ಮಂಗಳೂರು : ಯುನಿವೆಫ್ ಕರ್ನಾಟಕ ವತಿಯಿಂದ ಸೆಪ್ಟೆಂಬರ್ 19 ರಿಂದ ಜನವರಿ 2ರ ತನಕ ನಡೆಯಲಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು”ಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭವು ಜನವರಿ 2ರ ಶುಕ್ರವಾರ ಸಂಜೆ 6.45 ಕ್ಕೆ ನಗರದ ಪುರಭವನದಲ್ಲಿ ಜರಗಲಿದೆ ಎಂದು ಪ್ರವಾದಿ ಅಭಿಯಾನ ಕಾರ್ಯಕ್ರಮದ ಸಂಚಾಲಕರಾದ ಯು. ಕೆ. ಖಾಲಿದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮಪೀಠ, ಜಯಬಸವಾನಂದ ತಪೋವನದ ಡಾ. ಶ್ರೀ ಜಯಬಸವಾನಂದ ಸ್ವಾಮೀಜಿ, ಸಿ.ಆರ್.ಐ ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರುಗಳಾದ ರೆವೆರೆಂಡ್ ಡಾ. ಡೊಮಿನಿಕ್ ವಾಸ್, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಹಾಗೂ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ವಾರ್ತಾಭಾರತಿ ದೈನಿಕ ಇದರ ಪ್ರಧಾನ ಸಂಪಾದಕರಾದ ಜನಾಬ್ ಅಬ್ದುಸ್ಸಲಾಮ್ ಪುತ್ತಿಗೆ ಯವರು ವಹಿಸಲಿದ್ದಾರೆ. ಸಮಾರಂಭದಲ್ಲಿ ಸದ್ಭಾವನಾ ವೇದಿಕೆ, ಜೆಪ್ಪು ಇದರ ಅಧ್ಯಕ್ಷ ಹಾಗೂ ಯೋಗಗುರುಗಳಾದ ಶ್ರೀ ದಿವಾನ್ ಕೇಶವ ಭಟ್, ಎಸ್ ಡಿಪಿಐ ಇದರ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಇನಾಸ್ ರೋಡ್ರಿಗಸ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಬಿ ಇಬ್ರಾಹೀಮ್, ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಮತ್ತು ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ಇವರು ಗಣ್ಯ ಉಪಸ್ಥಿತಿಯಿರುವರು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಆಸಿಫ್, ಸಹ ಸಂಚಾಲಕರು ಪ್ರವಾದಿ ಅಭಿಯಾನ, ಉಬೈದುಲ್ಲಾ ಬಂಟ್ವಾಳ್ ಸಹ ಸಂಚಾಲಕರು ಪ್ರವಾದಿ ಅಭಿಯಾನ, ಅಬ್ದುಲ್ ರಶೀದ್.ಸದಸ್ಯರು, ಸಯೀದ್ ಅಹ್ಮದ್. ಸದಸ್ಯರು, ಶೇಕ್ ಅಹ್ಮದ್ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.