ಸುಬ್ರಹ್ಮಣ್ಯ: ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ನೆಪದಲ್ಲಿ ಅನ್ಯಧರ್ಮಿಯರನ್ನು ಆಹ್ವಾನಿಸುವುದು ಸಂಪ್ರದಾಯ ಹಾಗೂ ಹಿಂದೂ ಧಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ ಹಾಗಾಗಿ ಕೂಡಲೇ ತಿದ್ದುಪಡಿ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷದ್, ಹಿಂದು ಜಾಗರಣ ವೇದಿಕೆಯ ಜಂಟಿ ಹೋರಾಟವು ಶ್ರೀ ಕ್ಷೇತ್ರ ಸಂರಕ್ಷಣ ಸಮಿತಿಯ ಮೂಲಕ ಪ್ರತಿಭಟನೆ ಮಾಡಿ ಅಗ್ರಹಮಾಡಿತ್ತು.
ಹಿಂದೂ ಭಾವನೆಗಳಿಗೆ ಮನ್ನಣೆಯನ್ನು ಕೊಟ್ಟು ಹಿಂದೂ ಪರ ಸಂಘಟನೆಗಳ ಹೋರಾಟದ ಫಲವಾಗಿ ಇವತ್ತು ಡಿ. 26 ರ ನಡೆದ ಧಾರ್ಮಿಕ ಕಾರ್ಯಕ್ರಮ ಅನ್ಯಮತಿಯರನ್ನು ಭಾಗವಹಿಸಲು ಅವಕಾಶ ಕೊಡದೆ ಹಿಂದೂಗಳ ಶ್ರದ್ದೆಯ ಮೂಲಕ ಯಾವುದೇ ಗೊಂದಲ ಇಲ್ಲದೆ ಯಶಶ್ವಿಯಾಗಿ ಜರುಗಿತು.
ಎಂದು ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಚಿದಾನಂದ ಕಂದಡ್ಕ ತಿಳಿಸಿದರು, ಈ ಸಂದರ್ಭದಲ್ಲಿ ಪ್ರಮುಖರಾದ, ಶ್ರೀ ರಾಜೇಶ್ ಎನ್.ಎಸ್,ಶ್ರೀ ಕಿಶೋರ್ ಶಿರಾಡಿ, ಶ್ರೀ ಜಯಪ್ರಕಾಶ್ ಕುಜುಗೋಡು, ಶ್ರೀ ಪ್ರಸನ್ನ ದರ್ಬೆ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಶ್ರೀ ಮೋಹನದಾಸ್ ಕಾಣಿಯೂರು,ವಿನೋದ್ ಸುಬ್ರಮಣ್ಯ , ಶ್ರೀ ಪ್ರಮೋದ್ ರೈ ಕಡಬ ವಿಶ್ವಹಿಂದೂ ಶ್ರೀ ದಿನೇಶ್ ಸಂಪ್ಯಾಡಿ ,
ಶ್ರೀ ಅಚ್ಚುತ ಗೌಡ, ಶ್ರೀ ಮೋನಪ್ಪ ಮಾನಾಡು, ಶ್ರೀ ಮನೋಜ್ ಸುಬ್ರಮಣ್ಯ ಶ್ರೀ ಶ್ರೀಕುಮಾರ್ ಬಿಲದ್ವಾರ, ಶ್ರೀ ಚಂದ್ರಶೇಖರ ಮರ್ದಾಳ, ಶ್ರೀ ಗಿರೀಶ್ ಆಚಾರ್ಯ, ಲಕ್ಷ್ಮೀಶ್ ಇಜನಡ್ಕ, ಶ್ರೀಮತಿ ಶೋಭಾಗಿರಿಧರ್, ಶ್ರೀಮತಿ ವನಜ ವಿ ಭಟ್
ಶ್ರೀ ರಾಮಚಂದ್ರ ಸುಬ್ರಹ್ಮಣ್ಯ, ಶ್ರೀ ಬುಕ್ಷಿತ್ ನೇರ್ಪಾಡಿ, ಶ್ರೀ ವಿನೋದ್ ಕುಲ್ಕುಂದ, ಶ್ರೀ ರಾಧಾಕೃಷ್ಣ ಆರವಾರ, ಶ್ರೀ ದಿಲೀಪ್ ಉಪ್ಪಳಿಕೆ, ಉಪಸ್ಥಿತರಿದ್ದರು.