ಡಿ.20 ರಂದು ಪೆರುವಾಯಿಯಲ್ಲಿ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಗೋಪೂಜೆ, ಹಿಂದೂ ಹೃದಯ ಸಂಗಮ.. !

ವಿಟ್ಲ:ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಗೋಪೂಜೆ, ಸಾರ್ವಜನಿಕ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ, ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಯತೀಶ್ ಪೆರುವಾಯಿ ತಿಳಿಸಿದರು.

ಬೆಳಗ್ಗೆ ೮ ಗಂಟೆಗೆ ಗಣಪತಿ ಹವನ, ಸಂಜೆ ೪ ಗಂಟೆಗೆ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ, ೫ ಗಂಟೆಗೆ ಗೋಮಾತಾ ಶೋಭಾಯಾತ್ರೆ, ಗೋಪೂಜೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ಬೃಜೇಶ್ ಚೌಟ ಉದ್ಘಾಟಿಸಲಿದ್ದು, ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳ್ಳಜ್ಜ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೌರವ ಸಲಹೆಗಾರ ಚಂದ್ರಶೇಖರ ಸಾರಿತ್ತಡ್ಕ, ಉಪಾಧ್ಯಕ್ಷರಾದ ವಿನೀತ್ ಪೆರುವಾಯಿ, ಗಿರೀಶ್ ಪಾಟಾಳಿ ಕೊಲ್ಲತ್ತಡ್ಕ ಉಪಸ್ಥಿತರಿದ್ದರು.

SHARE
Loading spinner

One thought on “ಡಿ.20 ರಂದು ಪೆರುವಾಯಿಯಲ್ಲಿ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಗೋಪೂಜೆ, ಹಿಂದೂ ಹೃದಯ ಸಂಗಮ.. !

  1. Yo, check out 9fgame! Been playing there for a bit now and it’s pretty solid. Good selection of games and the payouts are decent. Definitely worth a look if you’re looking for something new. Hit them up at 9fgame!

    Loading spinner

Leave a Reply

Your email address will not be published. Required fields are marked *

error: Content is protected !!