಉಪಸ್ಥಿತರಿದ್ದರು.