ಮಂಗಳೂರು: ಸಂತ್ರಸ್ತೆ ಪೂಜಾ ಆಚಾರ್ಯ ಮಗು ಕೃಷ್ಣ ಜೆ.ರಾವ್ ಅವರ ಮಗು ಎಂಬುದಾಗಿ ಡಿ ಎನ್ ಎ ರಿಪೋರ್ಟ್ ನಲ್ಲಿ ಸಾಬಿತ್ತಾದರು ಕೂಡ ಆರೋಪಿ ಕೃಷ್ಣ ನನ್ನ ಮಗು ಅಲ್ಲವೇ ಅಲ್ಲ ಎಂದು ಹೇಳುತ್ತಾನೆ. ಒಂದು ಬಡ ವರ್ಗದ ಮೇಲೆ ಅಧಿಕಾರಿ ವರ್ಗದವರ ಈ ರೀತಿಯ ನಡವಳಿಕೆ ಸರಿಯಲ್ಲ
ಮಗು ಹುಟ್ಟಿ ೬ ತಿಂಗಳು ಆದರೂ ಸಂತ್ರಸ್ತೆಯ ಮಗುವಿಗೆ ಇನ್ನೂ ನಾಮಕರಣವೇ ಆಗಿಲ್ಲ ಇದರಿಂದ ಮಗುವಿನ ಭವಿಷ್ಯಕ್ಕೆ ಕುತ್ತು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಹಿಂದೂಗಳ ಹೊನ್ನ ಕಲಶವೆಂದು ಕರೆಯಲ್ಪಡುವ ಪುತ್ತೂರಿನಲ್ಲಿ ಹಿಂದೂ ಯುವತಿಗೆ ಈ ರೀತಿಯಲ್ಲಿ ಆದ ಅನ್ಯಾಯವು ನಿಜಕ್ಕೂ ಮನಸಿಗೆ ನೋವನ್ನು ತರುತ್ತದೆ.
ಡಿ ಎನ್ ಎ ವರದಿಯಲ್ಲಿ ಮಗುವಿನ ಅಪ್ಪ ಕೃಷ್ಣನೇ ಎಂದು ಸಾಬೀತಾಗಿತ್ತು. ಆ ಕ್ಷಣ ನಾನು ಈ ಪ್ರಕರಣ ಸುಖಾಂತ್ಯವನ್ನು ಕಾಣುವುದಾಗಿ ವಿಶ್ವಾಸ ಇಟ್ಟಿದ್ದೆ . ಆದರೆ ಈ ಪ್ರಕರಣ ಬೇರೆಯೇ ತಿರುವನ್ನು ಪಡೆಯಿತ್ತು. ಆರೋಪಿ ಕೃಷ್ಣ ಜೆ.ರಾವ್ ನನ್ನ ಮಗು ಅಲ್ಲವೇ ಅಲ್ಲ ಎಂದು ಪಟ್ಟು ಹಿಡಿದ್ದಾನೆ . ಇದನ್ನು ಮನಗಂಡ ನಾನು ಎರಡು ಬಾರಿ ಜಗನ್ನಿವಾಸ ರಾವ್ ಅವರನ್ನು ಭೇಟಿಯಾಗಿದ್ದೇನೆ .ಆಗ ಅವರು ನನ್ನ ಮಗ ನನ್ನ ಮಾತನ್ನು ಕೇಳುವುದಿಲ್ಲ ಎಂಬುದಾಗಿ ಹೇಳಿದ್ದಾರೆ . ನನಗೆ ಹೋರಾಟ ಮಾಡಲು ಗೊತ್ತಿದೆ ಆದರೆ ಪ್ರಚಾರ ರಹಿತ ಸಂಧಾನಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಇದು ಯಾವಾಗ ಸಾಧ್ಯವಾಗದು ಎಂಬುದಾಗಿ ತಿಳಿಯಿತ್ತೋ ನಾನು ವಕೀಲರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದೇನೆ . ಈ ಕುರಿತು ಇನ್ನು ೩ ದಿನಗಳಲ್ಲಿ ನ್ಯಾಯ ತೀರ್ಮಾನ ಹೊರ ಬೀಳಲಿದೆ ಎಂದರು.
ಪೂಜಾ ಆಚಾರ್ಯರಿಗೆ ನ್ಯಾಯ ಸಿಗುವ ತನಕ ನಾನು ಅವರ ಜೊತೆಯಲ್ಲೇ ಇರುತ್ತೇನೆ ಎಂದು ಅವರು ಕುಟುಂಬಕ್ಕೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು . ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಯುವತಿ ಪೂಜಾ ಆಚಾರ್ಯ, ತಾಯಿ ನಮಿತಾ ಆಚಾರ್ಯ ಸಂಘದ ಸದಸ್ಯರಾದ ರಾಜೇಶ್ ಆಚಾರ್ಯ, ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.