ಉಡುಪಿ: ರಷ್ಯಾ ಅಧ್ಯಕ್ಷರಿಗೆ ಪ್ರಧಾನಿಯವರು ಭಗವದ್ಗೀತೆ ಉಡುಗೊರೆ ನೀಡಿದ ವಿಚಾರಕ್ಕೆ ಉಡುಪಿ ಪುತ್ತಿಗೆ ಮಠದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಭಗವದ್ಗೀತೆ ಕೊಟ್ಟಿದ್ದಾರೆ, ರಷ್ಯನ್ ಭಾಷೆಯಲ್ಲಿ ಬರೆದ ಭಗವದ್ಗೀತೆ ಕೊಟ್ಟಿರುವುದು ಸಂತೋಷ ನೀಡಿದೆ. ಇದೇ ಕಾರಣಕ್ಕೆ ಅವರನ್ನು ಭಾರತ ಭಾಗ್ಯವಿದಾತ ಎಂದು ನಾವು ಕರೆದಿದ್ದೇವೆ ಎಂದರು.
ಪ್ರಧಾನಿ ಮೋದಿಯವರಿಗೆ ವಿಶೇಷ ಅಭಿನಂದನೆಗಳು, ಎಲ್ಲಿಗೆ ಹೋದರೂ ಭಗವದ್ಗೀತೆಯನ್ನೇ ಅವರು ಕೊಡುಗೆಯಾಗಿ ನೀಡುತ್ತಾರೆ.
ಭಗವದ್ಗೀತೆ ಈ ಜಗತ್ತಿಗೆ ಲಭಿಸಿದ ಅಮೂಲ್ಯ ಗ್ರಂಥ.ಭಗವದ್ಗೀತೆ ಗಿಂತ ದೊಡ್ಡ ಉಡುಗೊರೆ ನೀಡಲು ಸಾಧ್ಯವಿಲ್ಲ
ಭಗವದ್ಗೀತೆಯ ಆದರ್ಶ ಪರಿಪಾಲಿಸಿದರೆ ಆಡಳಿತ ಸುಗಮ.ಸರಕಾರದ ಆಡಳಿತ ಮಾತ್ರವಲ್ಲ ಯಾವುದೇ ಆಡಳಿತಕ್ಕೆ ಭಗವದ್ಗೀತೆ ಪ್ರೇರಕ ಎಂದವರು ಹೇಳಿದ್ದಾರೆ.